ಹಾಸನ : ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ. ಈ ಪಕ್ಷವೇ ಯಾವಾಗಲೂ ಅಧಿಕಾರದಲ್ಲಿ ಇರುತ್ತದೆ ಎಂದುಕೊಂಡಿದ್ರೆ ಅದು ನಿಮ್ಮ ಭ್ರಮೆ. ಜಿಲ್ಲೆಯಲ್ಲಿ ಕ್ರೈಂ, ಕಳ್ಳತನ, ಹಾಡುಹಗಲೆ ಮರ್ಡರ್ ಗಳು, ಜೂಜುಗಳು ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಆಡಳಿತ ಸಂಪೂರ್ಣ ಕುಸಿದು ಹೋಗಿದೆ ಎಸ್ಪಿ ವಿರುದ್ಧ ವಾಗ್ದಾಳಿ ನಡೆಸಿ, ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸಾವನಪ್ಪಿದವರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಲ್ಲಾ ಸನ್ನಿವೇಶವನ್ನು ಜನರ ಮುಂದೆ ಇಟ್ಟು ಇನ್ನೊಂದು ವಾರದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶಾಸಕರುಗಳಾದ ಎಚ್.ಡಿ. ರೇವಣ್ಣ, ಎಚ್.ಪಿ. ಸ್ವರೂಪ್‌ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕರುಗಳಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಜಂಠಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣದ ವಿಚಾರವಾಗಿ ಮಾತನಾಡಿ, ಮೃತರ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕು. ಇಲ್ಲವಾದರೆ ನೊಂದ ಕುಟುಂಬಗಳು ಕಾನೂನು ಹೋರಾಟ ಮಾಡಲಿ. ಸರ್ಕಾರದ ಕಾರ್ಯಕ್ರಮದ ಬಳಿ ಏನೂ ಗಲಾಟೆ ಆಗಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರಾರು ಕಾರ್ಯಕ್ರಮಕ್ಕೆ ಬನ್ನಿ ಎಂದು ಹೇಳಿದ್ರಲ್ಲ. ಅದೆಲ್ಲ ಟಿವಿಯಲ್ಲಿ ಬರ್ತಿದೆ ಅಲ್ಲವೇ! ಮಕ್ಕಳ ಕಳೆದುಕೊಂಡ ಕುಟುಂಬದ ಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತೆ ಅವರ ಪರಿಸ್ಥಿತಿ ಯಾರಿಗು ಬರುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಯಾರ ಬಗ್ಗೆ ಟೀಕೆ ಮಾಡುವುದಿಲ್ಲ. ಪ್ರಾಮಾಣಿಕವಾದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು, ಸರ್ಕಾರದ ತಪ್ಪು ನಿರ್ಧಾರ. ದಯಾನಂದ್ ಪ್ರಮಾಣಿಕವಾಗಿ ಕೆಲಸ ಮಾಡಿರುವ ಅಧಿಕಾರಿ. ಅವರನ್ನು ಅಮಾನತು ಮಾಡಿರುವುದು ನನಗೆ ನೋವು ತಂದಿದೆ. ಹಿಂದಿನ ರಾತ್ರಿ 3-4 ಗಂಟೆಯವರೆಗೆ ಪಟಾಕಿ ಹೊಡೆಯುತ್ತಿದ್ದರು. ಪೊಲೀಸರು ಇಡೀ ರಾತ್ರಿ ಮಲಗೇ ಇಲ್ಲ. ಘಟನೆ ನಡೆದಿರುವುದು ನಿಜಕ್ಕೂ ದು:ಖದ ಸಂಗತಿ. ಮಕ್ಕಳನ್ನು ಕಳೆದುಕೊಂಡವರ ಪರಿಸ್ಥಿತಿ ಯಾರಿಗೂ ಬೇಡ, ಅವರ ಮಕ್ಕಳ ನೆನಪು ಬಂದರೆ ಹೇಗೆ ತಡೆದುಕೊಳ್ಳುತ್ತಾರೆ? 25 ಲಕ್ಷ ಕೊಟ್ಟು ಜೀವ ತಂದು ಕೊಡಿ ಎಂದು ಬೇಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾರ್ಯಕ್ರಮ ಏಕೆ ಮಾಡಿದ್ರು, ಸರ್ಕಾರ ಒಂದೇ ದಿನದಲ್ಲಿ ಮಾಡಬೇಕು ಎಂದು ಏಕೆ ತೀರ್ಮಾನ ಮಾಡಬೇಕಿತ್ತು, ಸರ್ಕಾರ ಕನಿಷ್ಠ ಐವತ್ತು ಲಕ್ಷ ಪರಿಹಾರ ಕೊಡಬೇಕು. ಆರ್‌ಬಿಸಿಯವರು 25 ಲಕ್ಷ, ಕೆಎಸ್‌ಸಿಎ ಸಂಸ್ಥೆ 25 ಲಕ್ಷ ಸೇರಿ ಒಟ್ಟು 1 ಕೋಟಿ ನೀಡುವಂತೆ ಆಗ್ರಹಿಸಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಮರುಗಿದರು.
ಹಾಸನ ಜಿಲ್ಲೆಯಲ್ಲಿ ಈ ಸರ್ಕಾರ ಬಂದ ಮೇಲೆ ಜಾಸ್ತಿ ಆಗಿವೆ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಶಾಂತಿ ಕೆಡಬಾರದು ಎಂದು ನಮಗೆ ಎಷ್ಟೇ ನೋವಿದ್ದರು, ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ರು ನೋವು ಸಹಿಸಿಕೊಂಡಿದ್ದೇವೆ. ಈ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಹಾಡುಹಗಲೇ ಮರ್ಡರ್‌ಗಳಾಗುತ್ತಿವೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ದೂರು ನೀಡಲು ಹೋದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಮನೆಗೆ ನುಗ್ಗಿ ಹಲ್ಲೆ ಮಾಡುತ್ತಿದ್ದಾರೆ. ಮನೆ ಮನೆಯೊಳಗೆ ಜೂಜಾಡಿಸುತ್ತಿದ್ದಾರೆ.
ಕ್ಲಬ್‌ಗಳು, ಇಸ್ಪಿಟ್ ದಂಧೆ, ಬಾರ್‌ಗಳಿಂದ ಮಾಮೂಲಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವಾಗ ಬೇಕಾದರೂ ಎಣ್ಣೆ ಸಿಗುತ್ತದೆ. ಕಾನೂನು ಬಾಹಿರವಾಗಿ ಸುಳ್ಳು ಕೇಸ್ ಹಾಕ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ರೌಡಿಶೀಟರ್ ಓಪನ್ ಮಾಡ್ತಿನಿ ಅಂತ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದು ತಿಳಿದುಕೊಂಡಿದ್ದರೆ ಆ ಭ್ರಮೆ ಬಿಡಬೇಕಾಗುತ್ತದೆ. ರೌಡಿ ಎಲಿಮೆಂಟ್ಸ್ನ ಯಾರು ತಡೆಯುತ್ತಿಲ್ಲ. ಹಿಂದಿನ ಎಸ್ಪಿಗಳು ಜಿಲ್ಲೆಯನ್ನು ಬಿಗಿಯಾಗಿ ಇಟ್ಟಿದ್ದರು. ಈಗ ಅದು ಬೇಸರಗೊಂಡಿದ್ದಾರೆ. ನಾನು ಮೂವತ್ತು ವರ್ಷ ಶಾಸಕ ಆಗದ್ದೇನೆ. ನಾನು ಯಾರಿಗಾದರೂ ಪೊಲೀಸರಿಗೆ ತೊಂದರೆ ಕೊಟ್ಟಿದ್ದೀನಾ ಕೇಳಿ! ಜೆಡಿಎಸ್ ಮುಗಿದೆ ಹೋಯಿತು ಅಂದುಕೊಂಡಿದ್ದಾರೆ ಆದರೇ ಈ ಅಧಿಕಾರಿಗಳಿಂದ ಏನು ಮಾಡಲು ಆಗಲ್ಲ, ಅದು ಜನತೆ ತೀರ್ಮಾನ ಮಾಡ್ತಾರೆ. ಎಲ್ಲಾ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ. ಶಾಂತಿಯುತ ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ತರುತ್ತವೆ. ದಂಧೆಕೋರರಿಗೆ ಪೊಲೀಸರಿಂದ ಪೂರ್ಣ ಸಹಕಾರ ಇದ್ದು, ಎಸ್ಪಿ ಅವರು ಒಂದು ಫೋನ್ ಮಾಡಿದರೆ ಸಾಕು ಏನು ಬೇಕಾದರೂ ಮಾಡುತ್ತಾರೆ. ಯಾವ ಊರಿಗೆ ಹೋದರು ಗಲಾಟೆ, ದುಡ್ಡಿಗಾಗಿ ಹೊಡೆದಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ, ಸರಗಳ್ಳತನ ಜಾಸ್ತಿಯಾಗಿದೆ. ಚೈನ್ ಕಳ್ಳತನ ಹಿಡಿದಿದ್ದೇವೆ ಎಂದು ಮಾರ್ವಾಡಿಗಳ ಬಳಿ ಚಿನ್ನಾಭರಣ ವಸೂಲಿ ಮಾಡುತ್ತಿದ್ದಾರೆ. ಸರಕಾರಿ ಕೆಲಸದಲ್ಲಿ ಇದ್ದು, ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ. ಈ ಪಕ್ಷವೇ ಯಾವಾಗಲೂ ಅಧಿಕಾರದಲ್ಲಿ ಇರುವುದಿಲ್ಲ. ಒಂದು ವಾರದ ನಂತರ ಶಾಂತಿಯುತ ಪ್ರತಿಭಟನೆ ಮಾಡ್ತಿವಿ. ತಲೆ ಬುರುಡೆಗೆ ಹೊಡೆದವರ ಮೇಲೂ ಕೇಸ್, ಹೊಡೆಸಿಕೊಂಡವನಿಗೂ ಕೇಸ್ ಮಾಡ್ತರ್ವೆ. ನೀವು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ ಎಂದ ಅವರು, ಕಾಂಗ್ರೆಸ್ ಸರ್ಕಾರ ಯಾವಾಗಲೂ ಅಧಿಕಾರದಲ್ಲಿರುತ್ತಾ! ಬೆಂಗಳೂರಿನಲ್ಲಿ ಏನಾಯ್ತು, ಪ್ರಾಮಾಣಿಕವಾದಂತಹ ಅಧಿಕಾರಿಗಳು ಬಲಿಯಾದರು. ದಯಾನಂದ್ ಅವರಂತಹ ಪ್ರಾಮಾಣಿಕ ಅಧಿಕಾರಿ ಬಲಿಯಾದರು.
ನೀವು ಅದೇ ತರ ಬಲಿಯಾಗ್ತಿರಾ, ನಾನು ಉಳಿದುಕೊಳ್ತೇನೆ ಎಂದು ಅಂದುಕೊಂಡಿದ್ದರೆ ಅದು ಕನಸು, ಎಸ್ಪಿ ಅವರಿಗೆ ಧೀಮಾಕು ಇದ್ದರೆ ಬಿಡಬೇಕು. ನಿಮ್ಮ ಧೀಮಾಕು ನಮ್ಮ ಬಳಿ ನಡೆಯಲ್ಲ. ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಎಸ್ಪಿನೇ ನೇರ ಹೊಣೆ! ಎಎಸ್‌ಪಿ ಇನ್ನೂ ನಾಲ್ಕು ತಿಂಗಳಿದೆ ಹಾಗಾಗಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಎಎಸ್‌ಪಿ ಕಳ್ಳರ ಗ್ಯಾಂಗ್ ಇಟ್ಟುಕೊಂಡವನಂತೆ ಎಂದು ಆರೋಪಿಸಿ
ಹಾಸನ ಜಿಲ್ಲೆ ಪೊಲೀಸ್ ಇಲಾಖೆ ವಿರುದ್ಧ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.