Home ದೇಶ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆರೋಗ್ಯದಲ್ಲಿ ಏರುಪೇರು: ಮುಂಬೈನ ಬಾಂಬೆ ಆಸ್ಪತ್ರೆಗೆ ದಾಖಲು

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆರೋಗ್ಯದಲ್ಲಿ ಏರುಪೇರು: ಮುಂಬೈನ ಬಾಂಬೆ ಆಸ್ಪತ್ರೆಗೆ ದಾಖಲು

0

ಮುಂಬೈ: ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಅವರನ್ನು ಮುಂಬೈನ ಪ್ರತಿಷ್ಠಿತ ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕೆಮ್ಮು, ತೀವ್ರ ಜ್ವರ, ನಿಶ್ಯಕ್ತಿ ಮತ್ತು ನಿರ್ಜಲೀಕರಣದಿಂದ (dehydration) ಬಳಲುತ್ತಿದ್ದ ಅವರ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆತರಲಾಯಿತು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅತಿಯಾದ ನಿಶ್ಯಕ್ತಿಯ ಕಾರಣದಿಂದ ವೈದ್ಯರ ನಿಗಾದಲ್ಲಿಡಲಾಗಿದೆ. ಖ್ಯಾತ ವೈದ್ಯ ಡಾ. ಗೌತಮ್ ಭನ್ಸಾಲಿ ನೇತೃತ್ವದ ವೈದ್ಯರ ತಂಡವು ಅವರ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿ ಬಂದ ನಂತರ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

2011ರ ‘ಇಂಡಿಯಾ ಅಗೇನ್ಸ್ಟ್‌ ಕರಪ್ಷನ್’ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದ ಅಣ್ಣಾ ಹಜಾರೆ, ಇತ್ತೀಚೆಗೆ ನೀಟ್ (NEET) ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳಿಗೂ ಬೆಂಬಲ ಸೂಚಿಸಿದ್ದರು. ಯಾವುದೇ ಸಮಸ್ಯೆಗೆ ಹಿಂಸೆಯ ಬದಲಾಗಿ ಶಾಂತಿಯುತ ಪ್ರತಿಭಟನೆ ಮತ್ತು ಪ್ರಜಾಸತ್ತಾತ್ಮಕ ಸಂವಾದಗಳೇ ಏಕೈಕ ಪರಿಹಾರ ಎಂದು ಅವರು ಸದಾ ಪ್ರತಿಪಾದಿಸುತ್ತಾ ಬಂದಿದ್ದಾರೆ.

You cannot copy content of this page

Exit mobile version