ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯಿಂದ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಪ್ರಕ್ಷುಬ್ಧಗೊಂಡಿದೆ.ನಿನ್ನೆ ರಾತ್ರಿ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮುನ್ನೆಚರಿಕಾ ಕ್ರಮ ಕೈಗೊಂಡಿರುವ ಪೊಲೀಸರು ಮೇ 6ರ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಆದ್ರೆ ಈ ಮಧ್ಯೆ ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲದಲ್ಲಿ ಮೂರು ಚಾಕು ಇರಿತ ಘಟನೆಗಳು ನಡೆದಿವೆ. ಉಡುಪಿಯಲ್ಲಿ ಕೊಲೆ ಯತ್ನವೂ ಸಹ ನಡೆದಿದೆ.ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಯಾಗಿ ಈ ದಾಳಿಗಳು ನಡೆದಿದೆ.
ಇನ್ನು ದಾಳಿ ಒಳಗಾದ ಉಳ್ಳಾಲದ ಫೈಝಲ್, ಕೊಂಚಾಡಿಯ ಮೊಹ್ಮದ್ ಲುಕ್ಮಾನ್, ಕಣ್ಣೂರಿನ ಇರ್ಶಾದ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.ಸದ್ಯ ಹಲ್ಲೆಗೊಳಗಾದ ಮೂವರಿಗೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇದನ್ನು ಹೊರತುಪಡಿಸಿ ಉಡುಪಿಯ ಆತ್ರಾಡಿಯಲ್ಲಿ ಗುರುವಾರ ರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಲಾಗಿದೆ. ಚಾಲಕ ಅಬೂಬಕ್ಕರ್ ಯೆಮಾಬತನ ಆಟೋ ಅಡ್ಡಗಟ್ಟಿ ದುಷ್ಕರ್ಮಿಗಳು ತಲ್ವಾರ್ ಮತ್ತು ಬಾಟಲ್ನಿಂದ ಹಲ್ಲೆ ಮಾಡಲು ಮಾಡಿದ್ದಾರೆ.
ಈ ವೇಳೆ ದಾಳಿಕೋರರಿಂದ ತಪ್ಪಿಸಿಕೊಂಡ ಅಬೂಬಕ್ಕರ್ ಕೂಡಲೇ ಹಿರಿಯಡಕ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.ಹೀಗಾಗಿ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಈಗಾಗಲೇ ಸುಶಾಂತ್, ಸಂದೇಶ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.