ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಎಂಟ್ರಿ ಲೆವೆಲ್ ಕೆಲಸಕ್ಕೂ ಬೇಕಂತೆ ಎಕ್ಸ್‌ಪೀರಿಯನ್ಸ್! ಮೊದಲ ಉದ್ಯೋಗ ಹುಡುಕುತ್ತಿರುವ ಭಾರತೀಯ ಯುವಕರಲ್ಲಿ ಶೇ. 64ರಷ್ಟು ಮಂದಿಯಲ್ಲಿ ಡಿಪ್ರೆಶನ್ ಭೀತಿ!

PPeepal Media

Peepal Media ವಿಶೇಷ

• 2 ನಿಮಿಷದ ಓದು

ಎಂಟ್ರಿ ಲೆವೆಲ್ ಕೆಲಸಕ್ಕೂ ಬೇಕಂತೆ ಎಕ್ಸ್‌ಪೀರಿಯನ್ಸ್! ಮೊದಲ ಉದ್ಯೋಗ ಹುಡುಕುತ್ತಿರುವ ಭಾರತೀಯ ಯುವಕರಲ್ಲಿ ಶೇ. 64ರಷ್ಟು ಮಂದಿಯಲ್ಲಿ ಡಿಪ್ರೆಶನ್ ಭೀತಿ!

ದೆಹಲಿ: ದೇಶದಲ್ಲಿ ಕೇವಲ 3ರಿಂದ 5 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇಂದು ಪ್ರತಿಯೊಬ್ಬ ಪದವೀಧರನಿಗೂ ತನ್ನ ಮೊದಲ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ ಸವಾಲಾಗಿ ಪರಿಣಮಿಸಿದೆ ಎಂದು ಭಾರತದ ಪ್ರತಿ 10 ಯುವಕರಲ್ಲಿ 7 ಜನರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಉದ್ಯೋಗ ಮಾಹಿತಿ ಸಂಸ್ಥೆಯಾದ ‘ಇಂಡೀಡ್’ ದೇಶಾದ್ಯಂತ ನಡೆಸಿರುವ ಹೊಸ ಸಮೀಕ್ಷೆಯಿಂದ ಈ ಆಘಾತಕಾರಿ ಸತ್ಯ ಹೊರಬಿದ್ದಿದೆ.

ದೇಶದ 2,633 ಉದ್ಯೋಗಾಕಾಂಕ್ಷಿಗಳು ಮತ್ತು ನೌಕರರ ನಡುವೆ ನಡೆಸಲಾದ ಈ ಸರ್ವೇಯಲ್ಲಿ, ಶೇಕಡಾ 72 ರಷ್ಟು ಜನರು “ಕಂಪನಿಗಳು ತಳಮಟ್ಟದ ಅಥವಾ ಆರಂಭಿಕ ಹಂತದ ಉದ್ಯೋಗಗಳಿಗೂ ಸಹ ಮುಂಚಿನ ಕೆಲಸದ ಅನುಭವವನ್ನು ಕಡ್ಡಾಯವಾಗಿ ಕೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಲೇಜು ಮುಗಿಸಿ ಮಾರುಕಟ್ಟೆಗೆ ಬರುತ್ತಿರುವ ಹೊಸ ಪದವೀಧರರಿಗೆ “ಅನುಭವದ ವೈರುಧ್ಯ”ವನ್ನು (Experience Paradox – ಕೆಲಸ ಸಿಗಲು ಅನುಭವ ಬೇಕು, ಅನುಭವ ಸಿಗಲು ಕೆಲಸ ಬೇಕು ಎಂಬ ಗೊಂದಲ) ಸೃಷ್ಟಿಸುತ್ತಿದೆ.

ಟೆಕ್ನಾಲಜಿ, ಇ-ಕಾಮರ್ಸ್ ಮತ್ತು ಸೇವಾ ವಲಯಗಳು ನಿರಂತರವಾಗಿ ಬೆಳೆಯುತ್ತಿದ್ದರೂ ಸಹ, ಯುವ ವೃತ್ತಿಪರರು ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಕೇವಲ ಶೇ. 14 ರಷ್ಟು ಯುವಕರು ಮಾತ್ರ ತಾವು ಅಂದುಕೊಂಡ ಕಂಪನಿ ಅಥವಾ ಹುದ್ದೆಯಲ್ಲೇ ಮೊದಲ ಕೆಲಸ ಸಿಗಬಹುದು ಎಂಬ ಭರವಸೆ ಹೊಂದಿದ್ದಾರೆ. ಇನ್ನುಳಿದ ಶೇ. 43 ರಷ್ಟು ಯುವಕರು ಆರ್ಥಿಕ ಒತ್ತಡಗಳು ಅಥವಾ ಅವಕಾಶಗಳ ಕೊರತೆಯಿಂದಾಗಿ ಸಿಕ್ಕ ಸಿಕ್ಕ ಕೆಲಸಗಳಿಗೆ ಸೇರಿಕೊಂಡು ತಮ್ಮ ವೃತ್ತಿಜೀವನದ ಆಸೆಗಳೊಂದಿಗೆ ತಾಂತ್ರಿಕವಾಗಿ ರಾಜಿ ಮಾಡಿಕೊಳ್ಳುತ್ತಿದ್ದಾರೆ.

ಶಾರ್ಟ್‌ಲಿಸ್ಟ್ ಆಗುವುದೇ ದೊಡ್ಡ ಗಂಡಾಂತರ: ಕಂಪನಿಗಳ ಗಮನ ಸೆಳೆಯುವುದು ಇಂದಿನ ದಿನಗಳಲ್ಲಿ ದೊಡ್ಡ ಅಡ್ಡಿಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಶೇ. 49 ರಷ್ಟು ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮ ಪ್ರೊಫೈಲ್ ‘ಶಾರ್ಟ್‌ಲಿಸ್ಟ್’ ಆಗುವುದೇ ದೊಡ್ಡ ಸವಾಲಾಗಿದೆ. ಇನ್ನು ಶೇ. 61 ರಷ್ಟು ಯುವಕರು ತಾವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕಂಪನಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಮರು-ಉತ್ತರಗಳೇ ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿದ್ಯಾಭ್ಯಾಸದ ಸಮಯದಲ್ಲಿ ತಮಗೆ ಸಂಬಳ ಸಹಿತ ಇಂಟರ್ನ್‌ಶಿಪ್ ಸಿಕ್ಕಿತ್ತು ಎಂದು ಪ್ರತಿ ಐವರಲ್ಲಿ ಕೇವಲ ಒಬ್ಬರು ಮಾತ್ರ ಹೇಳಿದ್ದಾರೆ. ಆದರೆ, ಶೇ. 18 ರಷ್ಟು ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ದಿನಗಳಲ್ಲಿ ಯಾವುದೇ ಇಂಟರ್ನ್‌ಶಿಪ್, ಪ್ರಾಜೆಕ್ಟ್‌ಗಳು ಅಥವಾ ಪ್ಲೇಸ್‌ಮೆಂಟ್‌ಗಳ ಅವಕಾಶವೇ ಸಿಕ್ಕಿಲ್ಲ ಎಂಬುದು ಸಾಬೀತಾಗಿದೆ.

ಯುವಕರಲ್ಲಿ ಕುಗ್ಗುತ್ತಿರುವ ಆತ್ಮವಿಶ್ವಾಸ: ಉದ್ಯೋಗಕ್ಕಾಗಿ ಸುದೀರ್ಘವಾಗಿ ಹುಡುಕಾಡುವುದು ಮತ್ತು ಪದೇ ಪದೇ ತಿರಸ್ಕಾರಕ್ಕೆ (Rejection) ಒಳಗಾಗುತ್ತಿರುವುದು ಯುವ ಅತಿರಥರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ನಿರಂತರ ವೈಫಲ್ಯಗಳಿಂದಾಗಿ ತಮ್ಮ ಆತ್ಮವಿಶ್ವಾಸ ಮತ್ತು ಪ್ರೇರಣೆ ಸಂಪೂರ್ಣವಾಗಿ ಕುಗ್ಗಿಹೋಗಿದೆ ಎಂದು ಶೇ. 64ರಷ್ಟು ಯುವಕರು ಬೇಸರ ಹೊರಹಾಕಿದ್ದಾರೆ. ಪ್ರಸ್ತುತ ತಾವು ಅಂದುಕೊಂಡ ವೃತ್ತಿಜೀವನದ ಹಾದಿಯಲ್ಲೇ ಸಾಗುತ್ತಿದ್ದೇವೆ ಎಂದು ಭಾವಿಸಿರುವವರು ಕೇವಲ ಶೇ. 20ರಷ್ಟು ಜನರು ಮಾತ್ರ.

ದೇಶದಲ್ಲಿ ಯುವಕರ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ವರದಿ ಹೊರಬಿದ್ದಿದೆ. ಪದವೀಧರರಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರ ಮತ್ತು ನೀತಿ ನಿರೂಪಕರು ಕೌಶಲ್ಯಾಭಿವೃದ್ಧಿ, ಅಪ್ರೆಂಟಿಸ್‌ಶಿಪ್ ಮತ್ತು ಉದ್ಯಮ-ಶಿಕ್ಷಣ ಸಂಸ್ಥೆಗಳ ನಡುವಿನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕಾಲೇಜುಗಳಲ್ಲೇ ಇಂಟರ್ನ್‌ಶಿಪ್‌ಗಳು, ಪ್ಲೇಸ್‌ಮೆಂಟ್ ಸೆಲ್‌ಗಳು, ರೆಸ್ಯೂಮ್ ಗೈಡೆನ್ಸ್ ಮತ್ತು ಇಂಟರ್ವ್ಯೂ ತಯಾರಿಗಳಂತಹ ವ್ಯವಸ್ಥಿತ ಬೆಂಬಲವನ್ನು ನೀಡಿದರೆ ಮಾತ್ರ ಯುವಕರ ಭವಿಷ್ಯವನ್ನು ಸುಧಾರಿಸಲು ಸಾಧ್ಯ ಎಂದು ಇಂಡೀಡ್ ಸಂಸ್ಥೆಯ ಟ್ಯಾಲೆಂಟ್ ಸ್ಟ್ರ್ಯಾಟಜಿ ಅಡ್ವೈಸರ್ ರೋಹನ್ ಸಿಲ್ವೆಸ್ಟರ್ ತಿಳಿಸಿದ್ದಾರೆ.

PPeepal Media

Peepal Media

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು