Home ಬೆಂಗಳೂರು ಶಿವರಾಂ ಹೆಬ್ಬಾರ್‌, ಎಸ್‌.ಟಿ. ಸೋಮಶೇಖರ್‌ ಬಿಜೆಪಿ ಪಾಲಿಗೆ ಮುಗಿದ ಅಧ್ಯಾಯ: ಆರ್‌ ಅಶೋಕ್‌

ಶಿವರಾಂ ಹೆಬ್ಬಾರ್‌, ಎಸ್‌.ಟಿ. ಸೋಮಶೇಖರ್‌ ಬಿಜೆಪಿ ಪಾಲಿಗೆ ಮುಗಿದ ಅಧ್ಯಾಯ: ಆರ್‌ ಅಶೋಕ್‌

0

ಶಾಸಕರಾದ ಶಿವರಾಂ ಹೆಬ್ಬಾರ್‌, ಎಸ್‌.ಟಿ. ಸೋಮಶೇಖರ್‌ ಅವರಿಗೆ ನೋಟಿಸ್‌ ಕೊಟ್ಟಾಗಿದೆ. ಅವರಿಗೆ ನಮಗೆ ಸಂಬಂಧ ಇದೆಯೇ ಇಲ್ಲವೇ ಎಂಬುದು ಮುಂದೆ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರೆ, ಹೆಬ್ಬಾರ್‌ ವಿಚಾರ ಮುಗಿದು ಹೋದ ಅಧ್ಯಾಯ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ಬಿಜೆಪಿಯ ಜನಾಕ್ರೋಶ ಯಾತ್ರೆಯಲ್ಲಿ ಹೆಬ್ಬಾರ್‌, ಸೋಮಶೇಖರ್‌ ಸಹಿತ ಹಲವರು ಭಾಗಿಯಾಗದೆ ಇರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿರುವ ಉಭಯ ನಾಯಕರು, ಇಬ್ಬರನ್ನೂ ಪಕ್ಷದಿಂದ ಹೊರಹಾಕುವ ಸ್ಪಷ್ಟ ಸುಳಿವು ನೀಡಿದರು.

ಜನಾಕ್ರೋಶ ಯಾತ್ರೆಗೆ ಹೆಬ್ಬಾರ್‌ ಬಂದಿಲ್ಲ ಎಂಬ ಚಿಂತೆ ಬಿಜೆಪಿಗೇ ಇಲ್ಲ, ಮಾಧ್ಯಮದವರೇಕೆ ಕನವರಿಸುತ್ತೀರಿ? ಅವರಿಗೆ ನೋಟಿಸ್‌ ಕೊಟ್ಟಾಗಿದೆ. ಅವರಿಗೆ ನಮಗೆ ಸಂಬಂಧ ಇದೆಯೇ ಇಲ್ಲವೇ ಎಂಬುದು ಮುಂದೆ ಗೊತ್ತಾಗಲಿದೆ. ಆದರೆ ಜನಾಕ್ರೋಶ ಯಾತ್ರೆಗೆ ಪಕ್ಷದ ಉಳಿದ ನಾಯಕರು ಬರುತ್ತಿದ್ದಾರೆ. ಕೆಲವರು 2ನೇ ಹಂತದ ಹೋರಾಟದಲ್ಲಿ ಭಾಗಿಯಾಗುತ್ತಾರೆ ಎಂದು ವಿಜಯೇಂದ್ರ ಹೇಳಿದರು.

ಆರ್‌. ಅಶೋಕ್‌ ಮಾತನಾಡಿ, ಹೆಬ್ಬಾರ್‌ ಅವರ ವಿಚಾರ ಮುಗಿದ ಅಧ್ಯಾಯ. ಜನಾಕ್ರೋಶ ಯಾತ್ರೆಗೆ ಅವರನ್ನೇಕೆ ಕರೆಯಬೇಕು? ಕರೆಯುವುದಿಲ್ಲ. ಸದನದಲ್ಲಿ ನಮ್ಮ ಹೋರಾಟಗಳಿಗೆ ಅವರು ಎಂದೂ ಬೆಂಬಲಿಸಿಲ್ಲ. ಕರೆದರೂ ಬರುವುದಿಲ್ಲ. ಅವರ ವಿಚಾರದಲ್ಲಿ ಶೀಘ್ರವೇ ವರಿಷ್ಠರು ತೀರ್ಮಾನ ತಿಳಿಸುತ್ತಾರೆ ಎಂದರು.

ಹಿಂದೂಗಳು ಯಾವುದೇ ಗೊಡ್ಡು ಬೆದರಿಕೆಗಳಿಗೂ ಹೆದರುವುದಿಲ್ಲ. ಅದು ಯತ್ನಾಳ್‌ ಆದರೂ ಅಷ್ಟೇ ಯಾರ ವಿಚಾರ ಆದರೂ ಅಷ್ಟೇ. ಹಿಂದುತ್ವ ವಿಷಯ ಬಂದಾಗ ಹೆದರಿ ಕೂರುವ ಪ್ರಶ್ನೆಯೇ ಇಲ್ಲ ಎಂದರು.

You cannot copy content of this page

Exit mobile version