Home ರಾಜ್ಯ ದಕ್ಷಿಣ ಕನ್ನಡ ಮಾರಾಕಾಸ್ತ್ರ ಪ್ರದರ್ಶನದ ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡಿದ್ದ RSS ಯುವಕರ ಬಂಧನ

ಮಾರಾಕಾಸ್ತ್ರ ಪ್ರದರ್ಶನದ ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡಿದ್ದ RSS ಯುವಕರ ಬಂಧನ

0

ಪುತ್ತೂರು: ವಾಟ್ಸಪ್‌ ಸ್ಟೇಟಸ್‌ ನಲ್ಲಿ ಮಾರಕಾಯುಧವಾದ ತಲ್ವಾರ್ ಹಿಡಿದುಕೊಂಡು ಪೋಸು ಕೊಟ್ಟಿದ್ದ ಸಂಘಪರಿವಾರದ ಇಬ್ಬರು ಕಾರ್ಯಕರ್ತರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿದ್ದಾರೆ..

ಬಂಧಿತರನ್ನು ಪುತ್ತೂರು ತಾಲೂಕಿನ ಕುರಿಯದ ಕಟ್ಟದ ಬೈಲಿನ ಸುಜಿತ್, ಆರ್ಯಾಪುವಿನ ಮರಿಕೆಯ ಪುಟ್ಟಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ತಲವಾರು ಹಿಡಿದಿರುವ ಫೊಟೋ ಹಾಕಿ ಈಗ ನಮ್ಮ ಸಮಯ ಎಂದು ಶೀರ್ಷಿಕೆ ಹಾಕಿಕೊಂಡಿದ್ದರು.

ಆರೋಪಿಗಳು ತಲ್ವಾರ್ ಹಿಡಿದು ಫೊಟೋ ತೆಗೆದು ಅದನ್ನು ವಾಟ್ಸಪ್‌ನಲ್ಲಿ ಬುಧವಾರ ಸಂಜೆ ಅಪ್ಲೋಡ್ ಮಾಡಿದ್ದರು. ಈ ಫೊಟೋ ಸಾಕಷ್ಟು ವೈರಲ್ ಆಗಿತ್ತು. ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಡರಾತ್ರಿ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಪೈಕಿ ಓರ್ವನಾದ ಸುಜಿತ್ ಅವರು ಈ ಹಿಂದೆ ಹಿಂದೂ ಜಾಗರಣಾ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

You cannot copy content of this page

Exit mobile version