ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕು ಅಂದ್ರೆ, ಆ ಭಾಗದಲ್ಲೊಂದು ಎರಡನೇ ರಾಜಧಾನಿ ಮಾಡಬೇಕು. ಆಗಲಾದರೂ ಅಭಿವೃದ್ಧಿ ಅನ್ನೋದು ಬೆಂಗಳೂರಿನ ಆಚೆಗೂ ಕಾಣುತ್ತೆ ಎಂದು ಉ.ಕ ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬುಧವಾರದಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗ ಹಾಗೂ ತಮ್ಮ ಕ್ಷೇತ್ರದಲ್ಲಿನ ಗಂಭೀರ ಸಮಸ್ಯೆಗಳ ಕುರಿತು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಅವರು ಪ್ರಸ್ತಾಪಿಸಿದ್ದರು. ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿನ ಕಡೇಚೂರ್-ಬಾಡಿಯಾಳ್, ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಘಟಕಗಳು ಹೊರಹಾಕುತ್ತಿರುವ ವಿಷಾನಿಲವು, ವಾತಾವರಣದಲ್ಲಿ ಬೆರೆತು, ಜನ ಅದನ್ನೇ ಉಸಿರಾಡಿ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಇದು ಸದನದಲ್ಲಿ ಮಾತಾಡುವ ಸದಸ್ಯರಿಗೆ ಉತ್ತರ ಕರ್ನಾಟಕ ಸಮಸ್ಯೆಗಳು ಅರ್ಥವಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಒಳ್ಳೊಳ್ಳೆ ಕಾರ್ಖಾನೆಗಳು ದಕ್ಷಿಣ ಕರ್ನಾಟಕಕ್ಕೆ, ವಿಷಾನಿಲ ಸೂಸುವ ಕಾರ್ಖಾನೆಗಳು ಉತ್ತರ ಕರ್ನಾಟಕೆ, ಇದ್ಯಾವ ಸೀಮೆ ನ್ಯಾಯ ಸ್ವಾಮೀ ಎಂದು ಶರಣಗೌಡರು ವಾಗ್ದಾಳಿ ನಡೆಸಿದ್ದರು.
ರಾಯಚೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪೀಡಿತರ ಸಂಖ್ಯೆ ಮುಂದಿಟ್ಟು ಕಳವಳ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಕುಡಿಯುವ ನೀರಿಲ್ಲದೆ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ಸಮಸ್ಯೆಗೆ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಜೊತೆಗೆ ಉತ್ತರ ಕರ್ನಾಟಕ ಭಾಗದ ನೀರಾವರಿಗೆ ಕ್ಷೇತ್ರಕ್ಕೆ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು ಕೊಟ್ಟಿರುವ ಕೊಡುಗೆಗಳು ಅಪಾರ ಅದನ್ನು ಯಾರು ಮರೆಯಬಾರದು ಎಂದು ಸದನದಲ್ಲಿ ಸ್ಮರಿಸಿದರು.
ಈ ಕುರಿತು ಜನಗಳು ಶರಣಗೌಡ ಕಂದಕೂರ ಅವರನ್ನ ಪ್ರಶಂಶಿಸಿದ್ದು, ಸರ್ಕಾರಕ್ಕೆ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಯಾಗಳನ್ನ ಹಂಚಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ, ವ್ಯಕ್ತಿಯೊಬ್ಬರು ಪ್ರತಿಯೊಂದನ್ನೂ ಬೇಡಿ ಬೇಡಿ ಪಡ್ಕೊಬೇಕು ಅಂದ್ರೆ ಉತ್ತರ ಕರ್ನಾಟಕ ಭಾಗ ನಮ್ಮ ರಾಜ್ಯದಲ್ಲಿಲ್ಲವಾ? ಸರ್ಕಾರಕ್ಕೆ ಆ ಭಾಗವನ್ನು ಅಭಿವೃದ್ಧಿ ಮಾಡೋಕೆ ಆಗಲ್ಲ, ಯೋಗ್ಯತೆ ಇಲ್ಲ ಅಂದ್ರೆ ಇನ್ನೊಂದ್ ಭಾಗ ಮಾಡಿ. ಅಲ್ಲಿನ ಕಷ್ಟ ಸುಖ ಅವರೇ ನೋಡಿಕೊಳ್ತಾರೆ ಎಂದು ತಮ್ಮ ಎಕ್ಸ್ ಗೋಡೆಯ ಮೇಲೆ ಪೋಸ್ಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
https://x.com/Vishvamitra_/status/1902656183095464237
ಇನ್ನೂ ಮತ್ತೊಬ್ಬ ವ್ಯಕ್ತಿ ತಮ್ಮ ಎಕ್ಸ್ ಗೋಡೆಯ ಮೇಲೆ ಪೋಸ್ಟ್ ಮಾಡಿದ್ದು, ಉತ್ತರ ಪ್ರದೇಶದವರು ಹೆಕ್ಕಿ ಹೆಕ್ಕಿ ಕನ್ನಡದವರನ್ನು ತಿಂದ್ರೂ ಸುಮ್ಮನೆ ಕೂರುವುದು, ಉತ್ತರ ಕರ್ನಾಟಕದ ಬೇಜವಾಬ್ದಾರಿ ರಾಜಕಾರಣಿಗಳನ್ನು ಮತ್ತೆ- ಮತ್ತೆ ಆಯ್ಕೆ ಮಾಡೋದು, ಆಮೇಲೆ ಎಲ್ಲಾನು ಬೆಂಗಳೂರಿನವರ ಮ್ಯಾಲೆ ಹಾಕೋದು! ಉತ್ತರ ಕರ್ನಾಟಕ ಬೇರೆ ರಾಜ್ಯ ಅಂತೇನಾದ್ರೂ ಆದ್ರೆ, ದೆಹಲಿ ಮುಂದೆ ಕೈ ಒಡ್ಡಿ ನಿಲ್ಲಬೇಕಾಗುತ್ತೆ ಅನ್ನೋ ಸಣ್ಣ ತಿಳುವಳಿಕೆಯೂ ಇಲ್ಲ ಇವರಿಗೆ ಅಂತ ರಾಜ್ಯ ಸರ್ಕಾರ ಮತ್ತು ರಾಜಕಾರಣಿಗಳನ್ನ ದೂರಿದ್ದಾರೆ.
https://x.com/JS_Prashant/status/1902578839420903477