Home ನಿಧನ ಸುದ್ದಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ

0

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸೀತಾರಾಂ ಯೆಚೂರಿ ಅವರು ಗುರುವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ, ಅವರು ಕೃತಕ ಉಸಿರಾಟದ ಬೆಂಬಲದಲ್ಲಿದ್ದರು.

2015ರಲ್ಲಿ ಪ್ರಕಾಶ್ ಕಾರಟ್ ಅವರ ನಂತರ ಯೆಚೂರಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾದರು.

ಯೆಚೂರಿ ಅವರು ಪಕ್ಷದ ದಿವಂಗತ ನಾಯಕ ಹರ್ಕಿಶನ್ ಸಿಂಗ್ ಸುರ್ಜೀತ್ ಅವರ ಅಡಿಯಲ್ಲಿ ರಾಜಕೀಯ, ಹೋರಾಟಗಳ ವಿದ್ಯೆಯನ್ನು ಕಲಿತರು, ಅವರು ವಿಪಿ ಸಿಂಗ್ ಅವರ ನ್ಯಾಷನಲ್‌ ಫ್ರಂಟ್ ಸರ್ಕಾರ ಮತ್ತು 1996-97ರ ಯುನೈಟೆಡ್ ಫ್ರಂಟ್ ಸರ್ಕಾರದಲ್ಲಿ ಮೊದಲ ಸಮ್ಮಿಶ್ರ ಯುಗದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಇವೆರಡೂ ಸರ್ಕಾರಗಳಿಗೆ ಸಿಪಿಐ(ಎಂ) ಹೊರಗಿನಿಂದ ಬೆಂಬಲ ನೀಡಿತ್ತು.‌

1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಗೆ ಸೇರಿದ ಯೆಚೂರಿ, ಮರುವರ್ಷವೇ ಪಕ್ಷದ ಸದಸ್ಯರಾದರು, ಕೆಲವು ತಿಂಗಳುಗಳ ನಂತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು.

ಯೆಚೂರಿಯವರ ನಿಧನದೊಂದಿಗೆ ದೇಶವು ಓರ್ವ ಧೀಮಂತ ಹಿರಿಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.

You cannot copy content of this page

Exit mobile version