ಧರ್ಮಸ್ಥಳದಲ್ಲಿ ಸರಣಿ ಶವಸಂಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆಯೇ ದೂರುದಾರ ತೋರಿಸಿದ ಹೊಸ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲು ಎಸ್.ಐಟಿ ತಂಡ ಎಲ್ಲಾ ಸಿದ್ಧತೆ ನಡೆಸಿದೆ. ಅದರಂತೆ ಇಂದು ಖಾಸಗಿ ಸ್ಥಳದಲ್ಲಿ ಶೋಧ ಕಾರ್ಯ ಶುರುವಾಗಿದೆ.
ಧರ್ಮಸ್ಥಳ ಬಳಿ ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ನ ಒಳಗೆ ಶೋಧ ಕಾರ್ಯಕ್ಕಾಗಿ ಎಸ್.ಐ.ಟಿ ಅಧಿಕಾರಿಗಳು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಾಕ್ಷಿ ದೂರುದಾರ ಸೇರಿದಂತೆ ಎಸ್ಐಟಿ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ತೆರಳಿದ್ದಾರೆ. ನೇತ್ರಾವತಿ ನದಿ ಬದಿಯಲ್ಲಿರುವ ಈ ಪ್ರದೇಶದಲ್ಲಿ ನದಿ ತೀರದಲ್ಲೇ ಈತ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಇದೊಂದು ಖಾಸಗಿ ಜಾಗವಾದ್ದರಿಂದ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿದ ಅಲ್ಲಿಂದ ದೂರುದಾರ ಸೂಚಿಸಿದ ಸ್ಥಳಕ್ಕೆ ಎಸ್ಐಟಿ ಅಧಿಕಾರಿಗಳು ಹೋಗಬೇಕಾಗಿತ್ತು. ಹೀಗಾಗಿ ಖಾಸಗಿ ವ್ಯಕ್ತಿಗಳಿಂದ ಅನುಮತಿ ಪಡೆದುಕೊಂಡು ಒಳಗೆ ಹೋಗಿದ್ದಾರೆ. ಈ ಜಾಗದಲ್ಲೂ ಸಹ ದೂರುದಾರ ಶವವನ್ನು ಹೂತಿದ್ದ ಬಗ್ಗೆ ತಿಳಿಸಿದ್ದಾರೆ.