Saturday, June 21, 2025

ಸತ್ಯ | ನ್ಯಾಯ |ಧರ್ಮ

“ಸಂಘಿಗಳ ಕಣ್ಮಣಿ, ಮಿಣಿಮಿಣಿ ಕುಮಾರಣ್ಣ” : ಕಾಂಗ್ರೆಸ್ ಟೀಕೆ

“ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಹೆಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ!” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

“ಸಂಘಿಗಳ ಕಣ್ಮಣಿಯಾಗಲು ಹೊರಟಿರುವ ಮಿಣಿ ಮಿಣಿ ಕುಮಾರಣ್ಣರಿಗೆ ಪಾಕಿಸ್ತಾನದ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ! ಈ ಪಾಕ್ ಜೀನ್ ನವರೊಂದಿಗಿನ ಪ್ರೇಮ ಮೂಡಿದ್ದರಿಂದಲೇ ಕುಮಾರಸ್ವಾಮಿಯವರಿಗೆ ರಾಷ್ಟ್ರಧ್ವಜದ ಮೇಲೆ ದ್ವೇಷ ಮೂಡಿದೆ” ಎಂದು ಈ ಹಿಂದೆ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಮಾಡಿರುವ ಟೀಕೆಯ ಟ್ವಿಟ್ ನ್ನು ಉಲ್ಲೇಖಿಸಿ ಕಾಂಗ್ರೆಸ್ ಟೀಕಿಸಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಪಕ್ಷದ ವಿರುದ್ಧ ಮಾಡಿದ ಟ್ವಿಟ್ ಹಾಗೂ ಫೇಸ್ಬುಕ್ ಪೋಸ್ಟ್ ಗಳ ಉತ್ಕನನ ನಡೆಸಿರುವ ಕರ್ನಾಟಕ ಕಾಂಗ್ರೆಸ್ ಈಗ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.

“RSS ನಿಂದ ಸ್ವಾಗತ ಪಡೆಯುವ ದುಸ್ಥಿತಿ ನನಗೆ ಬಂದಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಈಗ ಅದೇ RSS ನ ಗೇಟ್ ಕೀಪರ್ ಆಗಿ, ವಿನಮ್ರ ಸೇವಕನಾಗಿ ಹಸಿರು ಶಾಲನ್ನು ಕಿತ್ತೆಸೆದು ಕೇಸರಿ ಶಾಲು ಹಾಕಿಕೊಂಡಿದ್ದೀರಿ. ಇದು ನಿಮಗೆ ದುಸ್ಥಿತಿ ಬಂದಿದ್ದರ ಸಂಕೇತವಲ್ಲವೇ? ವಯಸ್ಸಾದ ದೇವೇಗೌಡರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಅಲೆಯುತ್ತಿರುವುದು ನಿಮಗೊದಗಿದ ದುಸ್ಥಿತಿಯ ದ್ಯೋತಕವಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page