Home ದೇಶ ದಿ ವೈರ್’ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್‌ಗೆ ಸ್ಪೇನ್‌ನ ಎಲ್ ಮುಂಡೊ ಅಂತರರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ

ದಿ ವೈರ್’ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್‌ಗೆ ಸ್ಪೇನ್‌ನ ಎಲ್ ಮುಂಡೊ ಅಂತರರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ

0

ಹಿರಿಯ ಪತ್ರಕರ್ತ ಹಾಗೂ ‘ದಿ ವೈರ್’ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಮೆಕ್ಸಿಕೋದ ಪತ್ರಕರ್ತೆ ಮಾರ್ಸೆಲಾ ತುರಾಟಿ ಅವರು 24ನೇ ಆವೃತ್ತಿಯ ಪ್ರತಿಷ್ಠಿತ ‘ಎಲ್ ಮುಂಡೊ’ ಅಂತರರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯ ವಿಭಾಗದಲ್ಲಿ ವರದರಾಜನ್ ಅವರನ್ನು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಅತ್ಯುತ್ತಮ ಸೇವೆಗಾಗಿ ತುರಾಟಿ ಅವರನ್ನು ತೀರ್ಪುಗಾರರ ಸಮಿತಿ ಆಯ್ಕೆ ಮಾಡಿದೆ. ಸ್ಪೇನ್‌ನ ಪ್ರಮುಖ ದಿನಪತ್ರಿಕೆಯಾದ ಎಲ್ ಮುಂಡೊ ನೀಡುವ ಈ ಪ್ರಶಸ್ತಿಯನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರದಾನ ಮಾಡಲಾಗುವುದು.

ಈ ಗೌರವದ ಕುರಿತು ಪ್ರತಿಕ್ರಿಯಿಸಿದ ಸಿದ್ಧಾರ್ಥ್ ವರದರಾಜನ್, ಈ ಪುರಸ್ಕಾರವು ‘ದಿ ವೈರ್’ ಸಂಸ್ಥೆಗೆ ಹಾಗೂ ಭಾರತದಲ್ಲಿನ ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಜವಾದ ಉತ್ತೇಜನ ಮತ್ತು ಹೊಸ ಹುರುಪು ನೀಡಿದೆ ಎಂದು ತಿಳಿಸಿದ್ದಾರೆ.

ವರದರಾಜನ್ ಅವರಿಗೆ ದೊರೆತಿರುವ ಈ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಯು ಭಾರತದಲ್ಲಿನ ಮುಕ್ತ ಪತ್ರಿಕೋದ್ಯಮದ ಪರಂಪರೆಗೆ ಸಂದ ಮನ್ನಣೆಯಾಗಿದೆ ಎಂದು ಎಲ್ ಮುಂಡೊ ನಿರ್ದೇಶಕ ಜೋಕಿನ್ ಮಾನ್ಸೊ ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರ ದುರುಪಯೋಗ ಮತ್ತು ನೀತಿಗಳನ್ನು ನಿರಂತರವಾಗಿ ಪರಿಶೀಲಿಸಿ ವರದಿ ಮಾಡಿದ್ದಕ್ಕಾಗಿ ವರದರಾಜನ್ ಅವರು ಹಲವು ಮೊಕದ್ದಮೆಗಳು, ಪೊಲೀಸ್ ವಿಚಾರಣೆಗಳು ಮತ್ತು ತನಿಖೆಗಳನ್ನು ಎದುರಿಸಬೇಕಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.

You cannot copy content of this page

Exit mobile version