ಹಾಸನ: ಅದಿ ದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಮುಗಿದು 12 ಕೋಟಿ 69 ಲಕ್ಷ ಆದಾಯ ಈ ಬಾರಿ ಬಂದಿದ್ದು, ನಂತರ ಐದು ದಿನಗಳೆ ಕಳೆದರೂ ದೇವಿಯ ಗರ್ಭ ಗುಡಿ ಬಾಗಿಲು ಮುಂದೆ ಹಾಗೂ ಹೊರಗೆಕಸದ ರಾಶಿ ರಾಶಿ ಬಿದ್ದು ಕೊಳೆತು ನಾರುತ್ತಿದ್ದರೂ ಸ್ವಚ್ಛತೆ ಬಗ್ಗೆ ಯಾರು ಗಮನ ಕೊಟ್ಟಿರುವುದಿಲ್ಲ. ಇದನ್ನು ಕಂಡ ಭಕ್ತರು ಬೇಸರವ್ಯಕ್ತಪಡಿಸಿದ್ದಾರೆ.
ಹಾಸನಾಂಬೆ ಬಾಗಿಲು ತೆಗೆಯುವ ಮೊದಲು ಅಧಿಕಾರಿ ವರ್ಗ, ರಾಜಕಾರಣಿಗಳು ಎಲ್ಲಾ ಸೇರಿ ಸಭೆ ಮಾಡಿ ಈ ದೇವಸ್ಥಾನದಿಂದ ಜನರು ಬರುವ ನಿರೀಕ್ಷೆ ಹಾಗೂ ಆದಾಯದ ಲೆಕ್ಕಚಾರವೆ ಹೆಚ್ಚು ಹಾಕುತ್ತಿದ್ದರು. ಬಾಗಿಲು ತೆಗೆದ ಮೇಲೆ ಅವರ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಬಂದು ದೇವಿ ದರ್ಶನ ಮಾಡಿದಲ್ಲದೇ ಅವರಿಂದ ಟಿಕೆಟ್ ಖರೀದಿ, ಲಾಡು ಖರೀದಿ, ಹಾಗೂ ಭಕ್ತಿಯಿಂದ ಹಾಕಿದ ಕಾಣಿಕೆಯು ಹೆಚ್ಚಾಗಿಯೇ ಹರಿಯಿತು.
ಅಕ್ಟೋಬರ್ ೨೪ಕ್ಕೆ ಬಾಗಿಲು ತೆಗೆದು ನವೆಂಬರ್ ೩ಕ್ಕೆ ಗರ್ಭಗುಡಿ ಬಾಗಿಲು ಹಾಕಲಾಯಿತು. ಈ ವೇಳೆ ಭಕ್ತರಿಂದ ಬಂದ ಎಲ್ಲಾ ಸೇರಿ ಬರಾಬರಿ ೧೨ ಕೋಟಿ ೬೩ ಲಕ್ಷ ೮೩ ಸಾವಿರದ ೮೦೮ ರೂಗಳ ಸಂಗ್ರಹವಾಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಇತಿಹಾಸದಲ್ಲೆ ಈ ವರ್ಷ ಮತ್ತು ಹೊಸ ದಾಖಲೆ ನಿರ್ಮಾಣ ಮಾಡಿರುವುದು ಸಂತೋಷದ ವಿಚಾರ.
ಆದರೇ ಬಾಗಿಲು ಹಾಕಿದ ನಂತರ ಕಾಣಿಕೆ ಹುಂಡಿ ಲೆಕ್ಕಚಾರ ಆಗುವವರೆಗೂ ದೇವಾಲಯದ ಬಗ್ಗೆ ಇದ್ದ ಆಸಕ್ತಿ ನಂತರ ಈ ದೇವಸ್ಥಾನದ ಬಗ್ಗೆ ಇಲ್ಲಿ ಕೇಳುವವರು ಯಾರು ಇಲ್ಲ. ಇನ್ನು ದೇವಾಲಯದ ಮುಂದೆ ಕೊಳೆತು ನಾರುತ್ತಿರುವ ಹೂವುಗಳು, ಬಾಳೆದಿಂಡು, ಅಲಂಕಾರಿಕ ಗಿಡ, ಪ್ಲಾಸ್ಟಿಕ್ ಕವರ್, ೧ ಸಾವಿರ ಮತ್ತು ೩ ಸಾವಿರದ ಟಿಕೆಟ್ ಹರಿದು ಹಾಕಿರುವುದು, ಕಾಯಿ ಸಿಪ್ಪೆ, ಉದ್ಬತಿ ಕವರ್ ಸೇರಿದಂತೆ ಇತರೆ ತ್ಯಾಜ್ಯಗಳು ಇಲ್ಲಿವೆ.
ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಬರುವ ಭಕ್ತರು ಈ ಕಸವನ್ನು ನೋಡಿ ಒಂದು ಕಡೆ ಹಿಡಿ ಶಾಪ ಹಾಕಿದರೇ ಇನ್ನೊಂದು ಕಡೆ ಭಕ್ತರೆ ಮರುಗುತ್ತಿದ್ದಾರೆ. ದೇವಾಲಯದ ಒಳಗೆ ಕೊಳೆತು ನಾರುತ್ತಿರುವ ಕಸದ ರಾಶಿ, ಇನ್ನು ಸರದಿ ಸಾಲಿನಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ಉದ್ದಲಕ್ಕೂ ಕಸ ಕಸ. ಇದು ಯಾರಿಗೂ ಕಾಣಿಸಲಿಲ್ಲವೇ? ಹಾಸನಾಂಬೆ ದೇವಸ್ಥಾವನ್ನು ಕೇವಲ ಲಾಭದ ದೃಷ್ಠಿಯಲ್ಲಿ ನೋಡದೇ ಸ್ವಚ್ಛತೆಗೂ ಕೂಡ ಹೆಚ್ಚಿನ ಆಧ್ಯತೆ ಕೊಡಬೇಕು ಎಂಬುದು ಭಕ್ತ ಸಮೂಹದ ಮನವಿ ಆಗಿದೆ.