ಷೇರು ಮಾರುಕಟ್ಟೆಯ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ (ನವೆಂಬರ್ 8, 2024) ಅಮೇರಿಕದ ಡಾಲರ್ ಎದುರು ರೂಪಾಯಿಯು ಸಾರ್ವಕಾಲಿಕ ಕನಿಷ್ಠ 84.37 ಕ್ಕೆ ಕುಸಿದಿದೆ. ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ಗಣನೀಯ ಕುಸಿತಕ್ಕೆ ಇಂದಿನ ಷೇರು ಮಾರುಕಟ್ಟೆ ಸಾಕ್ಷಿಯಾಗಿದೆ.
ಬಡ್ಡಿದರಗಳನ್ನು ಕಡಿತಗೊಳಿಸುವ US ಫೆಡರಲ್ ರಿಸರ್ವ್‌ನ ಇತ್ತೀಚಿನ ನಿರ್ಧಾರವು ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಂಡಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ. ಇದಲ್ಲದೆ, ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಮತ್ತು ವ್ಯಾಪಾರ ನೀತಿಗಳು ಜಾಗತಿಕ ಮಾರುಕಟ್ಟೆಗಳ ಮೇಲೆ ತೀವ್ರ ಪ್ರಭಾವ ಬೀರುವುದರೊಂದಿಗೆ, ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಾಣಬಹುದು ಎನ್ನಲಾಗಿದೆ.
ಗುರುವಾರದ ದಿನದ ಅಂತ್ಯಕ್ಕೂ, ರೂಪಾಯಿ 1 ಪೈಸೆ ಕುಸಿದು ಯುಎಸ್ ಡಾಲರ್ ಎದುರು 84.32 ರ ಹೊಸ ಜೀವಮಾನದ ಕನಿಷ್ಠ ಮಟ್ಟಕ್ಕೆ ತಲುಪಿದೆ.
ರೂಪಾಯಿ ಮೌಲ್ಯ ಈ ವರ್ಷ ಶೇ.10ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದು, ಇದರಿಂದಾಗಿ ರೂಪಾಯಿ ಮೌಲ್ಯ (82.33) ಡಾಲರ್ ಎದುರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.