ಚಂಡೀಗಢ: ಚಿಲ್ಲರೆ ಅಂಗಡಿಯವರು ಗ್ರಾಹಕರ ಫೋನ್ ಸಂಖ್ಯೆಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದ ಚಂಡೀಗಢ ಪೀಠ ತೀರ್ಪು ನೀಡಿದೆ.
ವಕೀಲ ಪಂಕಜ್ ಚಂದ್ಗೋಥಿಯಾ ಅವರ ದೂರಿನ ವಿಚಾರಣೆಯ ಸಂದರ್ಭದಲ್ಲಿ ಈ ತೀರ್ಪು ನೀಡಲಾಗಿದೆ. ತಾನು ಏಪ್ರಿಲ್ 2024 ರಲ್ಲಿ ಸ್ಯಾಂಡಲ್ ಖರೀದಿಸಿದ್ದಾಗಿ ಮತ್ತು ಅಂಗಡಿಯವನು ಬಿಲ್ ನೀಡುವ ನೆಪದಲ್ಲಿ ತನ್ನ ಫೋನ್ ಸಂಖ್ಯೆಯನ್ನು ತೆಗೆದುಕೊಂಡಿದ್ದಾಗಿ ಅವರು ಹೇಳಿದರು. ಇದು ಮಾಹಿತಿ ಗೌಪ್ಯತೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು. ಮೌಲ್ಯಗಳಿಗೆ ಬದ್ಧರಾಗಿರದವರಿಗೆ ತಮ್ಮ ಮಾಹಿತಿ ಲಭ್ಯವಾಗಿದೆ ಎಂದು ಅವರು ಆರೋಪಿಸಿದ್ದರು.
ಗ್ರಾಹಕ ವ್ಯವಹಾರಗಳ ಇಲಾಖೆಯು ಮೇ 26, 2023ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಉತ್ಪನ್ನವನ್ನು ಮಾರಾಟ ಮಾಡುವಾಗ ಗ್ರಾಹಕರು ಫೋನ್ ಸಂಖ್ಯೆಗಳನ್ನು ಒದಗಿಸುವಂತೆ ಕೇಳುವುದು ಮತ್ತು ಅದನ್ನು ಕಡ್ಡಾಯ ಅವಶ್ಯಕತೆಯನ್ನಾಗಿ ಮಾಡುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಇದರ ಆಧಾರದಲ್ಲಿ ತೀರ್ಪು ನೀಡಿದ ಪೀಠ, ಪಂಕಜ್ ಅವರಿಗೆಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ತಕ್ಷಣ ಅಳಿಸಲು ಆದೇಶಿಸಿತು. ಪರಿಹಾರವಾಗಿ 2,500 ರೂ.ಗಳನ್ನು ನೀಡಬೇಕು ಎಂದು ಹೇಳಲಾಯಿತು.