ಬೆಂಗಳೂರು: 2022-23ನೇ ಸಾಲಿನ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಬಹುಶಃ ಮುಚ್ಚಿದಂತಾಗಿದ್ದು, ಅದೃಷ್ಟದ ಮೂಲಕ ಸೆಮಿಫೈನಲ್ ತಲುಪುವ ಸಾಧ್ಯತೆಯೂ ಇದೆ.
ಟಿ-20 ವಿಶ್ವಕಪ್‌ನಲ್ಲಿ ʼಗ್ರೂಪ್ ಬಿʼಯಲ್ಲಿರುವ ಪಾಕಿಸ್ತಾನ ತಂಡವು, ಮೂರು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ, ಎರಡು ಪಂದ್ಯದಲ್ಲಿ ಸೂತಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೇವಲ ಎರಡು ಅಂಕಗಳನ್ನು ಪಡೆದುಕೊಂಡು ಕೊನೆಯ ಎರಡನೇ ಸ್ಥಾನ (5 ನೇ ಸ್ಥಾನ) ಪಡೆದುಕೊಂಡಿದೆ.
ಸೂಪರ್ 12 ಪಂದ್ಯಗಳು ಇನ್ನೆನೂ ಮುಗಿಯುವ ಸಂದರ್ಭ ಬಂದಿದ್ದು, ಪಾಕಿಸ್ತಾನಕ್ಕೆ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಇವೆ, ಹೀಗಾಗಿ ಈ ಎರಡು ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾಗಿದೆ. ಏಕೆಂದರೆ ಈಗಾಗಲೇ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ, ನೆಟ್ ರನ್ ರೇಟ್(nrr) ನಲ್ಲಿ ಭಾರತ ತಂಡಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವುದರಿಂದ, ನೆಟ್ ರನ್ ರೇಟ್ ಮೂಲಕವು ಸೆಮಿಫೈನಲ್ ತಲುಪುವ ಸಾಧ್ಯತೆ ಇದೆ.
ಪಾಕಿಸ್ತಾನ ಸೆಮಿಫೈನಲ್ ತಲುಪುವ ಅವಕಾಶವಿದೆ ಹೇಗೆ!
ಈಗಾಗಲೇ ʼಗ್ರೂಪ್ ಬಿʼಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಭಾರತ ತಂಡ ಉಳಿದ ಒಂದು ಪಂದ್ಯದಲ್ಲಿ ಗೆಲ್ಲಬೇಕು, ಅದೇ ರೀತಿ, ದಕ್ಷಿಣ ಆಫ್ರಿಕಾ ತಂಡದ ಮೇಲೆ ಪಾಕಿಸ್ತಾನ ಜಯಗಳಿಸಬೇಕು. ಹಾಗೆಯೇ ಪಾಕಿಸ್ತಾನ ಹೊರತುಪಡಿಸಿ ನೆದರ್‌ಲ್ಯಾಂಡ್ ವಿರುದ್ಧವು ದಕ್ಷಿಣ ಆಫ್ರಿಕಾ ತಂಡ ಸೋಲಬೇಕು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ 5 ಅಂಕಗಳನ್ನುಮಾತ್ರ ಗಳಿಸಿರುತ್ತದೆ. ಇದೇ ರೀತಿ ಬಾಂಗ್ಲಾದೇಶ, ಜಿಂಬಾಬ್ವೆ ತಂಡಗಳು ಸೋತರೆ ಮಾತ್ರ, ಪಾಕಿಸ್ತಾನಕ್ಕೆ ಸೆಮಿಪೈನಲ್ ಹಾದಿ ತರೆದುಕೊಳ್ಳಬಹುದು.
ಪಾಕಿಸ್ತಾನ ತಂಡ ಮುಗ್ಗರಿಸಿದ್ದು ಎಲ್ಲಿ?
ಪಾಕಿಸ್ತಾನ ತಂಡ ಭಾರತ ತಂಡದ ವಿರುದ್ಧ ಸೋತ ನಂತರ, ಜಿಂಬಾಬ್ವೆ ವಿರುದ್ಧ ಒಂದು ರನ್‌ನಲ್ಲಿ ಸೋಲು ಕಂಡಿದ್ದು ಪಾಕಿಸ್ತಾನ ತಂಡಕ್ಕೆ ಮುಳುವಾಯಿತು. ಇದು ಪಾಕಿಸ್ತಾನ ತಂಡದ ಸೆಮಿಫೈನಲ್ ಕನಸನ್ನು ನಿರಾಸೆಗೊಳಿಸುವಂತೆ ಮಾಡಿತು.