ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯಿಂದ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಪ್ರಕ್ಷುಬ್ಧಗೊಂಡಿದೆ.ನಿನ್ನೆ ರಾತ್ರಿ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮುನ್ನೆಚರಿಕಾ ಕ್ರಮ ಕೈಗೊಂಡಿರುವ ಪೊಲೀಸರು ಮೇ 6ರ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಆದ್ರೆ ಈ ಮಧ್ಯೆ ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲದಲ್ಲಿ ಮೂರು ಚಾಕು ಇರಿತ ಘಟನೆಗಳು ನಡೆದಿವೆ. ಉಡುಪಿಯಲ್ಲಿ ಕೊಲೆ ಯತ್ನವೂ ಸಹ ನಡೆದಿದೆ.ಸುಹಾಸ್​ ಶೆಟ್ಟಿ ಕೊಲೆಗೆ ಪ್ರತಿಯಾಗಿ ಈ ದಾಳಿಗಳು ನಡೆದಿದೆ.

ಇನ್ನು ದಾಳಿ ಒಳಗಾದ ಉಳ್ಳಾಲದ ಫೈಝಲ್​, ಕೊಂಚಾಡಿಯ ಮೊಹ್ಮದ್​ ಲುಕ್ಮಾನ್,​​ ಕಣ್ಣೂರಿನ ಇರ್ಶಾದ್​ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.ಸದ್ಯ ಹಲ್ಲೆಗೊಳಗಾದ ಮೂವರಿಗೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇದನ್ನು ಹೊರತುಪಡಿಸಿ ಉಡುಪಿಯ ಆತ್ರಾಡಿಯಲ್ಲಿ ಗುರುವಾರ ರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಲಾಗಿದೆ. ಚಾಲಕ ಅಬೂಬಕ್ಕರ್ ಯೆಮಾಬತನ ಆಟೋ ಅಡ್ಡಗಟ್ಟಿ ದುಷ್ಕರ್ಮಿಗಳು ತಲ್ವಾರ್ ಮತ್ತು ಬಾಟಲ್​ನಿಂದ ಹಲ್ಲೆ ಮಾಡಲು ಮಾಡಿದ್ದಾರೆ.

ಈ ವೇಳೆ ದಾಳಿಕೋರರಿಂದ ತಪ್ಪಿಸಿಕೊಂಡ ಅಬೂಬಕ್ಕರ್ ಕೂಡಲೇ ಹಿರಿಯಡಕ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.ಹೀಗಾಗಿ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಈಗಾಗಲೇ ಸುಶಾಂತ್, ಸಂದೇಶ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು