ಬೆಂಗಳೂರು: ರೈತರ ಸಂಸ್ಥೆಯಾದ ಕರ್ನಾಟಕದ ಹೆಮ್ಮೆಯ ನಂದಿನಿಗೆ ಈ ಹಿಂದೆ ಡಾ. ರಾಜ್‌ಕುಮಾರ್ ರಾಯಭಾರಿಯಾಗಿದ್ದರು. ಅವರ ನಂತರ ಪುನೀತ್ ಕೂಡಾ ಉಚಿತವಾಗಿಯೇ ಈ ಬ್ರಾಂಡಿನ ರಾಯಭಾರವನ್ನು ಮುಂದುವರೆಸಿದ್ದರು. ಅವರ ಅಕಾಲಿಕ ಅಗಲಿಕೆಯ ನಂತರ ಈಗ ಡಾ. ಶಿವರಾಜ್‌ಕುಮಾರ್ ನಂದಿನಿಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.
ಈ ಕುರಿತು ಸುದ್ದಿಯನ್ನು ಹಂಚಿಕೊಂಡಿರುವ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾದ ಭೀಮಾ ನಾಯಕ್ ಶಿವರಾಜ್‌ಕುಮಾರ್ ಅವರು ರಾಯಭಾರಿಯಾಗಲು ಒಪ್ಪಿಕೊಂಡಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ.
https://twitter.com/BheemaNaikINC/status/1686286657170132993
ಇನ್ನು ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡುವ ವಿಚಾರದಲ್ಲಿ ಬಿಜೆಪಿ ತನ್ನ ರಾಜಕೀಯವನ್ನು ಮುಂದುವರೆಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯನವರು “ಈ ಹಿಂದೆ ಬೊಮ್ಮಾಯಿ, ಯಡಿಯೂರಪ್ಪನವರ ಕಾಲದಲ್ಲೂ ಟೆಂಡರ್ ತಪ್ಪಿತ್ತು ಹಾಗೆಂದು ಅವರೂ ಧರ್ಮ ದೋಹಿಗಳಾಗುತ್ತಾರೆಯೇ” ಎಂದು ತಮ್ಮ ಟ್ವಿಟರ್ ಅಕೌಂಟಿನಲ್ಲಿ ಕುಟುಕಿದ್ದಾರೆ.