Wednesday, November 27, 2024

ಸತ್ಯ | ನ್ಯಾಯ |ಧರ್ಮ

ನೀವು ಸೋತರೆ, ಇವಿಎಂಗಳನ್ನು ಟ್ಯಾಂಪರ್ ಮಾಡಲಾಗಿದೆ ಎಂದು ಅರ್ಥವೆ? ಸುಪ್ರೀಂ ಪ್ರಶ್ನೆ. ʼಪೇಪರ್ ಬ್ಯಾಲೆಟ್’ ಪರ ಸಲ್ಲಿಸಲಾಗಿದ್ದ ಅರ್ಜಿ ವಜಾ

ಹೊಸದೆಹಲಿ: ಇವಿಎಂಗಳನ್ನು ತಿರುಚಬಹುದು ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಅವರು ಸೋತಾಗ ಮಾತ್ರ ಇವಿಎಂ ಟ್ಯಾಂಪರಿಂಗ್ ಬಗ್ಗೆ ಮಾತನಾಡುತ್ತಾರೆ ಎಂದು ಅದು ಪ್ರತಿಕ್ರಿಯಿಸಿದೆ.

ಇವಿಎಂ ಬದಲಿಗೆ ಪೇಪರ್ ಬ್ಯಾಲೆಟ್ ಮೂಲಕ ಮತದಾನ ಮಾಡುವಂತೆ ಕೋರಿ ಪ್ರಜಾಶಾಂತಿ ಪಕ್ಷದ ಮುಖ್ಯಸ್ಥ ಕೆಎ ಪೌಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ಪೀಠ ವಿಚಾರಣೆ ನಡೆಸಿತು. ಪಾಲ್ ಖುದ್ದು ಹಾಜರಾಗಿ ವಾದ ಮಂಡಿಸಿದರು. ಸೋತಾಗ ಮಾತ್ರ ಅವುಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂಬ ಆರೋಪ ಬರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ವಿಚಾರಗಳು ಹೇಗೆ ಬರುತ್ತವೆ?

ಮತದಾರರಿಗೆ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚುವ ಅಭ್ಯರ್ಥಿಗಳನ್ನು ಕನಿಷ್ಠ ಐದು ವರ್ಷಗಳ ಕಾಲ ಅನರ್ಹಗೊಳಿಸಬೇಕು ಎಂದು ಕೆ.ಎ.ಪಾಲ್ ಮನವಿಯಲ್ಲಿ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ.. ‘ನಿಮ್ಮಲ್ಲಿ ಹಲವು ಸ್ವಾರಸ್ಯಕರ ಮೊಕದ್ದಮೆಗಳಿವೆ. ಇಂತಹ ಅದ್ಭುತ ಕಲ್ಪನೆಗಳು ನಿಮಗೆ ಹೇಗೆ ಬರುತ್ತವೆ?’ ಎಂದು ಅಸಹನೆ ವ್ಯಕ್ತಪಡಿಸಿದರು. ನಂತರ ಅವರು ಅರ್ಜಿಯನ್ನು ವಜಾ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page