Monday, January 13, 2025

ಸತ್ಯ | ನ್ಯಾಯ |ಧರ್ಮ

ಸ್ವಾಮಿ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ: ಹೆಚ್.ಪಿ. ಸ್ವರೂಪ್

ಹಾಸನ: ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರವರಿಗೆ ಸಲ್ಲುತ್ತದೆ. ಜೊತೆಗೆ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಕರೆ ನೀಡಿದರು.

ನಗರದ ತಣ್ಣೀರುಹಳ್ಳ ಬಳಿ ಇರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎಸ್.ಡಿ.ಎಂ. ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ – ೨೦೨೫ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪುಸ್ತವನ್ನು ಆತ್ಮೀಯ ಸ್ನೇಹಿತನಾಗಿ ಮಾಡಿಕೊಳ್ಳಬೇಕು. ಪ್ರಸ್ತೂತದಲ್ಲಿ ಟಿವಿ ನೋಡಿದರೇ ನಿದ್ದೆ ಬರುವುದಿಲ್ಲ. ಆದರೇ ಪುಸ್ತಕ ನೋಡಿದರೇ ನಿದ್ದೆ ಬರುತ್ತದೆ. ವಿವೇಕಾನಂದರ ಪುಸ್ತಕ ಓದುವಾಗ ಇನ್ನಷ್ಟು ಓದ ಬೇಕೆನ್ನುವ ಆಸಕ್ತಿ ನನಗೂ ಕೂಡ ಬಂದಿದೆ. ಪ್ರಪಂಚದಲ್ಲಿಯೇ ಸ್ವಾಮಿ ವಿವೇಕಾನಂದರು ವಿದ್ವಾಂಶರು. ಲೋಕ ಸಂಚಾರಿ ಎಂದರೇ ತಪ್ಪಾಗಲಾರದು. ರಾಮಕೃಷ್ಣ ಪರಮವಂಶರ ಪ್ರೇರಣೆಯಿಂದ, ಒಡನಾಟದಿಂದ ಅವರು ಕೂಡ ಆಧ್ಯಾತ್ಮಿಕವಾಗಿ ಚಿಂತಕರಾಗಿದ್ದಾರೆ. ಅಮೇರಿಕಾದ ಚಿಕಾಗೋಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಹೋದ ಬಗೆ ಘಟನೆ ಹೇಳಿದರು. ಲಂಡನ್ ನಲ್ಲಿಯೂ ಕೂಡ ಒಂದು ಪುತ್ಥಳಿಯನ್ನು ಅನಾವರಣ ಮಾಡಿದ್ದು, ವಿವೇಕಾನಂದರ ಮೌಲ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬಿಟ್ಟು ಹೋಗಿರುವ ಸಮಯ ಪಾಲನೆ, ಅವರ ಆದರ್ಶ, ಪ್ರೀತಿ ವಿಶ್ವಾಸ, ತತ್ವ ಸಿದ್ಧಾಂತ ಹಾಗೂ ಯಾವ ರೀತಿ ಬದುಕಬೇಕು ಎನ್ನುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯದ ಮೂಲಕ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ|| ಪ್ರಸನ್ನ ಎನ್. ರಾವ್ ಮತ್ತು ಕಾಲೇಜು ಪ್ರಾಂಶುಪಾಲರಾದ ಶೈಲಜಾ ಪ್ರಸನ್ನ ಮಾತನಾಡಿ, ವಿಶ್ವಕ್ಕೆ ಶಾಂತಿ ಸಂದೇಶ ಕೊಟಟ್ವರು. ಆದ್ಯಾತ್ಮಿಕ ಚಿಂತನೆ ಹೊಂದಿದವರ ಜನ್ಮ ದಿನಾಚರಣೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ವಿವೇಕಾನಂದರ ಮಾತಿನಂತೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತುಗಳನ್ನು ಇಂದಿಗೂ ಕೂಡ ಜೀವಂತವಾಗಿದ್ದು, ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿ ಜೀವನದಲ್ಲಿ ಗುರಿ ಇರಬೇಕು, ಪ್ರತಿನಿತ್ಯ ನನ್ನ ಕರ್ತವ್ಯ ಏನು, ಅದಕ್ಕೆ ಪೂರಕವಾಗಿ ನಾನು ಏನು ಮಾಡಿದ್ದೇನೆ. ನನ್ನ ಗುರಿಗಾಗಿ ನಾನು ಎಷ್ಟು ಶ್ರಮ ವಹಿಸುತ್ತೇವೆ ಎಂಬುದು ಬಹು ಮುಖ್ಯವಾಗಿರುತ್ತದೆ ಎಂದರು.

ಜಿಲ್ಲಾ ಯುವ ಸಬಲೀಕರಣ ಇಲಾಖೆ ಅಧಿಕಾರಿ ಸಿ.ಕೆ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದವರು. ೧೮೯೩ ರಲ್ಲಿ ಚಿಕಾಗೊದಲ್ಲಿ ಮಾಡಿದ ಭಾಷಣ ಒಂದು ಇತಿಹಾಸ, ಜಗತ್ತಿಗೆ ಭ್ರಾತೃತ್ವದ ಮಹತ್ವವನ್ನು ತಿಳಿಸಿದರು. ಯುವ ಜನಾಂಗದ ಶಕ್ತಿಯ ಬಗ್ಗೆ ಪ್ರೇರಣಾ ಪೂರ್ವಕ ಅರಿವನ್ನು ಮೂಡಿಸಿದ್ದಾರೆ. ಸ್ವಾಮಿ ವಿವೇಕಾನಂದರ ಕರೆಯಂತೆ ಸತತ ಪರಿಶ್ರಮದಿಂದ ಗುರಿ ತಮ್ಮ ಮುಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು. ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದರು. ಸ್ವಾಮಿ ವಿವೇಕಾನಂದರು ಯುವ ಜನರಿಗೆ ಸ್ಪೂರ್ತಿಯ ಸಂಕೇತ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದ ಮುಖ್ಯಧ್ವಾರದಲ್ಲಿ ಬೆಳ್ಳಿ ಸಾರೋಟಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವಿಟ್ಟು ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾತಂಡದೊಡನೆ ಕರೆತರಲಾಯಿತು. ಇದೆ ವೇಳೆ ಸ್ವಾಮಿ ವಿವೇಕಾನಂದರ ಕುರಿತು ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕಲಾವಿದರಾದ ಕೆ.ಎನ್. ಶಂಕರಪ್ಪ, ಹೆಚ್.ಎಸ್. ಮಂಜುನಾಥ್ ಇತರರು ಬಿಡಿಸಿದ ವಿವೇಕಾನಂದರ ಚಿತ್ರಕ್ಕೆ ಗಣ್ಯರು ಬಣ್ಣ ತುಂಬಿ ಚಾಲನೆ ನೀಡಿದರು.

ಇದೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಸತ್ಯನಾರಾಯಣ ಸಿಂಗ್, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲರಾದ ಶೈಲಜಾ ಪ್ರಸನ್ನ ಇತರರು ಉಪಸ್ಥಿತರಿದ್ದರು. ಗುರುಬಸವರಾಜು ಕಾರ್ಯಕ್ರಮ ನಿರೂಪಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page