ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಛತ್ರಪತಿ ಶಾಹುಜಿ ಮಹಾರಾಜರ 30 ಅಡಿ ಬೃಹತ್ ಪ್ರತಿಮೆ ಪತನಗೊಂಡ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯು ಮೂರ್ತಿಯ ವಿನ್ಯಾಸಕರಾಗಿದ್ದು, ಅವರನ್ನು ಚೇತನ್ ಪಾಟೀಲ್ ಎಂದು ಗುರುತಿಸಲಾಗಿದೆ. ಇವರನ್ನು ಪೊಲೀಸರು ಕೊಲ್ಹಾಪುರದಲ್ಲಿ ನಿನ್ನೆ ರಾತ್ರಿ 3 ಗಂಟೆ ವೇಳೆಗೆ ಬಂಧಿಸಿದ್ದಾರೆ.
ಕೊಲ್ಲಾಪುರದ ಕ್ರೈಂ ಬ್ರಾಂಚ್ ತಂಡವು ಪಟೇಲ್ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಸಿಂಧುದುರ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣದಲ್ಲಿ ಗುತ್ತಿಗೆದಾರ ಮತ್ತು ಶಿಲ್ಪಿ ಜೈದೀಪ್ ಆಪ್ಟೆ ಮತ್ತು ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ಆರೋಪಿ ಚೇತನ್ ಪಾಟೀಲ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾನು ನಿರಪರಾಧಿ ಎಂದ ಚೇತನ್
ಆದರೆ, ಕೊಲ್ಹಾಪುರದ ನಿವಾಸಿ ಚೇತನ್ ಪಾಟೀಲ್ ಅವರು ಈ ಯೋಜನೆಗೆ ತಾನು ಸಲಹೆಗಾರನಲ್ಲ ಎಂದು ಹೇಳಿಕೊಂಡಿದ್ದಾರೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಪಾಟೀಲ್ ಅವರು ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ತನಗೆ ವೇದಿಕೆ ನಿರ್ಮಾಣದ ಕೆಲಸವನ್ನಷ್ಟೇ ನೀಡಿತ್ತು. ಶಿವಾಜಿ ಪ್ರತಿಮೆಗೂ ತನಗೂ ಯಾವುದೇ ಸಂಬಂಧವಿಲ್ಲ. ಶಿವಾಜಿಯ ಪ್ರತಿಮೆಯ ಕಾಮಗಾರಿಯನ್ನು ಥಾಣೆ ಮೂಲದ ಕಂಪನಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಪ್ರತಿಮೆ ಬಿದ್ದಿದ್ದು ಹೇಗೆ?
ಛತ್ರಪತಿ ಶಾಹು ಜಿ ಮಹಾರಾಜರ ಪ್ರತಿಮೆಯನ್ನು ಸಿಂಧುದುರ್ಗದ ರಾಜ್‌ಕೋಟ್ ಕೋಟೆಯಲ್ಲಿ 2023ರಲ್ಲಿ ಸ್ಥಾಪಿಸಲಾಯಿತು ಎಂಬುದು ಗಮನಾರ್ಹ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ಇದಾಗಿ ಒಂದು ವರ್ಷದೊಳಗೆ ಶಿವಾಜಿಯ ಪ್ರತಿಮೆಯು ಕಳೆದ ಸೋಮವಾರ ಹಠಾತ್ತನೆ ಬಿದ್ದಿತ್ತು. ಈ ಪ್ರತಿಮೆ ಪತನದ ನಂತರ, ಮಹಾರಾಷ್ಟ್ರ ಸರ್ಕಾರವು ಪ್ರತಿಪಕ್ಷಗಳ ದಾಳಿಗೆ ಒಳಗಾಗಿದೆ.