ಹೊಸದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಮೇಲಿನ ಗುಂಪು ಹಲ್ಲೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಈ ಕುರಿತು ಸರ್ವೋಚ್ಛ ನ್ಯಾಯಾಲಯವು ಮಧ್ಯಪ್ರವೇಶ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಲಯವು ಒಪ್ಪಿಕೊಂಡಿದೆ.
ಈ ಕುರಿತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆಗೆ ಒಪ್ಪಿಕೊಂಡಿರುವ ಬಿ. ಆರ್. ಗವಾಯಿ ಮತ್ತು ಜೆ.ಬಿ. ಪರ್ಡಿವಾಲ ಅವರಿದ್ದ ಪೀಠವು ಕೇಂದ್ರ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೂ ನೋಟಿಸ್ ನೀಡಿದೆ.
ಈ ವಿಷಯದ ಕುರಿತು ನೋಟಿಸ್ ನೀಡಲಾಗಿರುವ ರಾಜ್ಯಗಳೆಂದರೆ ಒಡಿಶಾ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶ. ಈ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ.
2018ರ ತೆಹ್ಸೀನ್ ಪೂನಾವಾಲ್ ಪ್ರಕರಣದ ನಂತರವೂ ದೇಶದಲ್ಲಿ ಮುಸ್ಲಿಮರ ಮೇಲಿನ ಗುಂಪು ಹಲ್ಲೆಗಳು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿತ್ತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿ, ʼಈ ಪ್ರಕರಣವನ್ನು ವಿವಿಧ ಹೈಕೋರ್ಟುಗಳ ವ್ಯಾಪ್ತಿಗೆ ನೀಡುವುದು ವ್ಯರ್ಥವಾಗುತ್ತದೆ ಎಂದು ವಾದಿಸಿದರು.
ವಕೀಲರಾದ ಸುಮಿತಾ ಹಜಾರಿಕಾ ಮತ್ತು ರಶ್ಮಿ ಸಿಂಗ್ ಅವರ ಮೂಲಕ ಸಲ್ಲಿಸಲಾಹಿರುವ ಈ ಅರ್ಜಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಹಲ್ಲೆ ಮತ್ತು ಗುಂಪು ಹಲ್ಲೆ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.