Friday, June 14, 2024

ಸತ್ಯ | ನ್ಯಾಯ |ಧರ್ಮ

ಸುಪ್ರೀಂ ಕೋರ್ಟ್‌ ತೀರ್ಪು ಸಮಲಿಂಗಿಗಳನ್ನು ಅಪ್ರಾಮಾಣಿಕವಾಗಿ ಬದುಕುವಂತೆ ಮಾಡುತ್ತದೆ: ಮರುಪರಿಶೀಲನಾ ಅರ್ಜಿ

ಬೆಂಗಳೂರು,ಅಕ್ಟೋಬರ್.‌02: ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ “ಉದೇಶಪೂರ್ವಕ ಹತ್ತಿಕ್ಕುವಿಕೆ”ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.

“ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ” ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಅವರ ನೇತೃತ್ವದ ಎಸ್.ಕೆ. ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ  ಅಕ್ಟೋಬರ್ 17ರಂದು ನೀಡಿದ ತೀರ್ಪಿನಲ್ಲಿ ಮದುವೆಯಾಗುವ ಹಕ್ಕು ಮೂಲಭೂತ ಹಕ್ಕಲ್ಲ ಮತ್ತು ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ವಿಶೇಷ ವಿವಾಹ ಕಾಯಿದೆಯ (Special Marriage Act – SMA)  ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿತ್ತು. ಸಮಲೈಂಗಿಕ ವಿವಾಹವನ್ನು ಅಂಗೀಕರಿಸುವ ವಿಶೇಷ ಹಕ್ಕು ಇರುವುದು ಸಂಸತ್ತಿಗೆ ಎಂದು ತಿಳಿಸಿತ್ತು.

3:2 ಅಭಿಪ್ರಾಯದ ಈ ತೀರ್ಪಿನಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕ್ವೀರ್ ಸಮುದಾಯದ ಹಕ್ಕನ್ನು ಕೂಡ ಪೀಠವು ನಿರಾಕರಿಸಿತ್ತು. ನ್ಯಾಯಮೂರ್ತಿಗಳಾದ ಭಟ್, ಕೊಹ್ಲಿ ಮತ್ತು ನರಸಿಂಹ ಅವರು ಈ ಅಭಿಪ್ರಾಯಕ್ಕೆ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಮೂಲ ತೀರ್ಪನ್ನು ನೀಡಿದ ಅದೇ ಪೀಠ ಚೇಂಬರ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಕೂಡ ಆಲಿಸಲಿದೆ. ನ್ಯಾಯಮೂರ್ತಿ ಭಟ್ ಅವರು ನಿವೃತ್ತರಾಗಿರುವ ಕಾರಣ ಸಿಜೆಐ ಪೀಠಕ್ಕೆ ಹೊಸ ಸದಸ್ಯರೊಬ್ಬರನ್ನು ನೇಮಿಸಬೇಕಾಗುತ್ತದೆ. ಒಂದು ವೇಳೆ ಹೊಸ ಸದಸ್ಯರು ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಒಪ್ಪಿಕೊಂಡರೆ, ಮುಂದೆ ಮುಕ್ತ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು.

ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು ಶಾಸನಬದ್ಧ ಕಾನೂನಾಗಿರುವ ಎಸ್‌ಎಂಎ ಅಡಿಯಲ್ಲಿ ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯಕ್ಕೆ ಏಕೆ ಅಧಿಕಾರ ನೀಡಿಲ್ಲ ಎಂಬುದರ ಕುರಿತು ವಿವರವಾದ ಅಭಿಪ್ರಾಯಗಳನ್ನು ಬರೆದಿದ್ದರೂ ಸಹ, ಮರುಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ವ್ಯಾಪಕವಾಗಿ ಉಲ್ಲೇಖಿಸುತ್ತದೆ.

ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ನ್ಯಾಯಾಲಯದ್ದು, ಸರ್ಕಾರದ್ದಲ್ಲ!

ಕ್ವೀಯರ್ ಸಮುದಾಯದ ನಾಲ್ವರು ಸಲ್ಲಿಸಿರುವ ಈ ಅರ್ಜಿಯ ಪ್ರಕಾರ, ಬಹುಮತದ ತೀರ್ಪು ತಪ್ಪಾಗಿದೆ ಏಕೆಂದರೆ ತಾರತಮ್ಯ ಮಾಡುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಒಪ್ಪಿಕೊಂಡರೂ, ತಾರತಮ್ಯವನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ.

ಬಹುಮತದ ಅಭಿಪ್ರಾಯವು ಸಮಾನತೆ ಮತ್ತು ತಾರತಮ್ಯದ ವಿರುದ್ಧದ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಹೇಳಿದ್ದರೂ ಸಹ, ತಾರತಮ್ಯವನ್ನು ತಡೆಯುವ ತಾರ್ಕಿಕ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರ ಬದಲಾಗಿ ತಾರತಮ್ಯದ ಪರಿಶೀಲನೆ ನಡೆಸಿ, ಶಿಫಾರಸ್ಸುಗಳನ್ನು ಮಾಡಲು “ಪ್ರತಿವಾದಿಯನ್ನು (ಸರ್ಕಾರ)”ಗೆ ಹೇಳಲಾಗಿದೆ.

“ಇದು ಸ್ಪಷ್ಟವಾದ ದೋಷವಾಗಿದ್ದು, ಗೌರವಾನ್ವಿತ ನ್ಯಾಯಾಲಯ ಸಂವಿಧಾನ ತನಗೆ ವಹಿಸಿದ ಕರ್ತವ್ಯಗಳಿಂದ ಹಿಂದೆ ಸರಿದಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಮೊದಲ ಕೆಲಸ ನ್ಯಾಯಾಲಯದ್ದೇ ಹೊರತು, ಸರ್ಕಾರವನ್ನಲ್ಲ,” ಎಂದು ಈ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಸಲಿಂಗ ವಿವಾಹ | ಅಕ್ಟೋಬರ್ 17ರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ

ಮರುಪರಿಶೀಲನಾ ಅರ್ಜಿಯಲ್ಲಿ ತೀರ್ಪಿನಲ್ಲಿ ʼಮದುವೆʼಯನ್ನು ಅರ್ಥೈಸುವಲ್ಲಿ ಆಗಿರುವ “ಸ್ವಯಂ-ವಿರೋಧಾಭಾಸʼವನ್ನೂ ಉಲ್ಲೇಖಿಸಲಾಗಿದೆ. ವಿಶೇಷ ವಿವಾಹ ಕಾಯ್ದೆ ಮದುವೆಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡುತ್ತದೆ ಎಂದು ತೀರ್ಪು ಒಪ್ಪಿಕೊಂಡರೂ, ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ನೀಡುತ್ತದೆ ಎಂದು ಅದು ಹೇಳಿದೆ.

ಅರ್ಜಿಯ ಪ್ರಕಾರ, ಮದುವೆಯ ನಿಯಮಗಳನ್ನು ನಿರ್ದೇಶಿಸುವುದು ಸ್ಟೇಟಿನದ್ದಾದರೂ, ಮದುವೆಯ ಸ್ಥಿತಿಯ ಬಗ್ಗೆ ಇನ್ನೂ ರಾಜ್ಯಗಳು ಏನನ್ನೂ ನೀಡಿಲ್ಲ ಎಂಬುದನ್ನು ತೀರ್ಪು ಒಪ್ಪಿಕೊಂಡಿದೆ.

ಬಹುಪಾಲು ತೀರ್ಪು ಮದುವೆಯನ್ನು ಜಾರಿಗೊಳಿಸಬಹುದಾದ ಸಾಮಾಜಿಕ ಒಪ್ಪಂದವಾಗಿದೆ ಎಂದು ಕಡೆಗಣಿಸುತ್ತದೆ. ಅವನು/ಅವಳು/ಅವರ ನಂಬಿಕೆ ಏನೇ ಆಗಿದ್ದರೂ ಅಂತಹ ಒಪ್ಪಂದದ ಹಕ್ಕನ್ನು ಹೊಂದುವ ಸಾಮರ್ಥ್ಯ ವಯಸ್ಕರಿಗಿದೆ.

“ಮದುವೆ ಎಂದರೆ ಏನೆಂದು ಯಾವುದೇ ಗುಂಪಿನ ಜನರು ಇನ್ನೊಂದು ಗುಂಪಿಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಯಾವುದೇ ಒಪ್ಪಂದ, ಅಥವಾ ಜೈಲು ಶಿಕ್ಷೆಯಂತಹ ಬಲವಂತದ ಕ್ರಮದಿಂದ ಮದುವೆಯಾಗಲು ಬಯಸುವ ವಯಸ್ಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ”ಎಂದು ಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿದೆ.

ಅರ್ಜಿಯಲ್ಲಿ ಇರುವ ಇನ್ನೊಂದು ಅಂಶವೆಂದರೆ, 1948 ರಲ್ಲಿ ಭಾರತದ ಅಭಿಪ್ರಾಯಗಳನ್ನೂ ಒಳಗೊಂಡು ರಚನೆಯಾದ  ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights) ನಿರ್ಲಕ್ಷ್ಯ.

ವಿಶ್ವಸಂಸ್ಥೆಯು ಅಂಗೀಕರಿಸಿದ ಈ ಘೋಷಣೆ ಪ್ರಕಾರ ಪೂರ್ಣ ವಯಸ್ಸಿನ ಪುರುಷರು ಮತ್ತು ಮಹಿಳೆಯರು, ಜನಾಂಗ, ರಾಷ್ಟ್ರೀಯತೆ ಅಥವಾ ಧರ್ಮದ ಯಾವುದೇ ಮಿತಿಯಿಲ್ಲದೆ, ಮದುವೆಯಾಗಲು ಮತ್ತು ಕುಟುಂಬವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಈ ಘೋಷಣೆಯು ಭಾರತೀಯ ಸಂವಿಧಾನದ ಭಾಗ III ರಲ್ಲಿ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.

ಮರುಪರಿಶೀಲನಾ ಅರ್ಜಿಯ ಪ್ರಕಾರ, ” ಸುಪ್ರೀಂ ಕೋರ್ಟ್ ಭಾರತದ ಸಂವಿಧಾನವು ಮದುವೆಯಾಗಲು, ಕುಟುಂಬವನ್ನು ಕಂಡುಕೊಳ್ಳಲು ಯಾವುದೇ ಮೂಲಭೂತ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂಬ ತಣ್ಣನೆಯ ಘೋಷಣೆಯನ್ನು ಮಾಡುವಾಗ” ಮಾಡಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ನಿರ್ಲಕ್ಷಿಸಿದೆ.

ಇದಲ್ಲದೆ, ಬಹುಮತದ ತೀರ್ಪಿನಲ್ಲಿ ಅರ್ಜಿದಾರರ ಬೇಡಿಕೆಯನ್ನು ಓಡಾಡುವ ಹಕ್ಕನ್ನು ಜಾರಿಗೊಳಿಸಲು “ರಸ್ತೆ ನಿರ್ಮಾಣ (construction of road )” ಮಾಡುವ ಮನವಿಗೆ ಮತ್ತು ಕವಿಗೆ ತನ್ನ ಕವಿತೆಗಳನ್ನು ಪ್ರಕಟಿಸಲು ಪ್ಲಾಟ್‌ಫಾರ್ಮ್‌ (platform) ರಚಿಸುವ “ತಪ್ಪಾದ ಹೋಲಿಕೆಯನ್ನು ಮಾಡಲಾಗಿದೆ” ಎಂದು ಮನವಿ ಸೇರಿಸಲಾಗಿದೆ. ಈ ಎರಡೂ ಪದಗಳನ್ನು ಶಾಸಕಾಂಗದ ಫ್ರೇಮ್‌ವರ್ಕ್‌ ಇಲ್ಲದೆ ಸಮಲೈಂಗಿಕ ವಿವಾಹವನ್ನು ಹಕ್ಕನ್ನಾಗಿ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳುವಾಗ ಈ ಎರಡು ಪದಗಳನ್ನು ನ್ಯಾಯಮೂರ್ತಿ ಭಟ್‌ ಉಲ್ಲೇಖಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು