ಹಾಸನ : ಸಕಲೇಶಪುರ ತಾಲೂಕಿನ, ಮೂಗಲಿ ಗ್ರಾಮದಲ್ಲಿ ಜ.13 ರಂದು ಶೋಭ ಎಂಬ ಮಹಿಳೆ ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದ್ದಾರೆ.ಬೆಳಿಗ್ಗೆಯಿಂದಲೂ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿಗಳು ಕಡೆಗೂ ಡ್ರೋನ್ ಹಾರಿಸುವ ಮೂಲಕ ನರಹಂತಕ ಕಾಡಾನೆಯನ್ನು ಕಾಡಾನೆ ಇರುವ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಇಟಿಎಫ್ ಸಿಬ್ಬಂದಿ ಜೊತೆ, ಮಾವುತರ ಕಾವಾಡಿಗರಿಂದಲೂ ಹುಡುಕಾಟ ನಡೆಸುತ್ತಿದ್ದಾಗ, ಕಾಡಾನೆಯೂ ಬೇಲೂರು ತಾಲೂಕಿನ, ಚಂದಾಪುರ/ಬೆಳ್ಳಾವರ ಗ್ರಾಮದ ಬಳಿಯಿರುವ ಅರಣ್ಯದಲ್ಲಿ ಕಾಣಿಸಿಕೊಂಡಿದೆ.ಈ ಕಾಡಾನೆಯನ್ನು ಸೆರೆ ಹಿಡಿಯಲು ಮಾವುತರು, ಲಾರಿಯಲ್ಲಿ ಕುಮ್ಕಿ ಕಾಡಾನೆಗಳನ್ನು ಕರೆತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಧನಂಜಯ, ಸುಗ್ರೀವ, ಶ್ರೀರಾಮ, ಲಕ್ಷ್ಮಣ, ಅಯ್ಯಪ್ಪ ಭಾಗಿಯಾಗಿದ್ದವು.
ಸೆರೆ ಹಿಡಿಯುವ ವೇಳೆ ಪಶು ವೈದ್ಯ ಡಾ.ರಮೇಶ್, ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿದ ನಂತರ ನಿತ್ರಾಣಗೊಳ್ಳದೆ ಸತತ ಎರಡು ಗಂಟೆ ಓಡಾಡಿದೆ. ಬಳಿಕ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಗಳು ಕಾಡಾನೆಗೆ ನೀರು ಹಾಕಿ ಆರೈಕೆ ಮಾಡುತ್ತಿದ್ದಾರೆ.
ನಂತರ ತಜ್ಞರು, ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲಿದ್ದಾರೆ. ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯ ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೂ ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಡಿಎಫ್‌ಓ ಸೌರಭ್‌ಕುಮಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ
