ಸಮುದ್ರದಲ್ಲಿ ಈಜಲು ಹೊರಟ 3 ಜನ ವಿದ್ಯಾರ್ಥಿಗಳ ಸಾವು

ಉಡುಪಿ : ಈಜಲು ಹೊರಟ ಮಣಿಪಾಲ ವಿದ್ಯಾರ್ಥಿಗಳಲ್ಲಿ ಮೂರು ಜನ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿಯ ಹೂಡಿ ಬೀಚ್‌ನಲ್ಲಿ ನಡೆದಿದೆ.

ಪ್ರವಾಸಕ್ಕೆಂದು ಬಂದ 15 ಜನ ಮಣಿಪಾಲ ವಿದ್ಯಾರ್ಥಿಗಳು ನೆನ್ನೆ ಸಂಜೆ ಹೂಡಿ ಬೀಚ್‌ನಲ್ಲಿ ಈಜಲೆಂದು ಹೊರಟಿದ್ದರು. ಈ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಮೂರು ಜನ ವಿದ್ಯಾರ್ಥಿಗಳು ಸಿಲುಕಿ ಕೂಡಲೆ ಅಲ್ಲಿನವರು ಇಬ್ಬರನ್ನು ರಕ್ಡಿಸಿ ಹೊರಕ್ಕೆ ತರಲಾಗಿತ್ತು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆಂದು ಕೊಂಡೊಯ್ಯುವಾಗ ದಾರಿ ಮದ್ಯೆ ಇಬ್ಬರೂ ಮೃತ ಪಟ್ಟಿದ್ದಾರೆ ಶ್ರೀಕರ್‌ ಎಂಬ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆಯೇ ಕೊಚ್ಚಿಹೋಗಿದ್ದು ನಾಪತ್ತೆಯಾಗಿದ್ದ. ಪೋಲೀಸರು ಆತನಿಕಗೋಸ್ಕರ ನೆನ್ನೆಯಿಂದ ತೀವ್ರ ಹುಡುಕಾಟ ನಡೆಸುತ್ತಿದ್ದರು . ಇಂದು ಮುಂಜಾನೆ ಶ್ರೀಕರ್‌ನ ಮೃತ ದೇಹ ಪತ್ತೆಯಾಗಿದೆ  ಎಂದು ಪೋಲಿಸರು ತಿಳಿಸಿದ್ದಾರೆ.

ನಿಶಾಂತ್(21)‌, ಷಣ್ಮುಗ(21) ಮತ್ತು ಶ್ರೀಕರ್‌(21) ಮೃತ ದುರ್ದೈವಿಗಳಾಗಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು