Home ರಾಜ್ಯ ತುಮಕೂರು ಬಿಜೆಪಿ ಜೋಳಿಗೆಗೆ ತುಮಕೂರು, ಗೆಲುವಿನ ನಗೆ ಬೀರಿದ ಸೋಮಣ್ಣ

ಬಿಜೆಪಿ ಜೋಳಿಗೆಗೆ ತುಮಕೂರು, ಗೆಲುವಿನ ನಗೆ ಬೀರಿದ ಸೋಮಣ್ಣ

0

ತುಮಕೂರು: ರಾಜ್ಯದಲ್ಲಿ ಬಿಜೆಪಿ ಮೊದಲ ಖಾತೆಯನ್ನು ತೆರೆದಿದೆ. ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ, ಮೊದಲ ಖಾತೆಯನ್ನು ಕರ್ನಾಟಕದಲ್ಲಿ ಬಿಜೆಪಿ ತೆರೆದಂತೆ ಆಗಿದೆ.

ತುಮಕೂರು ಲೋಕಸಭಾ ಕ್ಷೇತ್ರದ 15ನೇ ಸುತ್ತಿನಲ್ಲಿ ಮತಏಣಿಕೆ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ 94482 ಮತಗಳ ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು.

ಇತ್ತೀಚಿನ ಮಾಹಿತಿಯಂತೆ ಅವರು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿಯನ್ನು ಘೋಷಣೆ ಮಾಡುವುದು ಮಾತ್ರವೇ ಬಾಕಿ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರದಿಂದ ಸೋತಿದ್ದ ಸೋಮಣ್ಣ ಸಂತೋಷ ಕೂಟದ ತಂತ್ರಗಳಿಂದ ಕಂಗಾಲಾಗಿದ್ದರು. ನಂತರ ಅವರು ಪಕ್ಷ ಬಿಡುತ್ತಾರೆನ್ನುವ ಸುದ್ದಿಯೂ ಓಡಾಡುತ್ತಿತ್ತು. ಬೆಂಗಳೂರಿನಿಂದ ಮೈಸೂರು ಕಡೆ ಹೋಗಿ ಮುಗ್ಗರಿಸಿ ಬಂದಿದ್ದ ಸೋಮಣ್ಣ ಕಡೆಗೂ ಸೋಮಣ್ಣ ತುಮಕೂರಿನಲ್ಲಿ ಗೆಲುವಿನ ನಗೆ ಬೀರಿದ್ದಾರೆ.

You cannot copy content of this page

Exit mobile version