ಪುನೀತ್‌ ಕರೆಹಳ್ಳಿ ವಿರುದ್ಧ ರೌಡಿಶೀಟ್:‌ ವಿವರಣೆ ಕೇಳಿದ ಪೊಲೀಸ್‌ ಇಲಾಖೆ

ಕೊಲೆ ಕೇಸು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಪುನೀತ್‌ ಕೆರೆಹಳ್ಳಿ ವಿರುದ್ಧ ಪೊಲೀಸ್‌ ಇಲಾಖೆಯು ರೌಡಿಶೀಟ್‌ ತೆರೆಯುವ ಕುರಿತು ಪರಿಶೀಲಿಸುತ್ತಿದ್ದು ಈ ಸಂಬಂಧ ಪುನೀತ್‌ ಕೆರೆಹಳ್ಳಿಗೆ ಇಲಾಖೆ ನೋಟಿಸ್‌ ನೀಡಿ ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ಆರೋಪಿ ಪುನೀತನ ವಿರುದ್ಧ ಹಲವು ಪ್ರಕರಣಗಳಿದ್ದು ಅವುಗಳಲ್ಲಿ ದೊಂಬಿ, ಕೊಲೆ, ದರೋಡೆ ಮತ್ತು ಪ್ರಾಣ ಬೆದರಿಕೆಯಂತಹ ಆರೋಪಗಳೂ ಸೇರಿವೆ. ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಇದೇ ಕೆರೆಹಳ್ಳಿಯ ಹಳೆಯ ಕೇಸುಗಳ ಎಫ್‌ಐಆರ್‌ ಕಾಪಿ ವೈರಲ್‌ ಆಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆ ಆರೋಪ ಪಟ್ಟಿಯಲ್ಲಿ ಆತನ ಮೇಲೆ ಪಿಂಪ್‌ ಎನ್ನುವ ಆರೋಪ ಹೊರಿಸಲಾಗಿತ್ತು.

ಇತ್ತೀಚೆಗೆ ಗೋರಕ್ಷಣೆಯ ಹೆಸರಿನಲ್ಲಿ ಇದ್ರಿಸ್ ಪಾಷ ಎನ್ನುವ ದನದ ವ್ಯಾಪಾರಿಯನ್ನು ಕೊಂದ ಆರೋಪದಲ್ಲಿ ಜೈಲಿಗೆ ಹೋಗಿದ್ದು ಪ್ರಸ್ತುತ ಜಾಮೀನಿನ ಹೊರಗಿದ್ದಾನೆ.

ಈಗ ನೋಟೀಸ್‌ ನೀಡಿರುವ ಪೊಲೀಸರು ನಿಗದಿತ ದಿನಾಂಕದೊಳಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ರೌಡಿಶೀಟ್‌ ತೆರೆಯುವುದಾಗಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು