Home ಬೆಂಗಳೂರು ಬೇಸಿಗೆ ಬಿಸಿ ಕೆಎಂಎಫ್ ಹಾಲು ಸಂಗ್ರಹಣೆಯಲ್ಲಿ – 5 ಲಕ್ಷ ಲೀಟರ್ ಇಳಿಕೆ

ಬೇಸಿಗೆ ಬಿಸಿ ಕೆಎಂಎಫ್ ಹಾಲು ಸಂಗ್ರಹಣೆಯಲ್ಲಿ – 5 ಲಕ್ಷ ಲೀಟರ್ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಹೈನುಗಾರಿಕೆ ವಲಯದ ಮೇಲೆ ಅದರ ನೇರ ಪರಿಣಾಮ ಬೀರಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF) ದಾಖಲೆ ಮಟ್ಟದ ಹಾಲು ಸಂಗ್ರಹಣೆಯಲ್ಲಿ ಭಾರೀ ಇಳಿಕೆ ಕಂಡಿದ್ದು, ನಿತ್ಯದ ಉತ್ಪಾದನೆಯಲ್ಲಿ ಸುಮಾರು 5 ಲಕ್ಷ ಲೀಟರ್ ಕುಸಿತ ಉಂಟಾಗಿದೆ.

 ಈ ಹಿಂದೆ ನಿತ್ಯ 1 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಮೈಲಿಗಲ್ಲು ಸ್ಥಾಪಿಸಿದ್ದ ಕೆಎಂಎಫ್, ಸದ್ಯ 95 ಲಕ್ಷ ಲೀಟರ್‌ಗೆ ತಲುಪಿದೆ.  ಬಿರು ಬೇಸಿಗೆಯಿಂದಾಗಿ ಹಸುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹಸಿರು ಮೇವಿನ ಅಭಾವದಿಂದಾಗಿ ಹಾಲಿನ ಇಳುವರಿ ಕುಂಠಿತಗೊಂಡಿದೆ. ಹಾಲಿನ ಉತ್ಪಾದನೆ ಕಡಿಮೆಯಾಗಿರುವುದು ಗ್ರಾಮೀಣ ಭಾಗದ ಹೈನುಗಾರರ ದೈನಂದಿನ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.  ಸದ್ಯ ಕೇವಲ ಬೇಸಿಗೆಯ ಆರಂಭವಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವುದರಿಂದ ಹಾಲಿನ ಸಂಗ್ರಹಣೆ ಇನ್ನೂ ಕುಸಿಯುವ ಸಾಧ್ಯತೆ ಇದೆ ಎಂದು ಕೆಎಂಎಫ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version