Wednesday, August 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಗಳಿಗೆ ಲಾಟರಿ | 2005ರಿಂದ ಗಣಿಗಾರಿಕೆಯ ರಾಯಧನ ಹಿಂಬಾಕಿ ಕೇಳಬಹುದು. ರಾಜ್ಯಗಳಿಗೆ ಸುಪ್ರೀಂ ಗ್ರೀನ್ ಸಿಗ್ನಲ್

ದೆಹಲಿ: ಖನಿಜ ಭೂಮಿ ಮತ್ತು ಗಣಿಗಳ ಮೇಲಿನ ರಾಯಧನ ಮರುಪಾವತಿ ವಿಚಾರದಲ್ಲಿ ರಾಜ್ಯಗಳಿಗೆ ಭಾರಿ ಜಯ ಸಿಕ್ಕಿದೆ. 2005 ರಿಂದ, ರಾಜ್ಯಗಳು ಕೇಂದ್ರದಿಂದ ರಾಯಲ್ಟಿ ಬಾಕಿಯನ್ನು ಕೇಳಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಈ ಸಂಬಂಧ ಬುಧವಾರ ಮಹತ್ವದ ತೀರ್ಪು ಹೊರಬಿದ್ದಿದೆ. ಖನಿಜಗಳ ಮೇಲಿನ ರಾಯಧನ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಈ ವರ್ಷ ಜುಲೈ 25ರಿಂದ ಜಾರಿಗೊಳಿಸುವಂತೆ ಕೇಂದ್ರದ ಮನವಿಯನ್ನು ಸಿಜೆಐ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ನಿರಾಕರಿಸಿದೆ. ಮುಂದಿನ 12 ವರ್ಷಗಳಲ್ಲಿ ಕೇಂದ್ರ ಮತ್ತು ಗಣಿ ಕಂಪನಿಗಳ ಬಾಕಿಯನ್ನು ಹಂತ ಹಂತವಾಗಿ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಇವುಗಳಿಗೆ ಯಾವುದೇ ದಂಡ ವಿಧಿಸದಂತೆ ರಾಜ್ಯಗಳಿಗೆ ಆದೇಶ ನೀಡಲಾಗಿದೆ.

ಖನಿಜಗಳು ಮತ್ತು ಖನಿಜ ನಿಕ್ಷೇಪಗಳನ್ನು ಹೊಂದಿರುವ ಭೂಮಿಗೆ ರಾಯಲ್ಟಿ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಎಂದು 1989ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಜುಲೈ 25ರಂದು 8-1 ಬಹುಮತದಿಂದ ಈ ವಿಷಯವಾಗಿ ತೀರ್ಪು ನೀಡಿತು, ಗಣಿ ಮತ್ತು ಖನಿಜಗಳ ಮೇಲೆ ರಾಯಧನವನ್ನು ವಿಧಿಸುವ ಹಕ್ಕು ರಾಜ್ಯಗಳಿಗೆ ಇದೆ ಮತ್ತು ಕೇಂದ್ರಕ್ಕೆ ಆ ಹಕ್ಕು ಇಲ್ಲ ಎಂದು ಪೀಠ ಹೇಳಿತ್ತು.

ಆದರೆ, ಈ ತೀರ್ಪು 1989ರಿಂದಲೇ ಅನ್ವಯವಾಗಬೇಕು.ಅಂದಿನಿಂದ ಗಣಿ ಮತ್ತು ಖನಿಜಗಳ ಮೇಲೆ ಕೇಂದ್ರ ವಿಧಿಸಿರುವ ರಾಯಧನವನ್ನು ವಾಪಸ್ ನೀಡಬೇಕು ಎಂದು ಕೆಲವು ರಾಜ್ಯಗಳು ಆಗ್ರಹಿಸಿವೆ. ಇದಕ್ಕೆ ಕೇಂದ್ರ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಯಲ್ಟಿ ವಾಪಸ್ ನೀಡಿದರೆ ಸಾರ್ವಜನಿಕ ವಲಯದ ಕಂಪನಿಗಳೇ 70,000 ಕೋಟಿ ರೂಪಾಯಿಗಳನ್ನು ಮರುಪಾವತಿಸಬೇಕಾಗುತ್ತದೆ ಮತ್ತು ಹಾಗೆ ಮಾಡುವುದರಿಂದ ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಭಾರಿ ಹೊಡೆತ ಬೀಳಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಬೊಕ್ಕಸ ಖಾಲಿಯಾಗಲಿದ್ದು, ನಾಗರಿಕರಿಗೆ ದುಬಾರಿ ಬೆಲೆಯ ಹೊರೆ ಬೀಳಲಿದೆ ಎಂದು ಅವರು ವಿವರಿಸಿದರು. ಜುಲೈ ತಿಂಗಳ 25ರಿಂದ ಅನ್ವಯವಾಗುವಂತೆ ಈ ತೀರ್ಪನ್ನು ಜಾರಿಗೊಳಿಸುವಂತೆ ಕೇಂದ್ರ ಮನವಿ ಮಾಡಿತ್ತು.

ಇತ್ತೀಚೆಗೆ ವಾದ ಆಲಿಸಿದ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಕೇಂದ್ರವು ಈ ಮನವಿಯನ್ನು ತಿರಸ್ಕರಿಸಿ ಹೊಸ ಆದೇಶ ಹೊರಡಿಸಿದೆ. ಒಡಿಶಾ, ಜಾರ್ಖಂಡ್, ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೆ ಈ ತೀರ್ಪಿನಿಂದ ಹೆಚ್ಚಿನ ಲಾಭವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page