ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸುಂಕ ಹೆಚ್ಚಳ ಸಮರ : ಜಾಗತಿಕವಾಗಿ ಅಮೇರಿಕಾಗೆ ದೊಡ್ಡ ಹೊಡೆತಕ್ಕೆ ಚೀನಾ ಸಜ್ಜು

PPeepal Media Desk

Peepal Media Desk ವಿಶೇಷ

• 1 ನಿಮಿಷದ ಓದು

ಸುಂಕ ಹೆಚ್ಚಳ ಸಮರ : ಜಾಗತಿಕವಾಗಿ ಅಮೇರಿಕಾಗೆ ದೊಡ್ಡ ಹೊಡೆತಕ್ಕೆ ಚೀನಾ ಸಜ್ಜು

ಅಮೆರಿಕದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಡೊನಾಲ್ಡ್ ಟ್ರಂಪ್‌ ಜಾಗತಿಕ ಮಟ್ಟದಲ್ಲಿ ಕೆಲ ಆಘಾತಕಾರಿ ಹಾಗೂ ಜನವಿರೋಧಿ ನಿಲುವುಗಳ ಕಾರಣದಿಂದಲೇ ಹೆಚ್ಚು ಸುದ್ದಿಗೆ ಬಂದಿದ್ದಾರೆ. ಅದರಲ್ಲೂ ಚೀನಾ ಮೇಲಿನ ಸುಂಕ ಸಮರವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಅಮೇರಿಕಾಗೆ ಈಗ ಚೀನಾ ದೊಡ್ಡ ಹೊಡೆತ ನೀಡಲು ಸಜ್ಜಾಗಿದೆ.

ಚೀನಾದಲ್ಲಿ ಉತ್ಪಾದನೆ ಆಗುವ ಡಿಸ್ಟ್ರೋಸಿಯಮ್‌, ನಿಯೋಡೈಮಿಯಮ್‌ ಎನ್ನುವ ಅಪರೂಪದ ಲೋಹಗಳನ್ನು ಅಮೇರಿಕಾಗೆ ಈವರೆಗೆ ಚೀನಾ ಸರಬರಾಜು ಮಾಡುತ್ತಿತ್ತು. ಆದರೆ ಇನ್ನು ಮುಂದೆ ಅಮೇರಿಕಾಗೆ ಇದರ ರಫ್ತನ್ನು ಸಂಪೂರ್ಣ ನಿಲ್ಲಿಸಲು ಚೀನಾ ಉದ್ದೇಶಿಸಿದೆ. ಕೇವಲ ಒಂದು ದಿನದ ಹಿಂದಷ್ಟೇ ಚೀನಾದ ಆಮದುಗಳ ಮೇಲೆ 245 ಪ್ರತಿಶತದವರೆಗೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿತ್ತು. ಆದರೆ ಈಗ ಚೀನಾ ಅಪರೂಪದ ಲೋಹದ ರಫ್ತು ನಿಲ್ಲಿಸುವ ಮೂಲಕ ಅಮೇರಿಕಾ ವಿರುದ್ಧ ನೇರ ಯುದ್ಧಕ್ಕೆ ನಿಂತಿದೆ.

ವಿಶೇಷವಾಗಿ ಸೆಮಿ ಕಂಡಕ್ಟರ್‌ಗಳು, ಇಂಧನ ವಲಯ, ಎಲೇಕ್ಟ್ರಾನಿಕ್‌ ಡಿಸ್‌ಪ್ಲೇ, ರಕ್ಷಣಾ ಉಪಕರಣಗಳು ಸೇರಿದಂತೆ ಬಹುತೇಕ ತಂತ್ರಜ್ಞಾನಗಳ ಬಳಕೆಗೆ ಈ ಲೋಹ ಅಗತ್ಯವಾಗಿವೆ. ಇನ್ನೂ ಗಮನಾರ್ಹ ಅಂಶವೆಂದರೆ ಇಡೀ ವಿಶ್ವದಲ್ಲಿಯೇ ಇದರ ಉತ್ಪಾದನೆಯ ಶೇಕಡಾ 90 ರಷ್ಟು ಪಾಲು ಚೀನಾದ್ದಿದೆ. ಅಮೆರಿಕದ ತೆರಿಗೆ ನೀತಿಯಿಂದ ರೋಸಿ ಹೋಗಿರುವ ಚೀನಾ ಇದೀಗ ಇದರ ರಫ್ತಿಗೆ ನಿರ್ಬಂಧವನ್ನು ವಿಧಿಸಲು ಸಿದ್ಧವಾಗಿದೆ. ಚೀನಾ ಈ ಕ್ರಮ ಕೈಗೊಂಡರೆ ಐಟಿ ಕ್ಷೇತ್ರವನ್ನೇ ಅವಲಂಬಿಸಿರುವ ಅಮೇರಿಕಾಗೆ ಭಾರೀ ಹೊಡೆತ ಬೀಳಲಿದೆ, ಇಷ್ಟೇ ಅಲ್ಲದೆ ಸೆಮಿ ಕಂಡಕ್ಟರ್‌ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆಗೆ ತೀವ್ರ ಹಿನ್ನಡೆಯಾಗಲಿದೆ.

ಇಷ್ಟೇ ಅಲ್ಲದೆ ಅಮೆರಿಕದಲ್ಲಿ ಉತ್ಪಾದನೆಯಾಗುವ ಬೋಯಿಂಗ್‌ ಕಂಪನಿಯ ವಿಮಾನಗಳನ್ನು ಖರೀದಿಸುವುದನ್ನು ಚೀನಾ ಸ್ಥಗಿತಗೊಳಿಸಿದೆ. ಈ ಕುರಿತು ಚೀನಾ ಸರ್ಕಾರವು ತನ್ನ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಡೊನಾಲ್ಡ್ ಟ್ರಂಪ್ ನ ದಿನಕ್ಕೊಂದು ತೆರಿಗೆ ನೀತಿಯ ಪರಿಣಾಮವಾಗಿ ಈಗಾಗಲೇ ಹಾರಾಟಕ್ಕೆ ಸಿದ್ದವಾಗಿರುವ ವಿಮಾನಗಳ ಖರೀದಿಗೂ ಬ್ರೇಕ್‌ ಹಾಕಿದೆ. ಅಲ್ಲದೆ ವಿಮಾನಗಳ ತಯಾರಿಕೆಗಾಗಿ ಬಳಸುವ ಅಮೆರಿಕದ ಕಂಪನಿಗಳ ವಿಮಾನಕ್ಕೆ ಸಂಬಂಧಿಸಿದ ಉಪಕರಣ, ಬಿಡಿ ಭಾಗಗಳ ಖರೀದಿಯನ್ನು ಮಾಡದಂತೆ ತಾಕೀತು ಮಾಡಿದೆ. ಇದು ಅಮೇರಿಕಾಗೆ ಆಘಾತ ಅಷ್ಟೇ ಅಲ್ಲದೆ ಆರ್ಥಿಕವಾಗಿ ದೊಡ್ಡ ನಷ್ಟಕ್ಕೆ ಕಾರಣವಾಗುವ ನಿರೀಕ್ಷೆ ಎದುರಾಗಿದೆ.

ಚೀನಾದ ಈ ನಿರ್ಧಾರಕ್ಕೆ ಅಮೇರಿಕಾ ನೇರ ಮಾತುಕತೆಗೆ ಹೆಜ್ಜೆ ಇಟ್ಟರೆ ಭವಿಷ್ಯದಲ್ಲಿ ತನ್ನ ದೊಡ್ಡಣ್ಣನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಹಾಗೊಂದು ವೇಳೆ ಇದೇ ರೀತಿ ಸುಂಕ ಹೆಚ್ಚಳದ ಹುಚ್ಚು ನಿರ್ಧಾರಕ್ಕೆ ಚೀನಾ ಮುಂದಾದರೆ ಮುಂದಿನ ದಿನಗಳಲ್ಲಿ ಅಮೇರಿಕಾಗೆ ದೊಡ್ಡ ಆಘಾತ ಕಾದಿದೆ. ತನ್ನ ಸ್ವಯಂಕೃತ ಅಪರಾಧದಿಂದ ಇದೀಗ ಟ್ರಂಪ್‌ ತೀವ್ರ ಆಘಾತಕ್ಕೊಳಗಾಗಿದ್ದಾರೆ.

PPeepal Media Desk

Peepal Media Desk

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು