Home ದೇಶ ಮಾನನಷ್ಟ ಪ್ರಕರಣ| ಸಂಸದ ಸಂಜಯ್ ರಾವುತ್ ಅವರಿಗೆ 15 ದಿನಗಳ ಜೈಲು ಶಿಕ್ಷೆ

ಮಾನನಷ್ಟ ಪ್ರಕರಣ| ಸಂಸದ ಸಂಜಯ್ ರಾವುತ್ ಅವರಿಗೆ 15 ದಿನಗಳ ಜೈಲು ಶಿಕ್ಷೆ

0

ಬಿಜೆಪಿಯ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕುರಿತು ಮುಂಬೈ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಶಿವಸೇನೆ (ಯುಬಿಟಿ) ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮುಂಬೈ ನ್ಯಾಯಾಲಯವು ಸೆಕ್ಷನ್ 500 ರ ಅಡಿಯಲ್ಲಿ ಸಂಜಯ್ ರಾವುತ್ ಅವರನ್ನು ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿತು. ಮೇಲಾಗಿ ರೂ.25 ಸಾವಿರ ದಂಡವನ್ನೂ ವಿಧಿಸಲಾಗಿದೆ.

ಕಿರೀಟ್ ಸೋಮಯ್ಯ ಅವರ ಕುಟುಂಬ ಸದಸ್ಯರು ದತ್ತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆದರೆ ಮುಂಬೈನ ಉಪನಗರದಲ್ಲಿರುವ ಮೀರಾ ಭಯ್ಯಾದರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ 100 ಕೋಟಿ ರೂ.ಗಳ ಶೌಚಾಲಯ ಹಗರಣ ನಡೆದಿದೆ ಎಂದು ಆರೋಪಿಸಿ ಶಿವಸೇನೆಯ ಸಾಮ್ನಾ ನಿಯತಕಾಲಿಕೆಯಲ್ಲಿ ಸರಣಿ ಲೇಖನಗಳು ಪ್ರಕಟವಾಗಿವೆ. ಅದಕ್ಕೂ ಮೊದಲು, ಸೋಮಯ್ಯ ಅವರ ಕುಟುಂಬ ನಡೆಸುತ್ತಿರುವ ಚಾರಿಟಿಗೂ ಇದರಲ್ಲಿ ಪಾಲು ಸಿಕ್ಕಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದರು.

ಈ ವಿಷಯವಾಗಿ ಮೇಧಾ ಸೋಮಯ್ಯ ಅವರು ಏಪ್ರಿಲ್ 2022ರಲ್ಲಿ ಸಂಜಯ್ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಶಿವಸೇನೆಯ ಸಾಮ್ನಾ ನಿಯತಕಾಲಿಕೆಯಲ್ಲಿ ಶೌಚಾಲಯ ಹಗರಣದ ಹೆಸರಿನಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬರುತ್ತಿರುವ ಲೇಖನಗಳು ತಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ ಎಂದು ದೂರಿನಲ್ಲಿ ಹೇಳಲಾಗಿತ್ತು. ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುವಂತೆ ಹಾಗೂ ವೈಯಕ್ತಿಕವಾಗಿ ತನಗೆ ತೊಂದರೆಯಾಗುವಂತಹ ಲೇಖನಗಳನ್ನು ಪ್ರಕಟಿಸದಂತೆ ಆದೇಶ ನೀಡುವಂತೆ ತಮ್ಮ ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮುಂಬೈ ಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಿ ತನ್ನ ತೀರ್ಪು ನೀಡಿದೆ.

You cannot copy content of this page

Exit mobile version