Home ರಾಜ್ಯ ಮಂಡ್ಯ ಸೆಕ್ಟರ್ ಅಧಿಕಾರಿಗಳು 4 ರಿಂದ 5 ಬಾರಿ ತಮ್ಮ ವ್ಯಾಪ್ತಿಯ ಮತಗಟ್ಟೆಗಳನ್ನು ಪರಿಶೀಲಿಸಿಕೊಳ್ಳಿ: ಡಾ: ಕುಮಾರ

ಸೆಕ್ಟರ್ ಅಧಿಕಾರಿಗಳು 4 ರಿಂದ 5 ಬಾರಿ ತಮ್ಮ ವ್ಯಾಪ್ತಿಯ ಮತಗಟ್ಟೆಗಳನ್ನು ಪರಿಶೀಲಿಸಿಕೊಳ್ಳಿ: ಡಾ: ಕುಮಾರ

0

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನೇಮಕವಾಗಿರುವ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳನ್ನು ಪಟ್ಟಿ ಮಾಡಿಕೊಂಡು ಕನಿಷ್ಟ 4 ರಿಂದ 5 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ರ್ಯಾಂಪ್, ವಿದ್ಯುತ್ ದೀಪ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದರು.

ಸೆಕ್ಟರ್ ಅಧಿಕಾರಿಗಳಿಗೆ ಚುನಾವಣಾ ಸಂದರ್ಭದಲ್ಲಿ ವಿಶೇಷವಾಗಿ ದಂಡಾಧಿಕಾರಿಗಳ ಅಧಿಕಾರ ನೀಡಲಾಗಿರುತ್ತದೆ. ತಮ್ಮ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ, ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಪರಿಹರಿಸಿ ಎಂದರು.

ಕಳೆದ ಬಾರಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ, ದುರ್ಬಲ ಮತಗಟ್ಡೆಗಳು ಎಂದು ಗುರುತಿಸಿರುವ ಮತಗಟ್ಟೆಗಳ ವ್ಯಾಪ್ತಿಯ ಮತದಾರರೊಂದಿಗೆ ಸಭೆ ನಡೆಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನೈತಿಕ ಮತದಾನ ಮಾಡುವಂತೆ ಆತ್ಮಸ್ಥೈರ್ಯ ತುಂಬಿ ಎಂದರು.

ಸೆಕ್ಟರ್ ಅಧಿಕಾರಿಗಳು ತಮ್ಮ ವಾಹನದಲ್ಲಿ ಅವಶ್ಯಕವಿರುವ ಕಡೆ ಬದಲಿ ಇ.ವಿ.ಎಂ. ವ್ಯವಸ್ಥೆ ಮಾಡಬೇಕಿರುತ್ತದೆ. ಆದರಿಂದ ಕಡ್ಡಾಯವಾಗಿ ಚುನಾವಣಾ ತುರ್ತು ಹಾಗೂ ಸೆಕ್ಟರ್ ಅಧಿಕಾರಿಗಳು ಎಂದು ನಾಮಪಲಕವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ತಮ್ಮ ವಾಹನವನ್ನು ಮತದಾನದ ದಿನದಂದು ಯಾವುದೇ ಕಾರಣಕ್ಕೂ ಖಾಸಗಿ ಸ್ಥಳಗಳಲ್ಲಿ ನಿಲುಗಡೆ ಮಾಡದಂತೆ ಎಚ್ಚರಿಕೆ ವಹಿಸಿ ಎಂದರು.

ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ರೂಟ್ ಮ್ಯಾಪ್, ಸಂವಾಹನ ಯೋಜನೆ ಸಿದ್ಧಪಡಿಸಿಕೊಳ್ಳಿ. ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಇರುವ ಉತ್ತಮ ಹಾಗೂ ಹತ್ತಿರದ ಮಾರ್ಗವನ್ನು ತಿಳಿದುಕೊಳ್ಳಿ. ಇದರಿಂದ ಮತದಾನದ ದಿನದಂದು ಕೆಲಸ ಸುಲಭವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಾಸ್ಟರ್ ಟ್ರೈನರ್ಸ್ ಹಾಗೂ ಸೆಕ್ಟರ್ ಅಧಿಕಾರಿಗಳು ಒಟ್ಟಿಗೆ ನಿಗದಿ ಪಡಿಸುವ ದಿನದಂದು ಪಿ.ಆರ್.ಒ, ಪಿ.ಒ ಗಳಿಗೆ ತರಬೇತಿ ನೀಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರು ಮಾತನಾಡಿ ಪ್ರತಿ ಸೆಕ್ಟರ್ ಅಧಿಕಾರಿಗಳಿಗೆ ಒಬ್ಬರೂ ಆರ್ಮಡ್ ಪೊಲೀಸ್ ಮೆನ್ ನಿಯೋಜಿಸಲಾಗುವುದು. ಮತದಾನದ ದಿನದಂದು ಯಾವುದೇ ಗೊಂದಲಕ್ಕೂ ಆಸ್ಪದ ನೀಡದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.

ಚುನವಣಾ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಿದರು.

You cannot copy content of this page

Exit mobile version