ಹಾಸನ : ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು ಎಸ್ಪಿ ಮೊಹಮ್ಮದ್ ಸುಜಿತಾ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಒತ್ತಾಯಿಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ, ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಹಮ್ಮದ್ ಸುಜಿತ ಅವರು ಬಂದ ನಂತರ ಕಾನೂನು ಸಂಪೂರ್ಣ ಕುಸಿದಿದ್ದು ಹಾಸನ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ದರೋಡೆ, ಗಾಂಜಾ, ಡ್ರಗ್, ಜೂಜಾಟ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಎಂಬಂತೆ ನೆನ್ನೆ ನಡೆದ ಗಾಂಜಾ ನಶೆಯಲ್ಲಿ ಯುವಕನ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿ ಬೆಳಿಸಿದೆ. ಘಟನೆ ನಡೆದು ಒಂದು ದಿನ ಕಳೆದರೂ ಪೊಲೀಸ್ ಇಲಾಖೆಗೆ ಕೊಲೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಆ ಯುವಕ ವಿಡಿಯೋ ಮಾಡಿಟ್ಟ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದಾಗ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ.
ಹಾಗಾದರೆ ಇವರ ಇಂಟಲಿಜೆನ್ಸ್ ಏನ್ ಮಾಡುತ್ತಿದೆ.? ಚಿಕ್ಕ ಚಿಕ್ಕ ಯುವಕರ ಕೈಗೆ ಗಾಂಜಾ ಸುಲಭವಾಗಿ ಸಿಗುತ್ತಿದೆ ಎಂದರೆ ಇದರ ಅರ್ಥ ಏನು, ಗಾಂಜಾ, ಅಫಿಮು ಎಲ್ಲಿಂದ ಬರುತ್ತಿದೆ, ಶಾಲಾ ಕಾಲೇಜು ವಿದ್ಯಾರ್ಥಿಗಳ ಕೈಗೆ ಔಷಧಿಗಳು ಸಿಗುವಷ್ಟು ಸುಲಭವಾಗಿ ಡ್ರಗ್ಸ್ ಗಾಂಜಾ ಸಿಗುವಂತಾಗಿದೆ, ಹಾಗಿದ್ದರೆ ಹಾಸನ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕರ್ತವ್ಯ ಏನು? ಎಂದು ಪ್ರಶ್ನಿಸಿದರು.ಇನ್ನು ಮಹಿಳೆಯರು ಮಕ್ಕಳು ರಾತ್ರಿ ವೇಳೆ ಓಡಾಡುವುದು ಕಷ್ಟವಾಗಿದೆ. ಬೈಕ್ ವೀಲಿಂಗ್ ಹಾಗೂ ಸರಗಳ್ಳತನ ಇನ್ನಿತರ ಪ್ರಕರಣಗಳು ಕೂಡ ಎಗ್ಗಿಲ್ಲದೆ ಸಾಗುತ್ತಿವೆ, ಎಲ್ಲವನ್ನೂ ನೋಡಿಕೊಂಡು ಎಸ್ಪಿ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಪೊಲೀಸ್ ಇಲಾಖೆ ಯಲ್ಲಿ ಇಂಟಲಿಜೆನ್ಸ್ ಗೆ ಮಾಹಿತಿಯೇ ಇಲ್ಲ .
ಹಾಸನದಲ್ಲಿ ಜನರು ಬದುಕುವುದಾದರೂ ಹೇಗೆ ?ಇನ್ನು ಇಸ್ಪೀಟ್ , ಜೂಜಾಟ, ಮಟ್ಕಾ ಇನ್ನಿತರ ಚಟುವಟಿಕೆಗಳು ಕೂಡ ನಿರಂತರವಾಗಿ ಹೆಗ್ಗಿಲ್ಲದೆ ಸಾಗುತ್ತಿದೆ, ಮಹಮ್ಮದ್ ಸುಜಿತಾ ಅವರು ಹಾಸನ ಜಿಲ್ಲೆಗೆ ಎಸ್ಪಿ ಆಗಿ ಬಂದ ನಂತರ ಎಷ್ಟು ಅಡ್ಡಗಳ ಮೇಲೆ ದಾಳಿ ಮಾಡಿದ್ದಾರೆ, ಎಷ್ಟು ಆರೋಪಿಗಳನ್ನು ಬಂಧಿಸಿದ್ದಾರೆ.ಕಣ್ಣೆದುರೆ ಕಂಡರೂ ಕಾಣದಂತಿರುವ ಇಂತಹ ಎಸ್ ಪಿ ಹಾಸನ ಜಿಲ್ಲೆಗೆ ಅವಶ್ಯಕವಿದೆಯೇ. ಕೂಡಲೆ ಸರ್ಕಾರ ಇವರನ್ನು ವರ್ಗಾವಣೆ ಮಾಡಿ ನಮಗೆ ದಕ್ಷ ಪೊಲೀಸ್ ಅಧಿಕಾರಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಸರ್ಕಾರ ಇಂತಹ ಬೇಜಾವಾಬ್ದಾರಿ ಎಸ್ ಪಿ ಯನ್ನು ವರ್ಗಾವಣೆ ಮಾಡಿ ನಮಗೆ ದಕ್ಷ ಅಧಿಕಾರಿಯನ್ನು ನಿಯೋಜಿಸಬೇಕು. ಜೊತೆಗೆ ಹಾಸನ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಕಾನೂನು ಬಹಿರ ಚಟುವಟಿಕೆಗಳ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ನಡೆಯುತ್ತಿರುವ ನಿರಂತರ ಧಾಳಿ ಖಂಡಿಸಿ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು, ಎಲ್ಲಾ ಪಕ್ಷಗಳ ನಾಯಕರು, ಸಾಹಿತಿಗಳು ಎಲ್ಲರನ್ನೂ ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.ಅಥವಾ ಆಮ್ ಆತ್ಮಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅತಿ ಶೀಘ್ರದಲ್ಲಿ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮಂಜು, ಕಾರ್ಯದರ್ಶಿ ಖಾದರ್, ಕಾರ್ಯಕರ್ತೆ ಶೋಭಾ ಹಾಜರಿದ್ದರು.
