Saturday, July 6, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲೇ “ಝೀಕಾ ವೈರಸ್” ಗೆ ಶಿವಮೊಗ್ಗದಲ್ಲಿ ಮೊದಲ ಬಲಿ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣದ ಏರಿಕೆಯ ಬೆನ್ನಲ್ಲೇ ಮಾರಣಾಂತಿಕ ‘ಝೀಕಾ’ ವೈರಸ್ ಕೂಡ ಎಲ್ಲೆಡೆ ಪತ್ತೆಯಾಗುತ್ತಿದ್ದು ರಾಜ್ಯದಲ್ಲೇ ಮೊಟ್ಟ ಮೊದಲ ಝೀಕಾ ವೈರಸ್ ನಿಂದ ಸಾವಿನ ಪ್ರಕರಣ ದಾಖಲಾಗಿದೆ. ಇದೀಗ ಶಿವಮೊಗ್ಗದಲ್ಲಿ ಝೀಕಾ ವೈರಸ್ ಗೆ ವೃದ್ಧರೊಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಗಾಂಧಿ ನಗರದ ನಿವಾಸಿಯ ವೃದ್ಧರು ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು.ಜೂನ್ 21ರಂದು ನಡೆಸಿದ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು.

ಆ ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೇವಲ ಎರಡು ದಿನಗಳ ಹಿಂದೆ ಆಸ್ಪತ್ರೆ ವೈದ್ಯಾಧಿಕಾರಿಗಳು ಗುಣಪಡಿಸಲಾಗದೇ ಡಿಸ್ಚಾರ್ಜ್ ಮಾಡಿದ್ದರು.

ಅದಾದ ಬಳಿಕ ಕುಟುಂಬದವರು ಗುರುವಾರ ಮನೆಗೆ ಕರೆದುಕೊಂಡು ಹೋಗಿದ್ದರು. ನಿನ್ನೆ ಮನೆಯಲ್ಲಿ 74 ವರ್ಷದ ವೃದ್ಧರು ಝೀಕಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಝೀಕಾ ವೈರಸ್ ಗೆ 74 ವರ್ಷದ ವೃದ್ಧರು ರಾಜ್ಯದಲ್ಲೇ ಮೊದಲ ಬಲಿಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು