ಅಶ್ಲೀಲ ಪೆನ್ ಡ್ರೈವ್ ಪರಿಣಾಮ: ಶ್ರೇಯಸ್ ಪಟೇಲ್ ಗೆಲುವು, ನೋಟಾ ಮತಗಳಲ್ಲಿ ಬಾರೀ ಏರಿಕೆ

ಹಾಸನ ಲೋಕಸಭೆ ಕ್ಷೇತ್ರದ 2024ರ ಚುನಾವಣೆಯಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಹೀನಾಯ ಸೋಲಾಗಿದೆ. ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಹಾಸನ ಜಿಲ್ಲೆಯಾದ್ಯಂತ ಬಾರಿ ಸದ್ದು ಮಾಡಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವಿನ ನಗೆ ಬೀರಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ 40,00 ಮತಗಳ ಅಂತರದಲ್ಲಿ ಶ್ರೇಯಸ್ ಪಟೇಲ್ ಗೆಲುವು ಸಿಕ್ಕಿದೆ.

ಆಶ್ಚರ್ಯಕರ ಮಾಹಿತಿ ಎಂದರೆ ಹಾಸನದಲ್ಲಿ ನೋಟಾ ಮತಗಳು ಏರಿಕೆಯಾಗಿದ್ದು, ಈ ಬೆಳವಣಿಗೆ ಸ್ಪಷ್ಟವಾಗಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಕಾರಣ ಎಂಬ ಮಾತುಗಳು ಕೇಳಿ ಬರ್ತಿದೆ.

Related Articles

ಇತ್ತೀಚಿನ ಸುದ್ದಿಗಳು