Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್‌ಎಸ್‌ಎಸ್‌ ಶಿಬಿರ: ದುರ್ಬಳಕೆಗೆ ಸರ್ಕಾರದ ಕುಮ್ಮಕ್ಕು

ರಾಜ್ಯ ಸರ್ಕಾರ ನಡೆಸುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ತನ್ನ ತಾಲೀಮು ಶಿಬಿರವನ್ನು ಹಮ್ಮಿಕೊಂಡಿದ್ದು ರಾಜಕೀಯ ಸಿದ್ದಾಂತ ಪ್ರಚಾರದ ಉದ್ದೇಶಕ್ಕೆ ಶಿಕ್ಷಣ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ಸರ್ಕಾರವೇ ಬೆಂಬಲ ಒದಗಿಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಕಲ್ಲಿ ಶಿರಸಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತಾಂಡಹಳ್ಳಿ ಮುರಾರ್ಜಿ ಶಾಲೆಯಲ್ಲಿ, ಮೇಲಿನಂತೆ ಶಿಬಿರ ನಡೆಸಲು ಸ್ಥಳಾವಕಾಶ ಕಲ್ಪಿಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಜಿಲ್ಲೆಯ ಸಮಾಜ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದಕ್ಕೆ ಸರ್ಕಾರವು ಕೂಡ ಸಮ್ಮತಿ ನೀಡಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕರಪತ್ರ

 ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೆ.ಜಿ.ಲಕ್ಷ್ಮೀಸಾಗರದಲ್ಲಿ (ಕೂತಾಂಡಹಳ್ಳಿ) ಅ.9 ರಿಂದ ಅ.17ರವರೆಗೆ ಆರ್‌ ಎಸ್‌ ಎಸ್‌ ನ ಕೋಲಾರ ವಿಭಾಗದ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗವು ನಡೆಯಲಿದ್ದು, ಈ ವರ್ಗದಲ್ಲಿ ಕರಾಟೆ, ದೊಣ್ಣೆವರೆಸೆ, ಯೋಗಾಸನ, ಇತ್ಯಾದಿ ಶಾರೀರಿಕ ಅಭ್ಯಾಸಗಳನ್ನು ಕಲಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ವಿಭಾಗ ಪ್ರಾಥಮಿಕ ಶಿಕ್ಷಾ ವರ್ಗದವರು ಹೊರಡಿಸಿರುವ ಕರಪತ್ರದಲ್ಲಿ ತಿಳಿಸಲಾಗಿದೆ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೂತಾಂಡಹಳ್ಳಿಯಲ್ಲಿರುವ ಕರ್ನಾಟಕ ಸರ್ಕಾರದ ಕ್ರೈಸ್ ಸಂಸ್ಥೆಯ ವಸತಿ ನಿಲಯವನ್ನು ನಾಳೆಯಿಂದ(ದಿ:9:10:2022 ರಿಂದ :17/10/2022ರ ವರಗೆ ) ಒಟ್ಟು 9 ದಿನಗಳ ಕಾಲ ಸಂಘ ಪರಿವಾರದ ತಾಲೀಮು ಶಿಬಿರ ನಡೆಸಲು ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೇ ವಸತಿ ಶಾಲೆಯನ್ನು ಹಿಂದುತ್ವ ಕಾರ್ಯಗಳಿಗೆ ಬಳಕೆಗೆ ಬಿಟ್ಟು ಕೊಡಲು ಶಿಫಾರಸ್ಸು ಮಾಡಿದ್ದಾರೆ.

ʼಆರ್‌ ಎಸ್‌ ಎಸ್‌ ಸಂಘಟನೆಯು ಹಿಂದುತ್ವ ರಾಜಕೀಯ ಸಿದ್ಧಾಂತ ಹೊಂದಿರುವ ಸಂಘಟನೆಯಾಗಿದ್ದು ದೇಶವನ್ನು ಮತ ಧರ್ಮಗಳ ಹೆಸರಿನಲ್ಲಿ ಛಿದ್ರಗೊಳಿಸುವ ಉದ್ದೇಶ ಹೊಂದಿರುವುದಲ್ಲದೇ ದೇಶಭಕ್ತಿಯ ಹೆಸರಿನಲ್ಲಿ ಅಮಾಯಕ ತರುಣರನ್ನು ವಿಚ್ಛಿದ್ರಕಾರಿ ಕೃತ್ಯಗಳಿಗೆ ಪ್ರೇರೇಪಣೆ ನಡೆಸುತ್ತದೆಯಾದ್ದರಿಂದ ಸರ್ಕಾರವೇ ಶಿಕ್ಷಣ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ಅವಕಾಶ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕುʼ ಎಂದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯದರ್ಶಿ ವಾಸುದೇವ ರೆಡ್ಡಿ ಆಗ್ರಹಿಸಿದ್ದಾರೆ. ʼಸರ್ಕಾರ ಅವಕಾಶ ನೀಡಿದಲ್ಲಿ ಶಿಬಿರ ನಡೆಯುವ ವಸತಿ ಶಾಲೆ ಎದುರು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದೇವೆʼ ಎಂದು ಸಹ ಅವರು ಎಚ್ಚರಿಕೆ ನೀಡಿದ್ದಾರೆ.

ದಲಿತ ಚಿಂತಕ ವಿಠ್ಠಲ ವಗ್ಗನ್‌ ಅವರು ತಮ್ಮ ಫೇಸ್ಬುಕ್‌ ಪುಟದಲ್ಲಿ ಪ್ರತಿಕ್ರಿಯಿಸಿ “ಸರಕಾರಿ ಶಾಲೆಗಳು ಮತ್ತು ಸರಕಾರಿ ವಸತಿ ನಿಲಯಗಳು ಆರ್‌ ಎಸ್‌ ಎಸ್‌ ತರಬೇತಿ ಕೇಂದ್ರಗಳಾಗಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಠ್ಠಲ ವಗ್ಗನ್‌ ಅವರು ಫೇಸ್ಬುಕ್‌ ನಲ್ಲಿ ಪ್ರತಿಕ್ರಿಯಿಸಿರುವುದು

Related Articles

ಇತ್ತೀಚಿನ ಸುದ್ದಿಗಳು