ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತರಿಗೆ ಸ್ವಾರ್ಥ ರಾಜಕಾರಣಿಗಳ ಬಗ್ಗೆ ಎಚ್ಚರ ಅಗತ್ಯ

PPeepal Media

Peepal Media • ವಿಶೇಷ

• 1 ನಿಮಿಷದ ಓದು

ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತರಿಗೆ ಸ್ವಾರ್ಥ ರಾಜಕಾರಣಿಗಳ ಬಗ್ಗೆ ಎಚ್ಚರ ಅಗತ್ಯ

ಪತ್ರಕರ್ತರಿಗೆ ಕೊಡುವ ಉಡುಗೊರೆಗಳನ್ನು ಕುರಿತಂತೆ ಸಾರ್ವತ್ರಿಕವಾಗಿ ಅಂಗೀಕಾರವಾಗಬಹುದಾದ ನೀತಿಸಂಹಿತೆಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳೂ ಅನುಸರಿಸುವಂತಾಗುವುದು ಸಾಧ್ಯವಿದೆಯೇ?  ಎಂಬ ಪ್ರಶ್ನೆ ಹಿರಿಯ ಪತ್ರಕರ್ತರಾದ ಸಿ.ಜಿ.ಮಂಜುಳಾ ಅವರದು. ʼದೀಪಾವಳಿ ಭಕ್ಷೀಸು ಹಗರಣʼ ಬಯಲಾದ ನಂತರ ಮಾಧ್ಯಮ ಭ್ರಷ್ಟಾಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನು ಓದುಗರ ಮುಂದಿಡುವ ಪ್ರಯತ್ನವನ್ನು ಪೀಪಲ್‌ ಮೀಡಿಯಾ ಮಾಡುತ್ತಿದೆ…

ಹೊಸ ವರ್ಷ ಅಥವಾ ದೀಪಾವಳಿ ಸಂದರ್ಭಗಳಲ್ಲಿ ಪತ್ರಿಕಾ ಕಚೇರಿಗಳಿಗೆ ಉಡುಗೊರೆಗಳ ಪೊಟ್ಟಣಗಳು ಬರುವುದು ಮಾಮೂಲು. ಸರ್ಕಾರದ ವಿವಿಧ ಕಾರ್ಯಾಲಯಗಳು ಅಥವಾ ಕಾರ್ಪೊರೇಟ್ ಕಚೇರಿಗಳಿಂದ ಬರುವ ಇಂತಹ  ಉಡುಗೊರೆಗಳಲ್ಲಿ ಸಿಹಿ ತಿಂಡಿ, ಒಣಹಣ್ಣು, ಕೇಕ್ ಅಥವಾ  ಡೈರಿ, ಪೆನ್ನು ಮುಂತಾದ ವೃತ್ತಿಗೆ ಸಂಬಂಧಿಸಿದ ಸ್ಟೇಷನರಿ ವಸ್ತುಗಳು ಇರುತ್ತಿತ್ತು. ಆದರೆ ಲಕ್ಷಗಟ್ಟಲೆ ನೋಟುಗಳ ಕಂತೆ ಸಿಹಿತಿಂಡಿ ಬಾಕ್ಸ್ ಗಳಲ್ಲಿತ್ತು ಎಂಬುದು  ಗಾಬರಿ ಬೀಳಿಸುವ ವಿಚಾರ. ನೇರವಾಗಿ ಹಣ ನೀಡಿ ಪತ್ರಕರ್ತರ ಸಂವೇದನೆಯನ್ನೇ ತಮ್ಮೆಡೆಗೆ ಸೆಳೆದುಕೊಳ್ಳುವಂತಹ ಆಮಿಷವಿದು ಎಂಬುದರಲ್ಲಿ ಎರಡು ಮಾತಿಲ್ಲ.  ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ವಿರೋಧ ಪಕ್ಷದ ರೀತಿ, ಆಡಳಿತದ ಕಾವಲು ಕಾಯುವಂತಹ ಕೆಲಸ ಮಾಡಬೇಕು ಎಂಬುದು ಪತ್ರಕರ್ತರ ಕುರಿತಾಗಿ ಇರುವ ನಿರೀಕ್ಷೆ. ಸರ್ಕಾರದ ನೀತಿ ಹಾಗೂ ಆಡಳಿತ ವೈಖರಿಗಳ ವರದಿ ಮಾಡಬೇಕಾದ ಪತ್ರಕರ್ತರು ಅಧಿಕಾರ ಕೇಂದ್ರಗಳ ಜೊತೆಗೆ ವೃತ್ತಿಪರ ಸಂಬಂಧದ ಹೊರತಾಗಿ ವೈಯಕ್ತಿಕ ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ವಸ್ತುನಿಷ್ಠತೆ ಮತ್ತು ನಿಖರತೆ ವೃತ್ತಿಪರ ಪತ್ರಕರ್ತರ ಮೂಲಧರ್ಮ. ಈ ಮೌಲ್ಯಗಳನ್ನು ಅನುಸರಿಸುವುದು ಹಣ ಸ್ವೀಕರಿಸಿದ ಪತ್ರಕರ್ತರಿಂದ ಸಾಧ್ಯವಾಗುತ್ತದೆಯೇ?  ವ್ಯಕ್ತಿ ನಿಷ್ಠೆ, ಪೂರ್ವಗ್ರಹಗಳಿಗೆ ಹೊರತಾದ ವಸ್ತುನಿಷ್ಠ ವರದಿಗಳ ನಿರೀಕ್ಷೆ ಸಾಕಾರವಾಗುವುದು ಸಾಧ್ಯವೇ?  ‘‘ತುರ್ತು ಪರಿಸ್ಥಿತಿ ಕಾಲದಲ್ಲಿ ಬಾಗಿ ಎಂದರೆ ತೆವಳಿದರು’, ‘ಪ್ರೆಸ್ಟಿಟ್ಯೂಟ್ಸ್’ ಎಂಬೆಲ್ಲಾ ನಿಂದನಾ ನುಡಿಗಳಲ್ಲಿ ಪತ್ರಕರ್ತರ ಕುರಿತಾಗಿ ರಾಜಕಾರಣಿಗಳು ಷರಾ ಬರೆದಾಗಿದೆ. ಹಾಗೆಯೇ ಸ್ವಾರ್ಥ ರಾಜಕಾರಣಕ್ಕಾಗಿ ರಾಜಕಾರಣಿಗಳು ನಡೆಸುವ ಪತ್ರಕರ್ತರ ಓಲೈಕೆಯ ಬಗೆಗೂ ಪತ್ರಕರ್ತರು ಎಚ್ಚರ ವಹಿಸಬೇಕಾದುದು ಮುಖ್ಯ.  ಹಲವು ಬಗೆಗಳ ನಿರ್ಬಂಧಗಳನ್ನು ಎದುರಿಸುತ್ತಿರುವಂತಹ ಹಲವು ಪತ್ರಕರ್ತರೂ ನಮ್ಮ ಜೊತೆಗಿರುವಂತಹ ಸದ್ಯದ ವಾತಾವರಣದಲ್ಲಿ ಸಿಹಿ ಜೊತೆಗೆ ಹಣ ಹಂಚಿಕೆಯ ಕರಾಳ ವಿದ್ಯಮಾನ ಪತ್ರಿಕೋದ್ಯಮ ವೃತ್ತಿಯ ಘನತೆಯನ್ನು ಪಾತಾಳಕ್ಕೆ ತಳ್ಳುವಂತಹದ್ದು. ಮಾಧ್ಯಮ ಮೌಲ್ಯಗಳು ಅಧಃ ಪತನಕ್ಕೆ ಸರಿಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ , ‘ಉಡುಗೊರೆ’ಗಳನ್ನು ಕುರಿತಂತೆ ಸಾರ್ವತ್ರಿಕವಾಗಿ ಅಂಗೀಕಾರವಾಗಬಹುದಾದ ನೀತಿಸಂಹಿತೆಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳೂ ಅನುಸರಿಸುವಂತಾಗುವುದು ಸಾಧ್ಯವಿದೆಯೇ? 

ಇದನ್ನೂ ಓದಿ: ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತ ಸಮುದಾಯಕ್ಕೇ ಕೆಟ್ಟ ಹೆಸರು ಬರುವಂತಾಗಬಾರದು

PPeepal Media

Peepal Media

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು