ಬೆಂಗಳೂರು: ಭಾರತದಾದ್ಯಂತ 5 ವರ್ಷಗಳ ಕಾಲ ಪಾಪ್ಯುಲರ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರವು ದೇಶದಲ್ಲಿ ಶಾಂತಿ ಕದಡುತ್ತಿರುವ ಆರ್‌ಎಸ್‌ಎಸ್ ಸಂಘಪರಿವಾರ ಮತ್ತು ಇತರರ ಮೇಲು ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರವು ದೇಶದಾದ್ಯಂತ ಪಿಎಫ್‌ಐ ಸಂಘಟನೆ ನಿಷೇಧ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ಶಾಂತಿ ಕದಡುವ ಅಥವಾ ಕಾನೂನಿಗೆ ವಿರುದ್ಧವಾಗಿರುವ ಯಾರೊಬ್ಬರ ವಿರುದ್ಧ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಆರ್‌ಎಸ್‌ಎಸ್ ಮತ್ತು ಇತರರು ಇದೇ ರೀತಿ ಶಾಂತಿ ಕದಡುತ್ತಿದ್ದಾರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ಯಾವುದೇ ಸಂಘಟನೆಗಳು ಇದ್ದರು ಅವುಗಳನ್ನು ನಿಷೇಧಿಸಬೇಕು ಎಂದು ಹೇಳಿದರು.