Home ಬ್ರೇಕಿಂಗ್ ಸುದ್ದಿ ರೈತ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ; ಪ್ರತಿ ಟನ್ ಕಬ್ಬಿಗೆ 3,200 ರೂ ನಿಗದಿ

ರೈತ ಹೋರಾಟಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ; ಪ್ರತಿ ಟನ್ ಕಬ್ಬಿಗೆ 3,200 ರೂ ನಿಗದಿ

0

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಬ್ಬಿನ ದರ ನಿಗದಿಯ ತೀರ್ಮಾನ ಕೈಗೊಂಡಿದ್ದಾರೆ. ಸಚಿವ ಸಂಪುಟ ದರ ನಿಗದಿ ಸಂಬಂಧ ಮುಖ್ಯಮಂತ್ರಿಗಳಿಗೇ ಪರಮಾಧಿಕಾರ ನೀಡಿದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಪ್ರತಿ ಟನ್ ಕಬ್ಬಿಗೆ 3,200 ರೂ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ.

ರೈತರ ಕಡೆಯಿಂದ 3,500 ರೂಪಾಯಿ ನಿಗದಿ ಮಾಡಬೇಕು ಎಂಬ ಒತ್ತಾಯದ ನಡುವೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ “ನಾನು ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಾವು 3,200 ರೂಪಾಯಿ ಪ್ರತಿ ಟನ್ ಕಬ್ಬಿಗೆ ನೀಡಲು ನಿರ್ಧರಿಸಿದ್ದೇವೆ. 11.25 ರಿಕವರಿ ಬಂದರೆ 3,500 ರೂಪಾಯಿ, 10.25 ರಿಕವರಿ ಬಂದರೆ 3,100 ರೂಪಾಯಿ ಪ್ರತಿ ಟನ್ ಗೆ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

“ನಮ್ಮ ಸರ್ಕಾರ ಯಾವತ್ತೂ ರೈತರ ಪರವಾಗಿರುವಂತದ್ದಾಗಿದೆ. ಸಕ್ಕರೆ ಕಾರ್ಖನೆಯು ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರುಗಳದ್ದಾಗಿದೆ. ಸತೀಶ್ ಜಾರಕಿಹೊಳಿ ಅವರು ಡಿಸಿ, ಎಸ್ಪಿಯನ್ನು ರೈತರೊಂದಿಗೆ ಮಾತನಾಡಲು ಕಳುಹಿಸಿದ್ದಾರೆ. ಅವರು ಹೋಗಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಮಾತನಾಡಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ಎಫ್‌ಆರ್ ಸಿ ದರ ನಿಗದಿ ಮಾಡುವುದಲ್ಲ. ಸಕ್ಕರೆ ಮೇಲಿನ ದರ ನಿಯಂತ್ರಣವನ್ನು ಮಾಡುವ ಕೆಲಸ ಮಾಡುತ್ತದೆ. 2017-18ರಲ್ಲಿ 17 ರಿಕವರಿ ಪ್ರಮಾಣವಿದ್ದರೇ, 2022-23ರಂದು 10.05ಕ್ಕೆ ಏರಿಕೆಯನ್ನು ಮಾಡಲಾಗಿದೆ. ಈಗ 10.25 ರಿಕವರಿ ಪ್ರಮಾಣ ನಿಗದಿ ಪಡಿಸಲಾಗಿದೆ. ಸಕ್ಕರೆ ಬೆಲೆಯನ್ನು 2019ರಲ್ಲಿ 35 ರೂಪಾಯಿ ಅವರೇ ನಿಗದಿ ಮಾಡಿದ್ದರು. ಅಂದಿನಿಂದ ಇಲ್ಲಿಯರೆಗೆ ಎಂಎಸ್ಪಿಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿಲ್ಲ ಎಂದರು.

ಸಕ್ಕರೆ ರಪ್ತು ಮಾಡುವುದನ್ನು ನಿಲ್ಲಿಸಲಾಗಿದೆ. ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮಾತ್ರವೇ ರಪ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ 41 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.

ನಾಳೆ 1 ಗಂಟೆಗೆ ರೈತ ಮುಖಂಡರ ಸಭೆಯನ್ನು ಕರೆಯಲಾಗಿದೆ. ಹಾವೇರಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ರೈತ ಮುಖಂಡ ಸಭೆಯನ್ನು ಕರೆಯಲಾಗಿದೆ. ಇದರ ಜೊತೆಗೆ ನಾಳೆಯೇ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದೇನೆ. ನನಗೆ ಭೇಟಿ ನೀಡಲು ಅವಕಾಶ ಮಾಡಿಕೊಡಲು ಪತ್ರ ಬರೆಯುತ್ತಿದ್ದೇನೆ. ಅವರು ತಕ್ಷಣ ಸಮಯ ನೀಡಿದರೇ ದೆಹಲಿಗೆ ತೆರಳಿ, ಅವರನ್ನು ಭೇಟಿ ಮಾಡಿ, ಪ್ರಧಾನ ಮಂತ್ರಿಗಳಿಗೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ರೈತರ ಪ್ರತಿಭಟನೆ ಬಗ್ಗೆ, ರೈತರ ಒತ್ತಾಯದ ಬಗ್ಗೆ ಚರ್ಚಿಸಲಾಗುವುದು ಎಂದರು.

You cannot copy content of this page

Exit mobile version