Home ರಾಜಕೀಯ ತನಿಖಾ ಸಂಸ್ಥೆಗಳು ನೀಡಿರುವ ಸಮನ್ಸ್‌ಗಳಷ್ಟು ಶಾಲೆಗಳನ್ನ ತೆರೆಯಲಾಗುವುದು: ಅರವಿಂದ್‌ ಕೇಜ್ರಿವಾಲ್

ತನಿಖಾ ಸಂಸ್ಥೆಗಳು ನೀಡಿರುವ ಸಮನ್ಸ್‌ಗಳಷ್ಟು ಶಾಲೆಗಳನ್ನ ತೆರೆಯಲಾಗುವುದು: ಅರವಿಂದ್‌ ಕೇಜ್ರಿವಾಲ್

0

ದೆಹಲಿ: ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿ ನಮ್ಮದು,
ಕೇಂದ್ರ ತನಿಖಾ ಸಂಸ್ಥೆಗಳು ಇಂದಿನವರೆಗೂ ತಮ್ಮ ವಿರುದ್ಧ ನೀಡಿರುವ ಸಮನ್ಸ್‌ ಗಳಷ್ಟು ಶಾಲೆಗಳನ್ನು ದೆಹಲಿಯಲ್ಲಿ ತೆರೆಯಲಾಗುವುದು ಎಂದು ಅರವಿಂದ್‌ ಕೇಜ್ರಿವಾಲ್‌ ಅವರು ಶುಕ್ರವಾರದಂದು ಹೇಳಿದ್ದಾರೆ.

ಮಯೂರ್‌ ವಿಹಾರ ಸರ್ಕಾರಿ ಕಟ್ಟಡ ಶಂಕುಸ್ಥಾಪನೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು “ದೇಶದ ದೊಡ್ಡ ಭಯೋತ್ಪಾದಕನಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ನನ್ನ ವಿರುದ್ಧ ಛೂ ಬಿಟ್ಟಿದ್ದಾರೆ” ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.

ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಈಗಾಗಲೇ ಐದು ಬಾರಿ ಕೇಜ್ರಿವಾಲ್‌ ವಿರುದ್ಧ ಸಮನ್ಸ್‌ ಜಾರಿ ಮಾಡಿದೆ. ಆದರೂ ಸಹ ಅರವಿಂದ್‌ ಕೇಜ್ರಿವಾಲ್‌ ಅವರು ವಿಚಾರಣೆಗೆ ಬರದ ಕಾರಣ ಜಾರಿ ನಿರ್ದೇಶನಾಲಯವು ಹೈ ಕೋರ್ಟ್‌ ಮೆಟ್ಟಿಲೇರಿದ್ದು ಈಗ ನ್ಯಾಯಲವು ಸಮನ್ಸ್‌ ನೀಡಿ ಇದೇ ಫೆಬ್ರವರಿ 17ನೇ ತಾರೀಖಿನಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ.

ಇದರ ಬಗ್ಗೆ ಮಾತನಾಡುತ್ತಾ ಈ ಹಿಂದೆ ದೆಹಲಿಯ ಸರ್ಕಾರಿ ಶಾಲೆಗಳ ಬಗ್ಗೆ ಪ್ರಸ್ಥಾಪಿಸಿ ಹಳೆಯ ಕಟ್ಟಡಗಳನ್ನ ಹೊಸ ಕಟ್ಟಡಗಳನ್ನಾಗಿ ಮಾರ್ಪಾಡು ಮಾಡಲಾಗಿದೆ, ಉತ್ತಮ ಗುಣ ಮಟ್ಟದ ಶಿಕ್ಷಣ , ಗ್ರಂಥಾಲಯಗಳನ್ನ ತಮ್ಮ ಆಮ್‌ ಆದ್ಮಿ ಪಕ್ಷದ ಮೂಲಕ ಮಾಡಿದ್ದೇವೆ ಎಂದರು. ಉಚಿತ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಆಶಯವನ್ನು ಪೂರ್ಣಗೋಳಿಸುತ್ತದ್ದೇವೆ ಎಂದರು.

You cannot copy content of this page

Exit mobile version