ಸಾವಿಗೀಡಾದ ಕುಟುಂಬಗಳಿಗೆ ಸಿದ್ದರಾಮಯ್ಯರಿಂದ ಸಾಂತ್ವನ

ಬೆಂಗಳೂರು: ಸಿದ್ದರಾಮಯ್ಯ ಅವರ 75 ನೇ ಜನ್ಮದಿನೋತ್ಸವಕ್ಕೆ ಬರುವಾಗ ಮತ್ತು ವಾಪಸು ತೆರಳುವ ಸಂದರ್ಭದಲ್ಲಿ ವಾಹನ ಅಪಘಾತದಿಂದ ಸಾವಿಗೀಡಾದ ಅಭಿಮಾನಿಗಳ ಕುಟುಂಬಗಳಿಗೆ ಖುದ್ದು ಬೇಟಿ ನೀಡಿ ಸಾಂತ್ವನ ಹೇಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಸಾವಿಗೀಡಾದ ಇಬ್ಬರೂ ಅಭಿಮಾನಿಗಳ ಮನೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದೇನೆ, ಇವರ ಸಾವು ನನ್ನ ಮನಸ್ಸಿಗೆ ತೀವ್ರ ಘಾಸಿ ಉಂಟುಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುತ್ತೇನೆ’ ಎಂದು ಹಂಚಿಕೊAಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು