Wednesday, November 13, 2024

ಸತ್ಯ | ನ್ಯಾಯ |ಧರ್ಮ

ದಳಪತಿ ವಿಜಯ್ ಅಭಿನಯದ ಕೊನೆಯ ತಮಿಳು ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವಣ್ಣ!

ತಮಿಳು ಸ್ಟಾರ್ ಹೀರೋ ವಿಜಯ್ ಮುಂದಿನ ವರ್ಷ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಬರಲಿದ್ದಾರೆ. ಈ ಹಿನ್ನಲೆಯಲ್ಲಿ ಸಿನಿಕೇರಿಯರ್ ಅಂತ್ಯಗೊಳಿಸುವುದಾಗಿ ಈ ಹಿಂದೆಯೇ ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರು ತಮ್ಮ ಕೊನೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಈ ಚಿತ್ರ ವಿಜಯ್ ಅವರ ವೃತ್ತಿ ಜೀವನದಲ್ಲಿ 69ನೇ ಚಿತ್ರವಾಗಲಿದೆ. ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದು, ಬಾಲಿವುಡ್ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಎಲ್ಲಾ ಭಾಷೆಯ ಸ್ಟಾರ್ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಈಗಾಗಲೇ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ತಮಿಳು ನಿರ್ದೇಶಕ ಮತ್ತು ನಟ ಗೌತಮ್ ವಾಸುದೇವ್ ಮೆನನ್ ಮತ್ತು ನಟಿ ಪ್ರಿಯಾಮಣಿ ವಿಜಯ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಮಲಯಾಳಂ ನಟಿ ಮಮಿತಾ ಬಿಜು ವಿಜಯ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟ ಸೇರಿಕೊಂಡಿದ್ದಾರೆ. ಅವರೇ ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್. ಎಚ್ ವಿನೋದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಸ್ವತಃ ಶಿವಣ್ಣ ಸಂದರ್ಶನವೊಂದರಲ್ಲಿ ಹೇಳಿದ್ದು, ‘ವಿಜಯ್69 ಚಿತ್ರದಲ್ಲಿ ನನಗೆ ಪಾತ್ರ ಮಾಡಲು ಆಫರ್ ಬಂದಿದೆ. ನನ್ನ ಡೇಟ್ಸ್ ಹೊಂದಾಣಿಕೆಗೆ ಅನುಗುಣವಾಗಿ ನನ್ನ ಪಾತ್ರವನ್ನು ಹೇಗೆ ವಿನ್ಯಾಸಗೊಳಿಗೊಳಿಸುತ್ತಾರೋ ಗೊತ್ತಿಲ್ಲ. ವಿಜಯ್ ತುಂಬಾ ಒಳ್ಳೆಯ ನಟ. ಅವರು ಸಿನಿಮಾ ಮಾಡುವುದನ್ನು ಮುಂದುವರಿಸಬೇಕು ಎಂಬುದು ನನ್ನ ಆಸೆ ಎಂದು ಶಿವಣ್ಣ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page