ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸ್ತನ್ಯಪಾನ ಸಪ್ತಾಹ ವಿಶೇಷ | ಮತ್ತೆ ಮತ್ತೆ ನೆನಪಾಗುತ್ತಾರೆ ಆ ʼಅಮ್ಮʼ

P

Peepal Media • ವಿಶೇಷ

• 3 ನಿಮಿಷದ ಓದು

ಸ್ತನ್ಯಪಾನ ಸಪ್ತಾಹ ವಿಶೇಷ | ಮತ್ತೆ ಮತ್ತೆ ನೆನಪಾಗುತ್ತಾರೆ ಆ ʼಅಮ್ಮʼ

ಇಲ್ಲಿ ನೆನಪಾಗುವ ಮತ್ತೊಂದು ಘಟನೆಯೆಂದರೆ ಅತ್ತೆಗೆ ಆಪರೇಷನ್ ಆಗಿದ್ದಾಗ  ಆಸ್ಪತ್ರೆ ಯಲ್ಲಿ ಹಸಿವಿನಿಂದ ಅಳುತ್ತಿದ್ದ ಇವರನ್ನು ಸಂತೈಸಲು ಎಲ್ಲರೂ ಹೆಣಗುತ್ತಿದ್ದಾಗ ಅಲ್ಲಿಗೆ ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ  ಎದೆ ಹಾಲು ಕುಡಿಸಿದ್ದರಂತೆ. ಅದನ್ನು ನನ್ನ ಗಂಡ ಆಗಾಗ್ಗೆ  ಹೇಳುತ್ತಲೇ ಇರುತ್ತಾರೆ. ಅಳುವಾಗ ಹಾಲುಣಿಸಿ ಹಸಿವು ನೀಗಿದ ಆ ತಾಯಿ ಹೇಗಿರಬಹುದು? ಎಲ್ಲಿರಬಹುದು??..ಉಮಾದೇವಿ ಕೆ ಎಸ್‌, ತುಮಕೂರು.

ಆಗಸ್ಟ್ ಒಂದರಿಂದ ಏಳರವರೆಗೆ ‘ಸ್ತನ್ಯಪಾನ ಸಪ್ತಾಹ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನನಗೆ ಹಿಂದಿನ ಸಂಗತಿಯೊಂದು ನೆನಪಾಗುತ್ತಿದೆ.

ಫೇಸ್‌ಬುಕ್‌ ನ ಗ್ರೂಪ್ ಒಂದರಲ್ಲಿ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು ಅದೇನೆಂದರೆ-

“ಎದೆ ಹಾಲು ಕುಡಿಯುತ್ತಿರುವ ಒಂದೂವರೆ ವರ್ಷದ ತಮ್ಮ ಮಗು ಸರಿಯಾಗಿ ಊಟ ತಿಂಡಿ ತಿನ್ನುವುದಿಲ್ಲ. ಬಹಳ ಜನ ಹಾಲು ಬಿಡಿಸುವಂತೆ ಹೇಳುತ್ತಿದ್ದಾರೆ ” ಎಂದು. ಅದಕ್ಕೆ ಉತ್ತರವಾಗಿ ಕೆಲವರು ಹಾಲು ಬಿಡಿಸುವಂತೆ ಕಮೆಂಟ್ ಕೂಡಾ ಮಾಡಿದ್ದರು. 

ಆದರೆ ನನಗೆ ಅದಿನ್ನೂ ಹಾಲುಕುಡಿಯುವ ಹಸುಳೆ  ಅನಿಸಿತು. ( ಒಂದೂವರೆ  ವರ್ಷ ಅಂದರೆ ಸಣ್ಣ ಮಗುವೇ ತಾನೇ? )  ಅಲ್ಲದೆ ಊಟ ತಿಂಡಿ ಜೀವಮಾನವಿಡೀ ಮಾಡುವುದು ಇದ್ದೇ ಇದೆ. ಆದರೆ  ಅಮ್ಮನಹಾಲು? ಆ ಅವಧಿಯಲ್ಲಿ ಮಾತ್ರವೇ ಕುಡಿಯಲು ಸಾಧ್ಯ ಅನ್ನಿಸಿ  “ಇನ್ನೂ ಒಂದೂವರೆ ವರ್ಷಕ್ಕೇ ಹಾಲು ಬಿಡಿಸುವುದಾ? ಖಂಡಿತಾ ಬೇಡ.  ಕೆಲವು ಮಕ್ಕಳು ಹಾಗಿರುತ್ತಾರೆ. ಉಪಾಯವಾಗಿ ತಿನ್ನಿಸಿ. ಹಾಲು ಮಾತ್ರ ಬಿಡಿಸಬೇಡಿ. ನನ್ನ ಮಗಳದ್ದೂ ಇದೇ ಸಮಸ್ಯೆ. ಅವಳಿಗೂ ಹಾಲು ಕುಡಿಸುವುದನ್ನು ನಿಲ್ಲಿಸುವಂತೆ ತುಂಬಾ ಜನ ಹೇಳಿದರೂ ನಾನು ಮಾತ್ರ ಐದು ವರ್ಷಗಳ ವರೆಗೆ ಕುಡಿಸಿದೆ” ಎಂದು ಕಮೆಂಟ್ ಮಾಡಿದೆ. ಅದನ್ನು ತುಂಬಾ ಜನ ಲೈಕ್ ಮಾಡಿದ್ದರು. ಕೆಲವರು ಪ್ರೀತಿಯಿಂದ, ಮತ್ತೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿ.ಅದರಲ್ಲಿ ಒಬ್ಬರು ಮಾತ್ರ ನಕ್ಕಿದ್ದರು.

ಅವರು ಯಾಕೆ ನಕ್ಕರೆಂದು ಅರ್ಥ ಆಗಲಿಲ್ಲ. ಇದರಲ್ಲಿ ನಗುವಂಥದ್ದು ಏನಿದೆ? ಎಂದುಕೊಂಡು ಅವರ ಹೆಸರು ಮೆನ್ಶನ್ ಮಾಡಿ ಕಾರಣ ಕೇಳಿದೆ. ಅದಕ್ಕೆ ಅವರು “ಐದು ವರ್ಷಗಳ ಹೊತ್ತಿಗೆ ಮಗುವಿಗೆ ಹಲ್ಲು ಬಂದಿರುತ್ತವೆ. ಅಲ್ಲದೆ ಮಗು ಸ್ಕೂಲ್ ಗೂ ಹೋಗ್ತಾ ಇರುತ್ತೆ “. ಎಂದಿದ್ದರು. 

“ನನ್ನ  ಮಗಳಿಗೆ ಬಂದಿದ್ದ ಹಲ್ಲುಗಳಿಂದಾಗಲೀ ಅವಳು ಸ್ಕೂಲ್ ಗೆ ಹೋಗುವುದಾಗಲೀ ಹಾಲು ಕುಡಿಸಲು ಅಡ್ಡಿ ಬರಲಿಲ್ಲ. ಅಲ್ಲದೆ ನನ್ನ ಮಗಳು ಒಂದು ವರ್ಷ ಎಂಟು ತಿಂಗಳಿಗೇ ಸ್ಕೂಲ್ ಗೆ ಸೇರಿದ್ದಳು” ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಅವರಿಗೆ ಇನ್ನೂ ನಗು ಬಂತು…ಅಷ್ಟು ಬೇಗ ಯಾವ ಸ್ಕೂಲ್ ನಲ್ಲಿ ತಾನೇ ಸೇರಿಸಿಕೊಳ್ತಾರೆ ಎಂದು ಪ್ರಶ್ನೆ ಮಾಡಿದರು. ನಾನು  ಸ್ಕೂಲ್ ನ ಹೆಸರು ತಿಳಿಸಿದೆ. ಅಷ್ಟೇ ಅಲ್ಲದೆ ಪರೀಕ್ಷೆ ಬರೆಯಲು ಹೋಗುತ್ತಿದ್ದ ನನ್ನ  ಗಂಡನ ಅಣ್ಣನ ಮಗಳ ಮಗುವಿಗೂ ಕೆಲವು ದಿನ ಹಾಲು ಕುಡಿಸಿದ್ದೆ. “ಇದನ್ನು ಹೇಳಲು ನನಗೆ ಸಂಕೋಚ ಆಗುತ್ತಿಲ್ಲ ಬದಲಿಗೆ ಹೆಮ್ಮೆ ಅನಿಸುತ್ತೆ” ಎಂದು ಉತ್ತರಿಸಿ “ಮತ್ತೆ ಮತ್ತೆ ನೀವು ಪ್ರಶ್ನೆ ಮಾಡುವುದನ್ನು ನೋಡಿದರೆ ನನ್ನ ಮಾತುಗಳು ನಿಮಗೆ ಸುಳ್ಳು ಅನಿಸ್ತಾ ಇರಬಹುದು. ಸುಳ್ಳು ಹೇಳುವ ಅಗತ್ಯ ನನಗಿಲ್ಲ” ಎಂದೆ.

ಆ ಮಾತುಗಳು ಅಷ್ಟಕ್ಕೇ ನಿಂತವು.

 ಅಮ್ಮನ ಹಾಲು ಅಮೃತ ಎನ್ನುತ್ತಾರೆ.ಎಷ್ಟೋ ತಾಯಂದಿರಿಗೆ ಮಕ್ಕಳಿರುತ್ತಾರೆ ಕುಡಿಸಲು ಹಾಲಿರುವುದಿಲ್ಲ. ಮತ್ತೆ ಕೆಲವರಿಗೆ ಹಾಲಿದ್ದರೂ ಮಕ್ಕಳಿರುವುದಿಲ್ಲ. ಮತ್ತೂ ಕೆಲವರಿಗೆ ಕುಡಿಸಲು ಸಮಯವೇ ಇರುವುದಿಲ್ಲ.

ನನ್ನ ಮಗ ನನ್ನಿಂದ ದೂರಾದಾಗ  ಎದೆಯೊಳಗೆ ಹಾಲೂ ಇತ್ತು…..ಜೊತೆಗೆ ಎಂದಿಗೂ ಅಳಿಯದ ನೋವೂ ಕೂಡಾ….

ಹಾಲು ಬತ್ತಿದರೂ ನೋವು ಬತ್ತಲಿಲ್ಲ.

ಕೇರಳದ ಪತ್ರಿಕೆಯೊಂದರ  ಕವರ್ ಪೇಜ್ ನಲ್ಲಿದ್ದ ಮಗುವಿಗೆ ಹಾಲೂಡಿಸುವ ಚಿತ್ರ ವಿವಾದಕ್ಕೆ ಒಳಗಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಪರದೇಶದ ಸದನದಲ್ಲಿ ಸಚಿವೆಯೊಬ್ಬರು ತಮ್ಮ ಮಗುವಿಗೆ ಹಾಲು ಕುಡಿಸುತ್ತಲೇ ಉತ್ತರಿಸುತ್ತಿರುವ ಚಿತ್ರ ಸುದ್ದಿಯಾಗಿದ್ದನ್ನೂ ನೆನೆಯಬಹುದು.

ಬ್ರೆಜಿಲಿನ ಮಹಿಳೆ ಸದನದಲ್ಲಿ ಹಾಲೂಡಿಸಿದ್ದು

“ನಾಯ ಮೊಲೆಯ ಹಾಲು  ದೇವರಿಗೂ ಅಲ್ಲ ದಿಂಡರಿಗೂ ಅಲ್ಲ” ಎಂಬುದು ಬಹಳ ಹಳೆಯ ಮಾತು. ಅದು ಯಾರಿಗಲ್ಲದಿದ್ದರೂ ಅದರ ಮರಿಗಳಿಗೆ ಅಮೃತವೇ ಆಗಿದೆ. ದೇವರು ದಿಂಡರು ಮುಖ್ಯ ಅಲ್ಲವೇ ಅಲ್ಲ.

“ತಾಯಿಗಾಗಲೀ ಮಗುವಿಗಾಗಲೀ ಅಭ್ಯಂತರವಿಲ್ಲದಿದ್ದರೆ ಕೆಲವು ವರ್ಷಗಳವರೆಗೂ ಹಾಲೂಡಿಸಬಹುದು. ಕಡೇ ಪಕ್ಷ 2 ವರ್ಷವಾದರೂ ಹಾಲು ಕುಡಿಸಲೇಬೇಕು. ಏಕೆಂದರೆ ಎದೆಹಾಲಿನಲ್ಲಿರುವ ಕೆಲವು ಪೌಷ್ಟಿಕಾಂಶಗಳು ಮಗುವಿನ ಮಿದುಳಿನ  ಬೆಳವಣಿಗೆಗೆ ಸಹಕಾರಿಯಾಗಿವೆ ಅಲ್ಲದೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ” ಎನ್ನುತ್ತಾರೆ ವೈದ್ಯರು. ಅಲ್ಲದೆ ಮಗುವಿಗೆ ಆರು ತಿಂಗಳು ತುಂಬುವವರೆಗೂ ತಾಯಿ ಹಾಲನ್ನೇ ಕುಡಿಸಬೇಕೆಂದೂ ಕೂಡಾ ಹೇಳುತ್ತಾರೆ. ಇದರಿಂದ ತಾಯಿ-ಮಗುವಿನ  ನಡುವಿನ ಬಾಂಧವ್ಯ ಕೂಡಾ ಹೆಚ್ಚುತ್ತದೆ.

ಎದೆಹಾಲು ಕುಡಿಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ತಾಯಿ-ಮಗುವಿಗೆ ಅನುಕೂಲವಾಗುವಂತೆ ಎದೆಹಾಲಿನ ಬ್ಯಾಂಕ್ ಅಥವಾ ಲ್ಯಾಕ್ಟೇರಿಯಮ್ ಗಳು ಇರುವುದು ಸಮಾಧಾನದ ವಿಷಯ.

“ಜೈವಿಕ ತಾಯಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ ಅದಕ್ಕೆ ಮೊದಲ ಪರ್ಯಾಯವೆಂದರೆ ಸಂಗ್ರಹಿಸಿದ  ಮಾನವ ಹಾಲನ್ನು ಬಳಸುವುದು” ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳುತ್ತದೆ.

ನನ್ನ ಅತ್ತೆಗೆ ನನ್ನ ಗಂಡನೇ ಕಿರಿಯ ಮಗುವಾದ್ದರಿಂದ  ಆರೇಳು ವರ್ಷಗಳ ವರೆಗೂ ಹಾಲು ಕುಡಿಸುತ್ತಿದ್ದರಂತೆ. ಹಾಲು ಬಿಡಿಸಬೇಕೆಂದು ಬೇವಿನ ಸೊಪ್ಪನ್ನು ಅರೆದು ಸವರಿಕೊಂಡಿದ್ದರೂ ಸ್ಕೂಲ್ ನಿಂದ ಬಂದವರೇ ಅದಕ್ಕೆಲ್ಲಾ ಎಂಜಲು ಹಚ್ಚಿ ಅಮ್ಮನ ಸೆರಗಿನಿಂದಲೇ ಒರೆಸಿ ಕುಡಿಯುತ್ತಿದ್ದರಂತೆ.

ಇಲ್ಲಿ ನೆನಪಾಗುವ ಮತ್ತೊಂದು ಘಟನೆಯೆಂದರೆ ಅತ್ತೆಗೆ ಆಪರೇಷನ್ ಆಗಿದ್ದಾಗ  ಆಸ್ಪತ್ರೆ ಯಲ್ಲಿ ಹಸಿವಿನಿಂದ ಅಳುತ್ತಿದ್ದ ಇವರನ್ನು ಸಂತೈಸಲು ಎಲ್ಲರೂ ಹೆಣಗುತ್ತಿದ್ದಾಗ ಅಲ್ಲಿಗೆ ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ  ಎದೆ ಹಾಲು ಕುಡಿಸಿದ್ದರಂತೆ. ಅದನ್ನು ನನ್ನ ಗಂಡ ಆಗಾಗ್ಗೆ  ಹೇಳುತ್ತಲೇ ಇರುತ್ತಾರೆ.

ಅಳುವಾಗ ಹಾಲುಣಿಸಿ ಹಸಿವು ನೀಗಿದ ಆ ತಾಯಿ ಹೇಗಿರಬಹುದು? ಎಲ್ಲಿರಬಹುದು??…

‘ಮತೀಯ ಮತಿ’ಗಳೇ ಹೆಚ್ಚು ತುಂಬಿರುವ ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಾರೆ ಆ ಅಮ್ಮ.

ಉಮಾದೇವಿ ಕೆ ಎಸ್‌

ತುಮಕೂರು

ಇದನ್ನೂ ಓದಿ-ವಿವಾಹವಾಗಿ 24 ದಿನಗಳು.. ಗರ್ಭಕ್ಕೆ 36 ದಿನಗಳು-ಇದು ಕೂಡಾ ಸಾಧ್ಯ!

ವಿಷಯಗಳು: #india #kannada #karnataka #peepal #peepalmedia
P

Peepal Media

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version