Thursday, June 20, 2024

ಸತ್ಯ | ನ್ಯಾಯ |ಧರ್ಮ

ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶವನ್ನು ರಾಜಕಾರಣಿಗಳಿಗೆ ತಲುಪಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿವಮೊಗ್ಗ: ಜಾತಿ, ಹಣ ಮತ್ತು ತೋಳ್ಬಲಗಳಿಂದ ಚುನಾವಣೆಯಲ್ಲಿ ಜಯಶಾಲಿಯಾಗುವುದು ಸಾಧ್ಯವಾಗದು ಎಂಬ ಸಂದೇಶವನ್ನು ಎಲ್ಲಾ ಅರ್ಹ ಮತದಾರರು ಮತದಾನದ ಮೂಲಕ ಉಮೇದುವಾರರಿಗೆ ತಲುಪಿಸಬೇಕು ಎಂದು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಂದು ಜಿಲ್ಲಾಡ ಳಿತ, ಜಿಲ್ಲಾ ಚುನಾವಣಾ ಶಾಖೆಯು ನಗರದ ಕುವೆಂಪು ರಂಗಮಂದಿರದಲ್ಲಿ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮತದಾರರು ತಮ್ಮ ಮತ ಮಾರಾಟಕ್ಕಿಲ್ಲ ಎಂಬುದನ್ನು ಖಚಿತವಾಗಿ ದೃಢಪಡಿಸ ಬೇಕೆಂದರು.

ಯುವ ಮತದಾರರು ಜಾಗೃತರಾಗಿ ದೃಢಸಂಕಲ್ಪ ಮಾಡುವುದರ ಜೊತೆಗೆ ಪ್ರಜಾ ಪ್ರಭುತ್ವದ ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕು. ನಿವೃತ್ತರು (ಸಾಹಿತಿಗಳು, ಬುದ್ದಿ ಜೀವಿಗಳು, ವಕೀಲರು, ಗಣ್ಯರು, ಹಿರಿಯರು, ಅನುಭವಿಗಳು) ಮೌನಮುರಿದು ಚುನಾವಣಾ ವ್ಯವಸ್ಥೆಗಳ ಕುರಿತು ಸಕಾಲಿ ಕವಾಗಿ ಪ್ರತಿಕ್ರಿಯಿಸಬೇಕು. ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳನ್ನು ದಾಖಲಿಸಲು ಮುಂದಾಗಬೇಕು. ಇಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಬಹು ದೊಡ್ಡ ಹೊಣೆಗಾರಿಕೆ ಇದ್ದು, ಜವಾಬ್ದಾರಿಯುತ ಪ್ರತಿನಿಧಿಗಳು ಆ ನಿಟ್ಟಿನಲ್ಲಿ ಹೆಜ್ಜೆ ಇಡ ಬೇಕೆಂದವರು ನುಡಿದರು.

ಕಳೆದೆರಡು ದಶಕಗಳಿಂದೀಚೆಗೆ ಚುನಾವಣಾ ಕ್ರಮಗಳಲ್ಲಿ ಅನೇಕ ಸುಧಾರಣೆಗಳಾಗಿವೆ. ಆಧಾರ್-ಎಪಿಕ್‌ನ ಜೋಡಣೆ ಕಾರ್ಯ ನಡೆದಿದೆ. ಆದರೂ ಚುನಾವಣೆಗಳು ನ್ಯೂನತೆಗಳಿಂದ ಹೊರತಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಗಳು ಹಣ, ಹೆಂಡ ಮತ್ತು ಬಲದ ಮೇಲೆ ನಡೆಯುತ್ತಿವೆ.

ನೈತಿಕ ಮೌಲ್ಯಗಳು ದಿವ್ಯನಿರ್ಲಕ್ಷ್ಯಕ್ಕೊಳಗಾಗಿವೆ. ಜಾತಿ ವ್ಯವಸ್ಥೆಯ ಮೇಲೆ ಪ್ರಜಾಪ್ರಭುತ್ವ ಎನ್ನುವ ವಾತಾವರಣ ಸೃಷ್ಠಿಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದು ಹೀಗೆಯೆ ಮುಂದುವರೆದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು ಎಂದು ಎಚ್ಚರಿಸಿದರು.

ಈ ಎಲ್ಲಾ ನ್ಯೂನತೆಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯು ಪರೋಕ್ಷ ಕಾರಣವಾಗಿದೆ. ಶಿಕ್ಷಣ ನೀಡಬೇಕಾದ ಶಿಕ್ಷಣ ಕ್ಷೇತ್ರ ಇಂದು ವಾಣಿಜ್ಯೋದ್ಯಮವಾಗಿ ರೂಪುಗೊಂಡಿದೆ. ಹಣಗಳಿಕೆಯ ಉದ್ಯೋಗವಾಗಿದೆ. ರಾಷ್ಟ್ರಾಭಿಮಾನ ಗೌಣವಾಗಿ ಪಾಶ್ಚಿಮಾತ್ಯ ಶಿಕ್ಷಣ ಪದ್ದತಿಯನ್ನು ಬಿತ್ತುತ್ತಿವೆ.ಹೀಗಾಗಿ ಮಕ್ಕಳ ಕ್ರಿಯಾಶೀಲತೆ ಇಲ್ಲವಾಗಿದೆ ಎಂದರು.

ಚುನಾವಣೆಗಳಲ್ಲಿ ಸುಧಾರಣೆ ಕಾಣುವುದರ ಜೊತೆಗೆ ಪರಿಶುದ್ಧ ಚುನಾವಣೆಗಳು ನಡೆಯುವಂತಾಗಬೇಕು. ಸಾಮಾಜಿಕ ವಾಗಿ ವ್ಯವಸ್ಥೆಯ ಸುಧಾರಣೆಗೆ ಎಲ್ಲರೂ ಚಿಂತಿಸಬೇಕು. ತಪ್ಪಿದಲ್ಲಿ ಅರಾಜಕತೆ ಸೃಷ್ಠಿಯಾಗುವ ಅಪಾಯವಿದೆ ಎಂದರು.

ಹಣ ಕೊಟ್ಟು ಮತಗಳಿಸುವ ದುಃಸ್ಥಿತಿ ಎಲ್ಲಾ ರಾಜಕೀಯ ಪಕ್ಷಗಳನ್ನೂ ಆವರಿಸಿದೆ. ಮತ ದಾರರು ಚುನಾಯಿತ ಪ್ರತಿನಿಧಿಗಳಲ್ಲಿ ಸ್ವಾರ್ಥರಹಿತ ಸಾಮಾಜಿಕ ಹಿತಾಸಕ್ತಿಯ ಬೇಡಿಕೆಗಳನ್ನು ಇಡಬೇಕು. ಅದು ಇಲ್ಲವಾಗಿದೆ. ಪ್ರಸ್ತುತ ಸಂದರ್ಭದಲ್ಲಿ  ರಾಜ ಕಾರಣ ಸೇರಿದಂತೆ ಎಲ್ಲಾ ಕ್ಷೇತ್ರಗಳು ವಿಷವರ್ತುಲದಲ್ಲಿ ಸಿಲುಕಿಕೊಂಡಿವೆ. ಆದರ್ಶಗಳು ಅಧಃಪತನವಾಗಿವೆ. ನೈತಿಕತೆ ಕುಸಿದಿದೆ. ಇವೆಲ್ಲವೂ ಜನರಿಗೆ ರಂಜನೀಯ ವಿಷಯವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು

ನ್ಯಾಯಲಯದಲ್ಲಿ ನ್ಯಾಯ ಸಿಗುತ್ತಿಲ್ಲ ಬದಲಾಗಿ ನಿರ್ಣಯಗಳು ಬರುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿದ ಪತ್ರಿಕಾ ಕ್ಷೇತ್ರವೂ ಪಾವಿತ್ರ್ಯತೆಯನ್ನು ಉಳಿಸಿಕೊಂಡಿಲ್ಲ ಎಂದರು.

ಕಾರ್ಯಾಂಗದಲ್ಲೂ ಅನೇಕ ನ್ಯೂನತೆಗಳು ಎದ್ದು ತೋರುತ್ತಿವೆ. ಆಡಳಿತ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಜವಾಬ್ದಾರಿಯುತ ಅಧಿಕಾರಿಗಳು ಮಾನವೀಯತೆ ಮರೆತಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ದೊರೆಯದಾಗಿದೆ.  ಕೇವಲ ಕಡತಗಳ ಮೇಲೆಯೇ ವ್ಯವಸ್ಥೆಯ ನಿರ್ವಹಣೆಯಾಗುತ್ತಿದ್ದು, ಜನರ ಅವಹೇಳನಕ್ಕೆ ಆಹಾರವಾಗಿದೆ ಎಂದರು.

ಪರಕೀಯರ ಅನೇಕ ದಾಳಿಗಳಿಂದಾಗಿಯೂ ನಮ್ಮ ಹಿರಿಯರು ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಕೊಂಡು ಬಂದಿದ್ದಾರೆ. ಅನೇಕರ ತ್ಯಾಗ-ಬಲಿದಾನಗಳಿಂದ ಸ್ವಾತಂತ್ರ್ಯ ಲಭಿಸಿದೆ. ಸಂವಿಧಾನದ ಮಹತ್ವದ ಕೊಡುಗೆಯ ಕಾರಣ ದಿಂದಾಗಿ ಭಾರತ ಇಂದು ಜಗತ್ತಿನಲ್ಲಿ ಎತ್ತರದ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ. ಸಂವಿಧಾನ ಶ್ರೇಷ್ಟ ಗ್ರಂಥವಾಗಿದ್ದು, ಅಂಬೇಡ್ಕರ್ ಅವರ ಶ್ರಮ ಸ್ಮರಣೀಯ. ಸಂವಿಧಾನ ನಮ್ಮೆಲ್ಲರ ಅಗತ್ಯ ಗಳನ್ನು ಪೂರೈಸಿದೆ. ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದ ಅವರು, ದೇಶದ ಉನ್ನತಿಯಲ್ಲಿ ಸೈನಿಕ, ರೈತ ಹಾಗೂ ಮಹಿಳೆ ಯರ ಕೊಡುಗೆ ಅನನ್ಯ ವಾದುದು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು