ಬೆಂಗಳೂರು : ಬಿಜೆಪಿಯ 40% ಕಮೀಷನ್ ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ಯುವಕನೊಬ್ಬನನ್ನು ಥಳಿಸಿ ಟಿ ಶರ್ಟ್ ಬಿಚ್ಚಿಸಿದ್ದಲ್ಲದೆ ಅವನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ ಪೋಲೀಸರ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಶುಕ್ರವಾರದಂದು ರಾಜ್ಯದಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಸಿಂಧಗಿಯ ಅಕ್ಷಯ್ ಎಂಬ ಯುವಕನೊಬ್ಬನು ಪೇಸಿಎಂ ಟಿ ಶರ್ಟ್ ಧರಿಸಿ ಹೆಜ್ಜೆ ಹಾಕುವಾಗ ಈ ಘಟನೆ ನಡೆದಿದೆ.
ಘಟನೆ ಕುರಿತು ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಘಟಕವು “ಪೇಸಿಎಂ ಟಿ ಶರ್ಟ್ ಧರಿಸಿದ್ದ ನಮ್ಮ ಕಾರ್ಯಕರ್ತನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಟಿ ಶರ್ಟ್ ಬಿಚ್ಚಿಸಿ ರಸ್ತೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಇವರೇನು ಪೋಲೀಸರೋ ಅಥವಾ ಗೂಂಡಾಗಳೋ? ಹಲ್ಲೆ ನಡೆಸಿದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು.” ಎಂದು ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ : ಮಾಂಸಹಾರ ಮಾಡುವುದು ಕೆಟ್ಟದ್ದಕ್ಕೆ ದಾರಿಯಾಗುತ್ತದೆ ಎಂಬ ಮೋಹನ್ ಭಾಗ್ವತ್ ಅವರ ಮಾತಿಗೆ ಸಿದ್ದರಾಮಯ್ಯನವರ ಪ್ರತಿಕ್ರಿಯೆ: ದೇಶದಲ್ಲಿ 80% ಜನ ಮಾಂಸಹಾರಿಗಳು ಇದ್ದಾರೆ. ಮಾಂಸಹಾರ ಇವತ್ತು ನಿನ್ನೆಯದಲ್ಲ. ಮೋಹನ್ ಭಾಗ್ವತ್ ಹುಟ್ಟುವ ಮೊದಲಿನಿಂದಲೂ ಅಂದರೆ ಪುರಾತನಾ ಕಾಲದಿಂದಲೂ ಜನ ಮಾಂಸಹಾರ ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.