ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದ್ರೌಪದಿ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರೂ ಸಹಾಯಕ್ಕೆ ಬರ್ಲಿಲ್ಲ – ಕೆ.ನೀಲಾ

PPeepal Media Desk

Peepal Media Desk • ವಿಶೇಷ

• 1 ನಿಮಿಷದ ಓದು

ದ್ರೌಪದಿ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರೂ ಸಹಾಯಕ್ಕೆ ಬರ್ಲಿಲ್ಲ – ಕೆ.ನೀಲಾ

ಬಿಜೆಪಿಯವ್ರು ರಾಮಾಯಣ- ಮಹಾಭಾರತ ನಮ್ಮವು ಅಂತ ಹೇಳಿಕೊಳ್ತಾರೆ. ಇಂತಹ ಸಂದರ್ಭದಲ್ಲಿ ಮಹಾಭಾರತದ ದ್ರೌಪದಿ ಕತೆಯನ್ನ ನೆನಪು ಮಾಡುವೆ. ಆಕೆಯ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರು ಸಹಾಯಕ್ಕೆ ಬರುವುದಿಲ್ಲ. ಆಕೆ ಪ್ರತಿಜ್ಞೆ ಮಾಡಿದಂತೆ ದುಶ್ಯಾಸನನ ತೊಡೆ ಸೀಳಿ ಆ ರಕ್ತದಿಂದ ಮುಡಿಕಟ್ಟಿದಳು. ಹಾಗಾಗಿ ಪ್ರಜ್ವಲ ನೀನು ನನ್ನ ಮೊಮ್ಮಗನ ವಯಸ್ಸಿನವನು. 4ನೇ ತಾರೀಖಿನ ನಂತರ ಗೆದ್ದಬಿಡಬಹುದು ಎಂಬ ಅಹಂಕಾರ ನಿನಗಿದ್ರೆ ಎಚ್ಚರಿಕೆ, ನಿನ್ನ ಅಟ್ಟಹಾಸಕ್ಕೆ ಕೊನೆಯಿದೆ.

ಹಾನಸದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿಬಿಟ್ಟಿರಿ, ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡೋದಕ್ಕೆ ಕಾರಣವಾಗಿದೆ. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ.

ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ ವಿಡಿಯೋ ಮಾಡಿ ಅವರ ಘನತೆಯನ್ನು ಉಲ್ಲಂಘಿಸಲಾಗಿದೆ.ಪ್ರಧಾನಿ ನಾನು ಜೈವಿಕವಾಗಿ ಬಂದಿಲ್ಲ, ದೇವರು ಕಳಿಸಿದ್ದಾನೆ ಅಂತಾರೆ. ಆದರೆ, ಈಗ ಹೇಳ್ತಾ ಇದೀನಿ ಈ ದೇಶದ ಪ್ರಧಾನಿ ತಾಯಿದ್ರೋಹಿ. ರಕ್ತ ಸುರಿಸಿ ಜನ್ಮ ಕೊಡುವವಳನ್ನು ಪೆನ್ಡ್ರೈವ್ನಲ್ಲಿ ನೋಡುದ್ವಿ ಅಂತ ಹೇಳುತ್ತೀರಿ. ನಾಚಿಕೆಯಾಗಬೇಕು. ವಿಡಿಯೋ ಆಡಿದ ಪ್ರಜ್ವಲ್ ಹಾಗೂ ಪೆನ್ಡ್ರೈವ್ ಹಂಚಿದವರು ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನಿಸಬೇಕಿದೆ. ಪ್ರಸಾರವಾಗುವುದಕ್ಕೆ ಬಿಡಬೇಡಿ ಅಂತ ಮನವಿ ಮಾಡಿದ್ರು ಕ್ರಮವಹಿಸಲಿಲ್ಲ. ಹಾಸನದ ಡಿಸಿ, ಎಸ್ಪಿ ನೀವು ಮಹಿಳೆಯಾಗಿದ್ದುಕೊಂಡು ನೀವು ತಪ್ಪು ಮಾಡಿದೀರಿ, ನೀವೂ ತಪ್ಪಿತಸ್ಥರೆ… ಆ ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುವುದರಲ್ಲಿ ನೀವುಗಳು ವಿಫಲವಾಗಿದ್ದೀರಿ.

ಸಂತ್ರಸ್ತ ಮಹಿಳೆ ಅನ್ನಬೇಡಿ, ಆ ಪದವನ್ನು ಕಿತ್ತಾಕಿ. ತೊಂದರೆಗೆ ಒಳಗಾದ ಮಹಿಳೆಯರ ಜತೆ ನಾವಿದ್ದೇವೆ ಎಂದು ಹೇಳುವುದಕ್ಕೆ ನಾವಿಲ್ಲಿ ಬಂದಿದ್ದೀವಿ. ಈ ಸರ್ಕಾರ ಮಹಿಳೆಯರನ್ನ ರಕ್ಷಿಸಬೇಕು. ಅವರಿಗೆ ಘಟನೆ ಬದುಕನ್ನು ರಕ್ಷಿಸಲು ಮುಧಾಗಿ ಅಂತ ಕೇಳುದ್ರೆ ಸಿದ್ದರಾಮಯ್ಯ ಅವರೇ ನಿಮ್ಮ ಬೇಳೆ ಬೇಯಿಸಿಕೊಂಡ್ರಿ ಜವಾಬ್ದಾರಿಯಿಂದ ವಂಚಿತರಾದ್ರಿ.

ಇನ್ನೂ ಬಿಜೆಪಿಯವ್ರೇ, ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿರಿ. ಹಾನಸಕ್ಕೆ ಬಂದು ಅತ್ಯಾಚಾರಿ ಪ್ರಜ್ವಲನಿಗೆ ವೋಟಾಕಿ ಅಂತ ಕೇಳಿದ್ರಿ, ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾನಸಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರು ಒಳ್ಳೆದನ್ನ ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ.

ಪ್ರಜ್ವಲನಿಂದ ಕಾಡುಪ್ರಾಣಿ ಭೇಟೆ
ಪ್ರಜ್ವಲ್ ದೇವಲಾಪುರ ಅರಣ್ಯದಲ್ಲಿ ಪ್ರಾಣಿಗಳನ್ನು ಭೇಟೆಯಾಡುತ್ತಾನೆ. ಡಿಸಿ-ಎಸ್ಪಿ ತಾಕತ್ತಿದ್ದರೆ ತನಿಖೆ ಮಾಡಿ.

ರೇವಣ್ಣನ ಅಸ್ಪೃಶ್ಯತೆ ಒಪ್ಪಬೇಡಿ
ರೇವಣ್ಣ ನೀವು ನಡೆಸಿರುವ ಅಸ್ಪೃಶ್ಯತೆಯ ಕರಾಳ ಮುಖವನ್ನು ಬಿಚ್ಚಿಡುತ್ತೇವೆ.

ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಒಡೆದ ಬಿಜೆಪಿ
ಈ ಪ್ರಕರಣದ ಮೂಲಕ ಹಾಸನದ ಗಂಡಸರು ಹೆಣ್ಣನ್ನು ಒಂಟಿಯಾಗಿ ಆಚೆ ಹೋಗದಂತೆ ಕಟ್ಟಿಹಾಕಲು ದಾರಿಮಾಡಿದ್ದೀರಿ. ಮನಸ್ಮೃತಿಯ ಅಣತಿಯನ್ನ ಮಹಿಳೆಯರನ್ನು ಕಟ್ಟಿಹಾಕುವ ಕೆಲಸಕ್ಕೆ ಬಿಜೆಪಿಯವ್ರೆ ಅವಕಾಶಮಾಡಿಕೊಟ್ಟಿದ್ದೀರಿ.
ಇನ್ನು ಎರಡನೇಯದಾಗಿ, ಕುಮಾರಸ್ವಾಮಿ, ದೇವೇಗೌಡ ಹಾಗೂ ರೇವಣ್ಣ ನಿಮ್ಮ ಮನೆಯ ಮಗನ್ನನ್ನು ಬೆಂಬಲಿಸಿ ಆ ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನು ನಾಶ ಮಾಡಿದ್ದಾರೆ.

ನೊಂದ ಮಹಿಳೆಯರಿಗೆ ಕರೆ
ಹಾಸನದ ಮಹಿಳೆಯರ ಕಣ್ಣೀರ ಹನಿಗಳನ್ನು ಬಾವುಟವಾಗಿಸಿ ರಾಜ್ಯಾದ್ಯಂತ ಹೋರಾಟ ಮಾಡೋಣ. ಸ್ವಾಭಿಮಾನದ, ಮಹಿಳಾ ಅಸ್ಮಿತೆಯ ಚಳುವಳಿಯ ಕಟ್ಟೋಣ ಅಂಜಬೇಡಿ. ನಿಮ್ಮೊಂದಿಗೆ ನಾವಿದ್ದೇವೆ.

PPeepal Media Desk

Peepal Media Desk

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು