ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿಯೆಮನ್‌ನಲ್ಲಿ ಸೌದಿ ಅರೇಬಿಯಾದ ವೈಮಾನಿಕ ದಾಳಿ: 25 ಮಂದಿ ಸಾವು ಅಥವಾ ನಾಪತ್ತೆ; ಆರು ಜನರಿಗೆ ಗಾಯಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ, ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?ಪುಣೆಯ ಟೆಕ್ಕಿಯಿಂದ ಲಿವ್‌-ಇನ್‌ ಸಂಗಾತಿಯ ಹತ್ಯೆ; ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಆರೋಪಿ, ಬೆಳಗ್ಗೆ ಪೊಲೀಸರಿಗೆ ಕರೆಆನೆಗಳನ್ನು ಸ್ಥಳಾಂತರಿಸುವುದರಿಂದ ಸಮಸ್ಯೆ ಬಗೆಹರಿಯದು; ಅವು ನಡೆದಾಡುವ ದಾರಿಗಳ ಒತ್ತುವರಿ ತೆರವುಗೊಳಿಸಿ: ರಮ್ಯಾ ದಿವ್ಯ ಸ್ಪಂದನಭಾರತ್‌ ಜೋಡೋ ಯುವ ಸಂಘಕ್ಕೆ ₹1,000 ಕೋಟಿ ಘೋಷಿಸಿದ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಕಷ್ಟವಲ್ಲ: ಕುಮಾರಸ್ವಾಮಿಗ್ರೀನ್ ಎಸ್‌ಎಂ, ವಿನ್ಫಾಸ್ಟ್‌ ವಾಹನಗಳ ನೋಂದಣಿಗೆ ಮಿತಿ ವಿಧಿಸುವಂತೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹಕಬ್ಬಿನ ಬೆಲೆ ನಿಗದಿ ಬಿಕ್ಕಟ್ಟು: ಹಾವೇರಿ ಡಿಸಿ ಕಚೇರಿಗೆ ಮುತ್ತಿಗೆ, ಸಚಿವರು–ಸಕ್ಕರೆ ಕಾರ್ಖಾನೆ ಮಾಲೀಕರನ್ನು ಒಳಗೆ ಕೂಡಿ ಹಾಕಿದ ರೈತರುಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ಬಂದ್: ಸಚಿವ ಶಿವರಾಜ್ ತಂಗಡಗಿಬಿಸ್ಲೆರಿ ವಿವಾದದ ಬೆನ್ನಲ್ಲೇ ಕಿನ್ಲೇ, ಅಕ್ವಾಫಿನಾ ಸೇರಿದಂತೆ ಇತರ ಪ್ಯಾಕೇಜ್ಡ್‌ ನೀರಿನ ಬ್ರ್ಯಾಂಡ್‌ಗಳ ಮಾದರಿ ಪರೀಕ್ಷೆ ಆರಂಭಿಸಿದ FSSAIಮಾನಹಾನಿ ಪ್ರಕರಣ: ಯೂಟ್ಯೂಬರ್‌ ಧ್ರುವ್‌ ರಾಠಿಗೆ ಜಾಮೀನು ರಹಿತ ವಾರಂಟ್‌ ಜಾರಿಜಿ.ಪಂ., ತಾ.ಪಂ. ಚುನಾವಣೆಗೆ ಕ್ಷಣಗಣನೆ ಆರಂಭ: ಕ್ಷೇತ್ರವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟನಿರುದ್ಯೋಗ | ಮೋದಿ ತನ್ನ ಸರ್ಕಾರದ ವೈಫಲ್ಯವನ್ನು ಖಾಸಗಿಯವರ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ: ಸೌರವ್‌ ದಾಸ್‌ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾ ಉಪಗ್ರಹಗಳಿಂದ ನಿಗಾ? 37 ಬಾರಿ ಕಕ್ಷೆ ಬದಲಾವಣೆ ಪತ್ತೆಬ್ರೇಕಪ್‌ ವಿಚಾರಕ್ಕೆ ಮಾಜಿ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಮುಂಬೈ ಯುವಕ; ಆರೋಪಿ ಬಂಧನಅಪ್ರಾಪ್ತ ಬಾಲಕಿಯರಿಗೆ ಗುಪ್ತಾಂಗ ತೋರಿದ ಅಪರಾಧ: ನಟ ಶ್ರೀಜಿತ್‌ ರವಿಗೆ ಒಂದು ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡಹಂಪೆಯನಾಡಿನೊಳ್ : ನವೋದಯ ಕವಿ ಸಿದ್ಧಯ್ಯ ಪುರಾಣಿಕವಾಟ್ಸ್‌ಆ್ಯಪ್‌ ವೆಬ್ ಬಳಕೆ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಎಚ್ಚರಿಕೆ; ಪ್ರತಿ ಸೆಷನ್‌ ಬಳಿಕ ಲಾಗ್‌ಔಟ್‌ ಮಾಡಲು ಸೂಚನೆಕಾಡಾನೆ ಸ್ಥಳಾಂತರ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮಬಿಸ್ಲೆರಿ ನೀರು ಕುಡಿಯಲು ಯೋಗ್ಯ; ಎಫ್‌ಎಸ್‌ಎಸ್‌ಎಐ ಕ್ರಮದ ಕುರಿತು ಕಂಪನಿಯಿಂದ ಸ್ಪಷ್ಟನೆ

ಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿ

MMurali Maluru

Murali Maluru

• 7 ನಿಮಿಷದ ಓದು

shashikanth yadahalli

“ಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿ“
‘..ವರ್ಣಾಶ್ರಮ ಪರಂಪರೆಯ ಮನುವಾದಿ ಸಂಸ್ಕೃತಿಯನ್ನು ವಿರೋಧಿಸಿ ಸಮಾನತೆಯನ್ನು ಬೋಧಿಸಿದ ಬೌದ್ದ ಧರ್ಮವನ್ನೇ ದೇಶದಿಂದ ಓಡಿಸಿದ್ದ ಈ ಸನಾತನವಾದಿಗಳಿಗೆ ಬಸವಧರ್ಮ ಅರಗಿಸಿಕೊಳ್ಳಲಾಗದ ಸತ್ಯ.’ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಇದು ನಿನ್ನೆ ಮೊನ್ನೆಯದೇನಲ್ಲಾ? 12 ನೇ ಶತಮಾನದಿಂದಲೂ ಬಸವಣ್ಣವರು, ಅವರ ತತ್ವಗಳು, ಅವರು ಸ್ಥಾಪಿಸಿದ ಲಿಂಗಾಯತ ಧರ್ಮ ಹಾಗೂ ವಚನ ಸಾಹಿತ್ಯದ ಮೇಲೆ ಈ ಸನಾತನವಾದಿ ಪುರೋಹಿತಶಾಹಿ ವರ್ಗ ನಿರಂತರವಾಗಿ ದಾಳಿ ಮಾಡುತ್ತಲೇ ಬಂದಿದೆ. ಯಾಕೆಂದರೆ ಈ ಸನಾತನಿಗಳ ಧಾರ್ಮಿಕ ಶೋಷಣೆ, ವರ್ಣಬೇಧ, ವರ್ಗಬೇಧ, ಲಿಂಗಬೇಧದ ವಿರುದ್ಧ ಬಸವಾದಿಶರಣರು ವಚನಗಳನ್ನು ರಚಿಸಿ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ್ದರು. ಪುರೋಹಿತಶಾಹಿಗಳ ಗುಡಿ ಸಂಸ್ಕೃತಿ, ಬಹುದೇವೋಪಾಸನೆ, ಮೂರ್ತಿ ಪೂಜೆ, ಮೌಡ್ಯಾಚರಣೆಗಳೆಲ್ಲವನ್ನೂ ತೀಕ್ಷ್ಣವಾಗಿ ವಿರೋಧಿಸಿದರು. ಶ್ರೇಷ್ಠತೆಯ ವ್ಯಸನ ಪೀಡಿತ ವೈದಿಕಶಾಹಿಗಳು ದೂರವಿಟ್ಟಿದ್ದ ಶೂದ್ರ ದಲಿತ ಸಮುದಾಯದ ದುಡಿಯುವ ವರ್ಗಗಳನ್ನು ಒಂದುಗೂಡಿಸಿ ಕಾಯಕ ಮತ್ತು ದಾಸೋಹ ಸಿದ್ದಾಂತವನ್ನು ಜಾರಿಗೆ ತಂದರು ಹಾಗೂ ಆ ಸಮುದಾಯಗಳಿಗೆ ಅಕ್ಷರ ಜ್ಞಾನವನ್ನು ಕಲಿಸಿದರು. ಮುಕ್ತವಾಗಿ ಚರ್ಚಿಸಲು ಅನುಭವ ಮಂಟಪ ಎನ್ನುವ ಜನಸಂಸತ್ತನ್ನು ಹುಟ್ಟುಹಾಕಿದರು. ಇವೆಲ್ಲವೂ ವೈದಿಕಶಾಹಿಗಳ ಬುಡಕ್ಕೆ ಕೊಟ್ಟ ಕೊಡಲಿಯ ಪೆಟ್ಟಾಗಿದ್ದವು. ಆದಿ ಕಾಲದಿಂದಲೂ ಪುರೋಹಿತಶಾಹಿಗಳು ಪೋಷಿಸಿಕೊಂಡು ಬಂದ ಶೋಷಣೆ ಸಾಮ್ರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಿದ್ದವು.

ಹೀಗಾಗಿ ಬಸವಣ್ಣನವರ ಕಾಲಕ್ಕೆ ಅವರ ವಿರುದ್ಧ ಪಿತೂರಿ ಮಾಡಿ ಕಲ್ಯಾಣದಲ್ಲಿ ಶರಣ ಸಂಸ್ಕೃತಿಯನ್ನು ಸರ್ವನಾಶ ಮಾಡಲು ಕಾರಣರಾಗಿದ್ದ ಕೊಂಡಿ ಮಂಚಣ್ಣ, ಕೇಶವಭಟ್ಟ, ನಾರಣಕ್ರಮಿತರು ಕಾಲಕಾಲಕ್ಕೆ ಬೇರೆ ಬೇರೆ ಹೆಸರುಗಳಲ್ಲಿ ಬಸವತತ್ವಗಳ ನಾಶಕ್ಕೆ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಈ ಕುತಂತ್ರದಲ್ಲಿ ಯಶಸ್ವಿಯಾಗದೇ ಇದ್ದಾಗ ಲಿಂಗಾಯತ ಹಿಂದೂ ಧರ್ಮದ ಭಾಗ, ವಚನಗಳು ವೇದೋಪನಿಷತ್ತುಗಳ ಮುಂದುವರೆದ ಭಾಗ ಎಂದೆಲ್ಲಾ ಸುಳ್ಳು ಸಂಕಥನಗಳನ್ನು ಸೃಷ್ಟಿಸುತ್ತಾರೆ. ಮುಂದೊಂದು ದಿನ ಬುದ್ದನನ್ನು ಹಿಂದೂ ದೇವತೆಗಳ ಅವತಾರದ ಪಟ್ಟಿಯಲ್ಲಿ ಸೇರಿಸಿದಂತೆ ಬಸವಣ್ಣನವರನ್ನೂ ಅವತಾರಿಯನ್ನಾಗಿ ಮಾಡುವುದರಲ್ಲೂ ಸಂದೇಹವಿಲ್ಲ.

ಬಸವದ್ರೋಹಿ ಲೇಖನಗಳ “ಬಸವ ಮಂಟಪ”

ಈಗ ಅನಿವಾಸಿ ಭಾರತೀಯ ರವಿ ಹಂಜ್ (ಹಂಜಗಿಮಠ) ಎನ್ನುವ ವೀರಶೈವ ಸಮುದಾಯದ ವ್ಯಕ್ತಿ ಬಸವಣ್ಣನವರ ಮೇಲೆ ಲೂಟಿಕೋರ, ಕೊಲೆಗಾರ ಎಂದೆಲ್ಲಾ ಆರೋಪಿಸಿ, ಲಿಂಗಾಯತರನ್ನು ಲಿಂಗಾಹತರು ಎಂದು ನಿಂದಿಸಿ, ಬಸವ ತತ್ವ ಪ್ರತಿಪಾದಕರನ್ನು ಹೀಯಾಳಿಸಿ ವಿಶ್ವವಾಣಿ ಎನ್ನುವ ನಗಣ್ಯ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಾ ಬಂದಿದ್ದಾನೆ. ಆ ಕುರಿತು ವಿಡಿಯೋಗಳನ್ನೂ ಮಾಡಿ ಯುಟ್ಯೂಬಗಳಲ್ಲಿ ಹರಿಯಬಿಟ್ಟಿದ್ದಾನೆ. ಈಗ ಆ ಎಲ್ಲಾ ಬಸವದ್ರೋಹಿ ಲೇಖನಗಳನ್ನು ಸೇರಿಸಿ “ಬಸವ ಮಂಟಪ’ ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಸರಕಾರ ಈ ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ತೆಗೆದುಕೊಂಡಿದೆ. ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಈ ಹಂಜಗಿಮಠನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.
ಇದು ಕೇವಲ ಒಬ್ಬ ವ್ಯಕ್ತಿಯ ದುಸ್ಸಾಹಸವೇನಲ್ಲಾ. ಇದರ ಹಿಂದೆ ಕಾಣದ ಅಗೋಚರ ಶಕ್ತಿಗಳು ಬೇರೆ ಇವೆ. ನೇರಾ ನೇರಾ ಬಸವಾನುಯಾಯಿಗಳನ್ನು ಎದುರಿಸಲಾಗದ ಈ ಸನಾತನಿಗಳು ಲಿಂಗಾಯತ ವೀರಶೈವರಲ್ಲಿರುವವರನ್ನೇ ಆಯ್ಕೆ ಮಾಡಿ, ಬಸವಾದಿ ಶರಣರ ತತ್ವ ಸಿದ್ದಾಂತದ ಮೇಲೆ ಆಕ್ರಮಣ ಮಾಡಲು ಪ್ರಚೋದಿಸುತ್ತಿದ್ದಾರೆ. ಹಂಜಗಿಮಠ ಎನ್ನುವ ಬಸವದ್ರೋಹಿಯನ್ನು ಬಳಸಿಕೊಂಡು, ಆತನ ಹೆಗಲ ಮೇಲೆ ದ್ವೇಷದ ಬಂದೂಕನ್ನಿಟ್ಟು ಲಿಂಗಾಯತರನ್ನು ಗುರಿಯಾಗಿರಿಸಿ ನಿಂದನೆಯ ಗುಂಡು ಹಾರಿಸುತ್ತಿದ್ದಾರೆ.

ಈಗ ಸಕಲ ಬಸವಾನುಯಾಯಿಗಳು ಕಣ್ಣಿಗೆ ಕಾಣುವ ಈ ಕುಲಕಂಟಕನ ವಿರುದ್ದ ತಿರುಗಿ ಬಿದ್ದಿದ್ದಾರೆ. ಸನಾತನವಾದಿಗಳು ತೆರೆಯ ಮರೆಯಲ್ಲಿ ನಿಂತು ಸಂಚು ಹೂಡುತ್ತಿದ್ದಾರೆ.
ಈ ಸನಾತನವಾದಿಗೂ ಯಾರು ಎನ್ನುವುದು ಅರಿಯದ ವಿಷಯವೇನಲ್ಲಾ. ಅವರನ್ನು ಆರೆಸ್ಸೆಸ್ಸಿಗರು, ಹಿಂದುತ್ವವಾದಿಗಳು, ಪುರೋಹಿತಶಾಹಿಗಳು, ವೈದಿಕಶಾಹಿಗಳು, ಸಂಘಿಗಳು ಎಂದು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ರವಿ ಹಂಜಿನಮಠನ ಹಿಂದಿರುವುದೂ ಸಹ ಇದೇ ಮನುವ್ಯಾದಿಗಳು. ಅದಕ್ಕೆ ಹಂಜಿನಮಠನೇ ತನ್ನ ವಿಡಿಯೋದಲ್ಲಿ ವಿವರಣೆ ಕೊಟ್ಟಿದ್ದಾನೆ. “ಫೇಸ್ಬುಕ್ನಲ್ಲಿ ಬರೆಯುತ್ತಿದ್ದ ನನ್ನನ್ನು ಗುರುತಿಸಿದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು ತನ್ನನ್ನು ಸಂಪರ್ಕಿಸಿ ತಮ್ಮ ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣ ಬರೆಯಲು ಪ್ರೇರೇಪಿಸಿದರು” ಎಂದು ಈ ಹಂಜ್ ಹೇಳಿದ್ದಾರೆ. ಅಂದರೆ ಈ ಹಂಜ್ ಎನ್ನುವ ಹುಂಜದ ಕಾಲಿಗೆ ಕತ್ತಿ ಕಟ್ಟಿ ಬಸವ ತತ್ವಗಳ ಮೇಲೆ ದಾಳಿ ಮಾಡಲು ಪ್ರೇರೇಪಿಸಿದ್ದು ಆ ಕಾಲದ ಕೇಶವಭಟ್ಟನ ಸಂತಾನವಾದ ಈ ಸಂಘಿ ವಿಶ್ವೇಶ್ವರ ಭಟ್ಟ ಎನ್ನುವುದು ಗೊತ್ತಾಗಿಯೇ ಬಸವಾನುಯಾಯಿಗಳು ಈ ವಿಷಬಟ್ಟನ ವಿರುದ್ದವೂ ಪ್ರತಿಭಟನೆ ಮಾಡುತ್ತಿದ್ದಾರೆ.

ಕೇವಲ ಅಂಕಣ ಬರಹಕ್ಕೆ ಸೀಮಿತವಾಗಿದ್ದರೆ ಇಷ್ಟೊಂದು ಆಕ್ರೋಶ ವ್ಯಕ್ತವಾಗುತ್ತಿರಲಿಲ್ಲ, ಆದರೆ ಯಾವಾಗ ಈ ಬಸವವಿರೋಧಿ ಲೇಖನಗಳನ್ನು “ಬಸವ ಮಂಟಪ” ಎನ್ನುವ ಹೆಸರಿನಲ್ಲಿ ಈ ವಿಶ್ವೇಶ್ವರ ಭಟ್ಟ ಪ್ರಕಟಿಸಿ ನವೆಂಬರ್ 15 ರಂದು ಲೋಕಾರ್ಪನೆ ಮಾಡಿದರೋ, ಆ ಸಮಾರಂಭದಲ್ಲಿ ಬಸವವಿರೋಧಿ ಮಾತುಗಳನ್ನು ಆಡಿದರೋ, ಆ ಕುರಿತು ವಿಡಿಯೋಗಳನ್ನೂ ಹಂಚಿಕೊಂಡರೋ ಆಗ ಬಸವಾನುಯಾಯಿಗಳು ಕೆರಳಿದರು. ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡವು.
ಹೀಗೆ ಬಸವ ವಿರೋಧಿತನವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ, ಬಸವತತ್ವದ ಮೇಲೆ ದಾಳಿ ಮಾಡುವ, ವಚನಗಳನ್ನು ತಿರುಚುವ.. ಪ್ರಯತ್ನಗಳನ್ನು ಸನಾತನಿಗಳು ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ಇನ್ನೊಂದು ಉದಾಹರಣೆ ಎಂದರೆ. “ವಚನ ದರ್ಶನ” ಎನ್ನುವ ವಿಕೃತ ಕೃತಿ.

ಇಂತಹ ವಚನದ್ರೋಹಿ ಪುಸ್ತಕವನ್ನು ಯಾವುದೇ ಸನಾತನಿ ಸಂತಾನಿಗಳು ಸಂಪಾದಿಸಿದ್ದರೂ ಲಿಂಗಾಯತ ಸಮುದಾಯ ತಿರುಗಿ ಬೀಳುತ್ತದೆ ಎನ್ನುವುದು ಗೊತ್ತಿದ್ದೇ ಈ ಸಂಘಿಗಳು ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮಿಗಳನ್ನು ಈ ಪುಸ್ತಕದ ಗೌರವ ಸಂಪಾದಕರನ್ನಾಗಿದ್ದು, ಬಹುತೇಕ ವೀರಶೈವ ಲಿಂಗಾಯತ ಸಮುದಾಯದವರು ಬರೆದ 20 ಲೇಖನಗಳನ್ನು ಈ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಈ ವಚನವಿರೋಧಿ ಪುಸ್ತಕವನ್ನು ಮುದ್ರಿಸಿ ಪ್ರಕಟಿಸಿದ್ದು ಮಾತ್ರ ಆರೆಸ್ಸೆಸ್ಸಿನ ಅಂಗಗಳಾದ ಪ್ರಜ್ಞಾ ಪ್ರವಾಹ, ಅಯೋಧ್ಯಾ ಪ್ರಕಾಶನಗಳು, ಹಾಗೂ ಮುದ್ರಿಸಿದ್ದು ರಾಷ್ಟ್ರೋತ್ಥಾನ ಮುದ್ರಣಾಲಯ. ಅಂದರೆ ಈ ಪುಸ್ತಕದ ಮೂಲಕ ವಚನಗಳ ಅಪವ್ಯಾಖ್ಯಾನಗೊಳಿಸಿದ್ದರ ಹಿಂದೆ ಆರೆಸ್ಸೆಸ್ಸಿನವರ ನೇರ ಕೈವಾಡ ಇರುವುದು ಇದರಿಂದ ಸಾಬೀತಾಗುತ್ತದೆ.

ಈ ವಚನ ದರ್ಶನವನ್ನು 29 ಜೂನ್ 2024 ರಲ್ಲಿ ಧಾರವಾಡದಲ್ಲಿ ಬಿಡುಗಡೆಗೊಳಿಸಿ ಭಾಷಣ ಮಾಡಿದ್ದು ಆರೆಸ್ಸೆಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ, ಆಯೋಜಿಸಿದ್ದು ಪ್ರಜ್ಞಾ ಪ್ರವಾಹ. ಇದೆ ಪುಸ್ತಕವನ್ನು ಬೆಂಗಳೂರಿನಲ್ಲಿ 20 ಆಗಸ್ಟ್ 2024 ರಲ್ಲಿ ಬಿಡುಗಡೆ ಮಾಡಿದವರು ಆರೆಸ್ಸೆಸ್ ಸಹ ಸರಕಾರ್ಯವಾಹಕ ಮುಕುಂದ ಸಿ.ಆರ್. ಬಿಜೆಪಿಯ ಬಸವರಾಜ ಬೊಮ್ಮಾಯಿಯವರೂ ಅತಿಥಿಯಾಗಿ ಭಾಗವಹಿಸಿದ್ದರು. 3 ಆಗಸ್ಟ್ 2024 ರಂದು ಕಲಬುರಗಿಯಲ್ಲಿ ಆಯೋಜಿಸಿದ್ದ ಈ ವಿವಾದಿತ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಭಾಗವಹಿಸಿದ್ದರು. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾಗೂ ದೆಹಲಿಯಲ್ಲಿ ಕೂಡಾ ಈ ಪುಸ್ತಕದ ಬಿಡುಗಡೆಯನ್ನು ಸಂಘಿಗಳ ನೇತೃತ್ವದಲ್ಲಿ ನಡೆಸಲಾಯ್ತು.

ವೀರಶೈವ ಲಿಂಗಾಯತ ಸಮುದಾಯದ ಕೆಲವರನ್ನು ಬಳಸಿಕೊಂಡು ಆರೆಸ್ಸೆಸ್ ನೇತೃತ್ವದಲ್ಲಿ ಹೊರಬಂದ ಈ “ವಚನ ದರ್ಶನ” ಪುಸ್ತಕದ ಉದ್ದೇಶವಾದರೂ ಏನು?

• ಬಸವಣ್ಣನವರ ವಚನ ಚಳವಳಿ, ವಚನ ಸಾಹಿತ್ಯ, ಲಿಂಗಾಯತ ಪರಂಪರೆಗಳನ್ನು ಮತ್ತು ಭಾರತೀಯ ಹಿಂದುತ್ವವಾಗಿ ಜ್ಞಾನ ಪರಂಪರೆಗೆ ಸೇರಿಸುವುದು.

• ವಚನಗಳನ್ನು ಹಾಗೂ ಬಸವಣ್ಣನವರನ್ನು ಹಿಂದೂ ಧಾರ್ಮಿಕ ಪರಂಪರೆಯೊಳಗೆ ನೋಡುವ ದೃಷ್ಟಿಕೋನವನ್ನು ಪ್ರತಿಪಾದಿಸುವುದು

• ವಚನ ಸಾಹಿತ್ಯವನ್ನು ಬಸವಣ್ಣನವರ ಸಾಮಾಜಿಕ ಕ್ರಾಂತಿ, ಜಾತಿ ವಿರೋಧಿ ನಿಲುವು ಮತ್ತು ಲಿಂಗ ಸಮಾನತೆಯ ಚಳವಳಿಯ ಹಿನ್ನೆಲೆಯಲ್ಲಿ ನೋಡುವ ಬದಲು, ಅದನ್ನು ಹಿಂದೂ ಧಾರ್ಮಿಕ ಪರಂಪರೆಯೊಳಗೆ ಅಳವಡಿಸುವ ಪ್ರಯತ್ನ ಮಾಡುವುದು.

• ಕೆಲವು ವಚನಗಳನ್ನು ತಪ್ಪಾಗಿ ಅರ್ಥೈಸುವುದು ಹಾಗೂ ಬಸವಣ್ಣನವರ ಮೂಲ ವಿಚಾರಧಾರೆಗೆ ವಿರುದ್ಧವಾಗಿ ವಚನಗಳ ಆಶಯವನ್ನು ಬದಲಾಯಿಸುವುದು.

• ಬಸವಣ್ಣನವರ ಜಾತಿ ವಿರೋಧಿ, ಸಮಾನತಾವಾದಿ ಮತ್ತು ಸಾಮಾಜಿಕ ಸುಧಾರಣೆಯ ಚಳವಳಿಯನ್ನು ಕೇವಲ ಭಕ್ತಿ ಚಳವಳಿ ಅಥವಾ ಆಧ್ಯಾತ್ಮಿಕ ಪರಂಪರೆಯಾಗಿ ಸೀಮಿತಗೊಳಿಸುವುದು.

• ಲಿಂಗಾಯತ ಧರ್ಮದ ಸ್ವತಂತ್ರ ಅಸ್ಮಿತೆಯನ್ನು ನಿರಾಕರಿಸುವುದು.

• ಬಸವಾದಿಶರಣರ ಚಳವಳಿಯು ಹಿಂದೂ ಧರ್ಮದ ಒಳಗಿನ ಸುಧಾರಣಾ ಚಳವಳಿಯೇ ಹೊರತು ಸ್ವತಂತ್ರ ಧಾರ್ಮಿಕ-ತಾತ್ವಿಕ ಪರಂಪರೆ ಅಲ್ಲಾ ಎಂದು ಸಾಬೀತು ಪಡಿಸುವುದು.

ದುರುದ್ದೇಶಪೂರ್ವಕವಾಗಿ ಈ ಪುಸ್ತಕದ ಮುಖಪುಟದಲ್ಲಿ ಬಸವಣ್ಣನವರನ್ನು ಋಷಿ-ಮುನಿಗಳ ರೀತಿಯಲ್ಲಿ ಚಿತ್ರಿಸಿ ಕೇರೀಕರಣಗೊಳಿಸಿ ಬಸವಣ್ಣನವರನ್ನು ಹಿಂದೂ ಎಂದು ಜನಮಾನಸದಲ್ಲಿ ಪ್ರತಿಷ್ಟಾಪಿಸುವುದು.
ಈ ಸನಾತನಿಗಳು ಬಸವಣ್ಣವರನ್ನು ಕೇಸರಿಕರಣ ಮಾಡುವ ಹುನ್ನಾರವನ್ನು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ಬಸವಾನುಯಾಯಿಗಳು, ಪ್ರಗತಿಪರರು ತೀವ್ರವಾಗಿ ವಿರೋಧಿಸಿ ಪ್ರತಿಭಟಿಸಿದರು. ವಚನ ದರ್ಶನ ಪುಸ್ತಕದ ಬಿಡುಗಡೆಯನ್ನು ವಿರೋಧಿಸಿದರು. 21 ಆಗಸ್ಟ್ 2024ರಂದು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಈ ಪುಸ್ತಕದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ಪುಸ್ತಕದ ಲೇಖಕರು ಮತ್ತು ಪ್ರಕಾಶಕರಿಗೆ ಲಿಂಗಾಯತ ಮುಖಂಡರೊಂದಿಗೆ ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕಿದರು.

ಪ್ರತಿಭಟನಾಕಾರರ ಪ್ರಮುಖ ಆರೋಪಗಳು:

• ಬಸವಣ್ಣನವರ ಮೂಲ ತತ್ವಗಳಿಗೆ ವಿರುದ್ಧವಾದ ವ್ಯಾಖ್ಯಾನ ನೀಡಲಾಗಿದೆ.

• ವಚನ ಸಾಹಿತ್ಯವನ್ನು ವಿರೂಪಗೊಳಿಸಲಾಗಿದೆ.

• ಲಿಂಗಾಯತ ಧರ್ಮದ ಸ್ವತಂತ್ರ ಅಸ್ಮಿತೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ.

• ಬಸವಣ್ಣನವರ ಸಾಮಾಜಿಕ ಕ್ರಾಂತಿಕಾರಿ ವಿಚಾರಗಳನ್ನು ಹಿಂದುತ್ವದ ಚೌಕಟ್ಟಿನಲ್ಲಿ ಮರುನಿರೂಪಿಸಲಾಗುತ್ತಿದೆ.

“ವಚನ ದರ್ಶನ’ಕ್ಕೆ ಪ್ರತಿಯಾಗಿ ಲಿಂಗಾಯತ ಚಿಂತಕರು ಮತ್ತು ಶರಣ ಸಾಹಿತ್ಯದ ಪರವಾದ ಸಂಘಟನೆಗಳ ಬೆಂಬಲದಲ್ಲಿ ಡಾ.ಮೀನಾಕ್ಷಿ ಬಾಳಿಯವರು ‘ವಚನ ನಿಜದರ್ಶನ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಈ ಕೃತಿಯ ಮೂಲಕ ‘ವಚನ ದರ್ಶನ’ದಲ್ಲಿನ ವಾದಗಳಿಗೆ ಲಿಂಗಾಯತ ಮತ್ತು ಶರಣ ಪರಂಪರೆಯ ದೃಷ್ಟಿಯಿಂದ ಪ್ರತಿಕ್ರಿಯೆ ನೀಡಲಾಯಿತು. ನಂತರ ‘ವಚನ ದರ್ಶನ – ಮಿಥ್ಯ vs ಸತ್ಯ’ ಎಂಬ ಪ್ರತಿವಾದಿ 2025ರ ಫೆಬ್ರವರಿ 27ರಂದು ಬೆಂಗಳೂರಿನ ಬಸವ ಸಮಿತಿ ಅನುಭವ ಮಂಟಪ ಸಭಾಂಗಣದಲ್ಲಿ ಬಿಡುಗಡೆಯಾಯಿತು.

ಸನಾತನವಾದಿಗಳಿಗೆ ವಚನ ಚಳವಳಿ ಹಾಗೂ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ನೇರವಾಗಿ ವಿರೋಧಿಸಿ ಲಿಂಗಾಯತದಂತಹ ಪ್ರಭಲ ಸಮುದಾಯವನ್ನು ಎದುರಿಸುವ ತಾಕತ್ತು ಇಲ್ಲದೇ ಇರುವುದರಿಂದ ಬಸವಾದಿಶರಣರನ್ನು ಹಿಂದುತ್ವದ ಭಾಗವಾಗಿ ಪ್ರತಿಪಾದಿಸುವ ತಂತ್ರಗಾರಿಕೆಯನ್ನು ಆರಂಭಿಸಲಾಗಿದೆ.

ಬಸವಣ್ಣನವರ.. ಜಾತಿ ವ್ಯವಸ್ಥೆಯ ವಿರುದ್ಧದ ಚಿಂತನೆ, ಕಾಯಕ ಮತ್ತು ದಾಸೋಹ, ಸಮಾನತೆಯ ಆಶಯ, ಲಿಂಗ ಸಮಾನತೆ, ಧಾರ್ಮಿಕ ಆಚರಣೆಗಳಲ್ಲಿನ ಅಂಧಶ್ರದ್ಧೆ ಮತ್ತು ಮಧ್ಯವರ್ತಿತ್ವದ ವಿಮರ್ಶೆ, ಅನುಭವ ಮತ್ತು ಆತ್ಮವಿಮರ್ಶೆಗೆ ಆದ್ಯತೆ, ಲಿಂಗಾಯತ ಧರ್ಮದ ಸ್ವತಂತ್ರ ತಾತ್ವಿಕ ಗುರುತಿನ ಪ್ರತಿಪಾದನೆಗಳನ್ನು ಪರಿಗಣಿಸದೇ ಉದ್ದೇಶಪೂರ್ವಕವಾಗಿ ಈ “ವಚನ ದರ್ಶನ”ದಲ್ಲಿ ಮರೆಮಾಚಿ ವಚನ ಸಾಹಿತ್ಯವನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದು, ಬಸವಣ್ಣನವರನ್ನು ಭಾರತೀಯ ಧಾರ್ಮಿಕ ಮತ್ತು ತಾತ್ವಿಕ ಚಿಂತನೆಯ ಭಾಗವಾಗಿ ವಿಶ್ಲೇಷಿಸುವುದು, ವಚನ ಸಾಹಿತ್ಯದ ಆಧ್ಯಾತ್ಮಿಕ ಆಯಾಮಕ್ಕೆ ಒತ್ತು ನೀಡುವುದು, ಬಸವಣ್ಣನವರ ವಚನಗಳನ್ನು ಅವುಗಳ ಮೂಲ ಸಾಮಾಜಿಕ, ಐತಿಹಾಸಿಕ ಮತ್ತು ತಾತ್ವಿಕ ಸಂದರ್ಭಗಳಿಂದ ಬೇರ್ಪಡಿಸಿ, ಇಂದಿನ ರಾಜಕೀಯ ಅಥವಾ ಧಾರ್ಮಿಕ ಸಿದ್ಧಾಂತಕ್ಕೆ ಸಮೀಕರಿಸುವುದು, ಬಸವಣ್ಣನವರನ್ನು ಕೇವಲ ಧಾರ್ಮಿಕ ಸಂತನಾಗಿ ಪ್ರತಿಪಾದಿಸುವುದು ಸನಾತನಿಗಳ ಶಡ್ಯಂತ್ರವಾಗಿದೆ. ಅದರ ಭಾಗವಾಗಿಯೇ ಈ ವಚನ ದರ್ಶನದ ಪುಸ್ತಕವನ್ನು ಪ್ರಕಟಿಸಲಾಗಿದೆ.

ಇದೆಲ್ಲವೂ ಬಸವತತ್ವಗಳ ಪ್ರಭಾವವನ್ನು ಸೀಮಿತಗೊಳಿಸಿ ಹಿಂದುತ್ವೀಕರಣ ಮಾಡುವ ಸನಾತನಿಗಳ ಪ್ರಯತ್ನ ಅಷ್ಟೇ. ಲಿಂಗತಾರತಮ್ಯ ಹಾಗೂ ಅಸಮಾನತೆಯನ್ನು ವಿರೋಧಿಸಿ ಜನಿವಾರವನ್ನು ಕಿತ್ತೆಸೆದ ಬಸವಣ್ಣನವರಿಗೆ ಮತ್ತೆ ಜನಿವಾರ ತೊಡಿಸುವ ಯತ್ನ. ಇದರ ಮುಂದುವರೆದ ದುಸ್ಸಾಹಸವೇ ಸಂಘಿ ವಿಶ್ವೇಶ್ವರ ಭಟ್ಟ ಪ್ರಾಯೋಜಿತ, ಬಸವದ್ರೋಹಿ ರವಿ ಹಂಜಿನಮಠ ಲಿಖಿತ “ಬಸವ ಮಂಟಪ” ಎನ್ನುವ (ವಿ)ಕೃತಿ.

ಅದೇ ರೀತಿ ಈ ಸನಾತನಿಗಳು ಬಸವಾದಿ ಶರಣರನ್ನು ಕೇಸರಿಕರಣಗೊಳಿಸಲು ಮಹಾರಾಷ್ಟ್ರದ ಕೊಲ್ಲಾಪುರದ ಅದೃಶ್ಯ ಕಾಡ ಸಿದ್ದೇಶ್ವರ ಮಠದ ಕನ್ನೇರಿ ಸ್ವಾಮಿಯನ್ನು ಲಿಂಗಾಯತ ಸಮುದಾಯದ ವಿರುದ್ಧ ಎತ್ತಿಕಟ್ಟಿದರು. ಸಂಘ ಪರಿವಾರದ ಬೆಂಬಲದಿಂದಾ ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದ ಕನ್ನೇರಿ ಸ್ವಾಮಿ ವಿರುದ್ದ ಲಿಂಗಾಯತ ಸಮುದಾಯ ಆಕ್ರೋಶಗೊಂಡಿತು. ಬಸವಾದಿ ಶರಣರನ್ನು ಹಿಂದೂ ಪರಂಪರೆಯ ಭಾಗವೆಂದು ಪ್ರತಿಪಾದಿಸಲು ಹಿಂದುತ್ವವಾದಿಗಳು ಈ ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಬಸವ ಕಲ್ಯಾಣ, ಗದಗ ಹಾಗೂ ಗಂಗಾವತಿಯಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ನಡೆಸಲು ಸನಾತನಿಗಳು ಪ್ರಯತ್ನಿಸಿದಾಗಲೂ ಬಸವಾನುಯಾಯಿಗಳಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಕೆಲವು ಜಿಲ್ಲೆಗಳಿಗೆ ಕನ್ನೇರಿ ಸ್ವಾಮಿಯ ಪ್ರವೇಶವನ್ನೇ ಜಿಲ್ಲಾಡಳಿತ ನಿರ್ಬಂಧಿಸಿತು. ಸನಾತನಿಗಳ ಈ ಹಿಂದೂ ಸಮಾವೇಶದ ಉದ್ದೇಶವೇನೆಂದರೆ ಬಸವಣ್ಣನವರನ್ನು ಹಿಂದೂ ಪರಂಪರೆಯ ಭಾಗವಾಗಿ ಸೀಮಿತಗೊಳಿಸುವುದು, ಲಿಂಗಾಯತವನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಕಟ್ಟಿ ಹಾಕುವುದು, ಲಿಂಗಾಯತರ ಧಾರ್ಮಿಕ ಅಸ್ಮಿತೆಯನ್ನು ಕಡಿತಗೊಳಿಸಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗದಂತೆ ತಡೆಯುವುದು. ಈ ಕನ್ನೇರಿ ಸ್ವಾಮಿಯ ಈ ಸಮಾವೇಶಗಳನ್ನು ಹಿಂದುತ್ವವಾದಿ ಸಂಘ ಪರಿವಾರವೇ ಆಯೋಜಿಸಿತ್ತು. ಬಸವದ್ರೋಹಿ ಕನ್ನೇರಿ ಸ್ವಾಮಿ ಇಲ್ಲಿ ಕೇವಲ ನೀಚ ಪಾತ್ರವಾಗಿದ್ದು, ಸನಾತನಿಗಳು ಸ್ವಾಮಿಯ ದುಷ್ಟತನದ ಹಿಂದಿರುವ ಸೂತ್ರದಾರರಾಗಿದ್ದರು.

ವರ್ಣಾಶ್ರಮ ಪರಂಪರೆಯ ಮನುವಾದಿ ಸಂಸ್ಕೃತಿಯನ್ನು ವಿರೋಧಿಸಿ ಸಮಾನತೆಯನ್ನು ಬೋಧಿಸಿದ ಬೌದ್ದ ಧರ್ಮವನ್ನೇ ದೇಶದಿಂದ ಓಡಿಸಿದ್ದ ಈ ಸನಾತನವಾದಿಗಳಿಗೆ ಬಸವಧರ್ಮ ಅರಗಿಸಿಕೊಳ್ಳಲಾಗದ ಸತ್ಯ. ದಿನದಿಂದ ದಿನಕ್ಕೆ ಬಸವತತ್ವ ಸಿದ್ದಾಂತಗಳು ಪ್ರಭಲವಾಗುತ್ತಿದೆ. ವಚನಗಳು ಜನಮಾನಸದಲ್ಲಿ ಬೇರು ಬಿಡುತ್ತಿವೆ. ಕರ್ನಾಟಕ ಸರಕಾರವು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿರುವುದು ಈ ಹಿಂದುತ್ವವಾದಿಗಳ ಮಂಡೆಗೆ ಬರೆ ಹಾಕಿದಂತಾಗಿದೆ.

ಹೀಗಾಗಿ ಹೇಗಾದರೂ ಮಾಡಿ ಬಸವಣ್ಣನವರ ತತ್ವ ಸಿದ್ದಾಂತ ಹಾಗೂ ಸಾಮಾಜಿಕ ಚಳುವಳಿಗಳ ಆಶಯಗಳನ್ನು ಡೈಲ್ಯೂಟ್ ಗೊಳಿಸಿ, ಬಸವಾದಿ ಶರಣರ ವಚನಗಳನ್ನು ವೇದ ಉಪನಿಷತ್ತುಗಳ ಮುಂದುವರೆದ ಭಾಗವೆಂದೂ, ಲಿಂಗಾಯತ ಎನ್ನುವುದು ಹಿಂದೂ ಸಮಾಜದ ಅವಿಭಾಜ್ಯ ಅಂಗವೆಂದೂ ಹಾಗೂ ಬಸವ ಪರಂಪರೆಯೇ ಭಕ್ತಿ ಚಳುವಳಿ ಎಂದು ಪ್ರತಿಪಾದಿಸುವ ಭಾರೀ ಶಡ್ಯಂತ್ರಗಳನ್ನು ಈ ಸಂಘಿ ಸನಾತನಿಗಳು ಹಮ್ಮಿಕೊಂಡಿದ್ದಾರೆ. ಮತ್ತೆ ಬಸವಕಾಲದ ಪುರೋಹಿತಶಾಹಿ ಹಾಗೂ ಲಿಂಗಾಯತ ನಡುವಿನ ಸಂಘರ್ಷ ಆರಂಭವಾಗಿದೆ.

ಆದರೆ.. ಇದು ಆ ಕಾಲವಲ್ಲ. ಲಿಂಗಾಯತರು ಈ ಸನಾತನಿ ವೀರಶೈವರು ಹಾಗೂ ಅವರ ಹಿಂದಿರುವ ಪುರೋಹಿತಶಾಹಿ ಮನಸ್ಥಿತಿಯ ಸಂಘಿಗಳ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಬರವಣ್ಣನವರ ಅಸ್ಮಿತೆಗೆ ದಕ್ಕೆಯಾದರೆ ತೀವ್ರವಾದ ಪ್ರತಿರೋಧ ತೋರಬಲ್ಲರು, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಲಾಢ್ಯರಾಗಿರುವ ಲಿಂಗಾಯತ ಸಮುದಾಯವನ್ನು ವಿರೋಧಿಸುವುದು ಈ ಅಲ್ಪಸಂಖ್ಯಾತ ಹಿಂದುತ್ವವಾದಿಗಳಿಗೆ ಈಗ ಸಾಧ್ಯವಿಲ್ಲ. ಆದರೂ ಅವರು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತಾರೆ. ಅದಕ್ಕೆ ಲಿಂಗಾಯತ ಸಮುದಾಯ ಪ್ರತಿತಂತ್ರಗಳನ್ನು ರೂಪಿಸಬೇಕಾಗಿದೆ. ಬಸವ ತತ್ವ ಸಿದ್ದಾಂತಗಳನ್ನು, ವಚನಗಳ ಆಶಯಗಳನ್ನು ಲಿಂಗಾಯತರುಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಬಹುತೇಕ ಲಿಂಗಾಯತರ ಮನಸ್ಸಿನಲ್ಲಿ ಇನ್ನೂ ಈ ವೈದಿಕ ಆಚರಣೆಗಳು ಬೇರು ಬಿಟ್ಟಿವೆ. ಬಹುದೇವೋಪಾಸನೆ ಹಾಗೂ ಮೂರ್ತಿ ಪೂಜೆಯಂತಹ ಆಚರಣೆಗಳು ಲಿಂಗಾಯತರಲ್ಲೂ ಅವ್ಯಾಹತವಾಗಿದೆ.

ಹೀಗಾಗಿ ನಿಜವಾದ ಲಿಂಗಾಯತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜಾಗೃತ ಬಸವಾನುಯಾಯಿಗಳು ಲಿಂಗಾಯತರು ಇರುವ ಪ್ರತಿ ಊರು, ಕೇರಿ ಮನೆ ಮನಗಳಲ್ಲಿ ಸಂಪರ್ಕಸಾಧಿಸಿ ವಸವಾದಿ ಶರಣರ ತತ್ವ ಸಿದ್ದಾಂತಗಳನ್ನು ತಿಳಿಸಿ ಹೇಳಬೇಕಾಗಿದೆ. ಭವಿಷ್ಯದಲ್ಲಿ ಈ ಸನಾತನಿಗಳು ಒಡ್ಡಬಹುದಾದ ಧಾರ್ಮಿಕ ಹೇರಿಕೆಯನ್ನು ಎದುರಿಸಿ ನಿಲ್ಲಲು ಪ್ರತಿಯೊಬ್ಬ ಲಿಂಗಾಯತರನ್ನೂ ಈಗಲೇ ವೈಚಾರಿಕವಾಗಿ ಸಿದ್ದಗೊಳಿಸಬೇಕಿದೆ. ಲಿಂಗಾಯತವು ಕೇವಲ ಜಾತಿಯಲ್ಲಾ ಅದೊಂದು ಸ್ವತಂತ್ರ ಧರ್ಮ ಎಂದು ಸಮಸ್ತ ಲಿಂಗಾಯತರೂ ಘೋಷಿಸಬೇಕಾಗಿದೆ. ಲಿಂಗಾಯತವು ಅಸಮಾನತೆ ಆಚರಿಸುವ ಹಿಂದುತ್ವವಾದಿಗಳ ಹಿಂದೂ ಧರ್ಮದ ಭಾಗವಾಗದೇ ಬೌದ್ದ ಜೈನ ಸಿಕ್ ಧರ್ಮಗಳ ಹಾಗೆ ಸ್ವತಂತ್ರ ಧರ್ಮ ಎಂಬುದನ್ನು ಪ್ರತಿಯೊಬ್ಬ ಲಿಂಗಾಯತರೂ ಅರಿಯಬೇಕಾಗಿದೆ. ಹಾಗೂ ಲಿಂಗಾಯತವು ಸನಾತನವಾದಿ ವೈದಿಕರು ಹಾಗೂ ವೀರಶೈವರ ಪ್ರತ್ಯಕ್ಷ ಹಾಗೂ ಪರೋಕ್ಷ ನಿಯಂತ್ರಣದಿಂದ ಬಿಡುಗಡೆಗೊಂದು ಸ್ವತಂತ್ರ ಧರ್ಮವಾಗಲೇಬೇಕಿದೆ. ಅದಕ್ಕಾಗಿ ಹಿಂದುತ್ವವಾದಿಗಳ ಪ್ರತಿರೋಧವನ್ನೂ ಮೆಟ್ಟಿನಿಂತು ಹೋರಾಡಬೇಕಾಗಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗಲೇಬೇಕಿದೆ.

  • ಶಶಿಕಾಂತ ಯಡಹಳ್ಳಿ
    (24-11-2026)
    ಇದನ್ನೂ ನೋಡಿ:
MMurali Maluru

Murali Maluru

Peepal Media

Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.

ಸಂಬಂಧಿತ ಸುದ್ದಿಗಳು