ಬೆಂಗಳೂರು,ಅಕ್ಟೋಬರ್.17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಹೆಟರೋ (ಗಂಡು-ಹೆಣ್ಣು) ದಂಪತಿಗಳಿಗೆ ಸಿಗುವ ಯಾವುದೇ ಸೌಲಭ್ಯ – ಸೇವೆಗಳನ್ನು ಗೇ/ಲೆಸ್ಬಿಯನ್ ಹಾಗೂ ಇತರ ಭಿನ್ನ ಲಿಂಗೀಯ ದಂಪತಿಗಳಿಗೆ ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ – ಸುಪ್ರೀಂ ಕೋರ್ಟ್