ಸಮಾಜ ಕಲ್ಯಾಣ ಖಾತೆ ಹೆಚ್.ಸಿ ಮಹದೇವಪ್ಪರವರಿಗೆ ಬೇಡ – ಅಂಬೇಡ್ಕರ್ ಸೇನೆ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ (Cabinet) ಸಚಿವರಾಗಿದ್ದ ಹೆಚ್.ಸಿ. ಮಹದೇವಪ್ಪ (HC Mahadevappa) ಅವರ ಆಡಳಿತ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಹೆಚ್.ಸಿ. ಮಹದೇವಪ್ಪ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿ ದಲಿತರ (Dalits) ಹಿತ ಕಾಯುವ ಬೇರೆ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದೆ. ಸಂಘಟನೆಯ ಮುಖ್ಯಸ್ಥರಾದ ಡಾ. ಅರ್ಜುನ್ ಗೋಪಾಲಯ್ಯ ಅವರ ಮುಂದಾಳತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ರಾಜ್ಯದಲ್ಲಿ ದಲಿತ ಸಮುದಾಯದ ಪ್ರಗತಿಗೆ ಮೀಸಲಾಗಿದ್ದ ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಉಚಿತ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಾಗಲೂ ಸಚಿವರು ಮೂಕಪ್ರೇಕ್ಷಕರಾಗಿದ್ದರು, ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಮಾತ್ರ ದಲಿತ ಸಂಘಟನೆಗಳನ್ನು ಸಚಿವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೋರಾಟಗಾರರು ಗಂಭೀರವಾಗಿ ಹರಿಹಾಯ್ದಿದ್ದಾರೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಜನಪರ ಪ್ರಗತಿ ಕೆಲಸಗಳು ಆಗದಿರುವುದು ಹಾಗೂ ಕೆಲವು ಸಂಸ್ಥೆಗಳಿಗೆ ಪ್ರಲೋಭನೆ ಒಡ್ಡಿ ರಕ್ಷಣೆ ಪಡೆಯುತ್ತಿರುವುದು ಖಂಡನೀಯ ಎಂದಿದ್ದಾರೆ. ಶೋಷಿತರ ಹಕ್ಕುಗಳ ರಕ್ಷಣೆಗಾಗಿ ಇಲಾಖೆಗೆ ದಕ್ಷ ಅಧಿಕಾರಿಯನ್ನು ತರಲೇಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ತೀವ್ರ ಸ್ವರೂಪದ ಧರಣಿ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಸಿದೆ.

Related Articles

ಇತ್ತೀಚಿನ ಸುದ್ದಿಗಳು