Home ಬ್ರೇಕಿಂಗ್ ಸುದ್ದಿ ಹಾಸನ ಕಸದ ಬಗ್ಗೆ ಕಾಳಜಿ ವಹಿಸುವುದು ಮತ್ತು ಇ-ತ್ಯಾಜ್ಯ ವಸ್ತುಗಳ ಮರುಬಳಕೆ ನಮ್ಮ ಉದ್ದೇಶ – ಕ್ಲಿಯರಿನ್ ಸಂಸ್ಥೆಯ ಚಂದ್ರಶೇಖರ್

ಕಸದ ಬಗ್ಗೆ ಕಾಳಜಿ ವಹಿಸುವುದು ಮತ್ತು ಇ-ತ್ಯಾಜ್ಯ ವಸ್ತುಗಳ ಮರುಬಳಕೆ ನಮ್ಮ ಉದ್ದೇಶ – ಕ್ಲಿಯರಿನ್ ಸಂಸ್ಥೆಯ ಚಂದ್ರಶೇಖರ್

ಹಾಸನ : ತಂತ್ರಜ್ಞಾನದ   ಓಟ ವೇಗ ಪಡೆದಂತೆ, ಅದರಿಂದ ಸೃಷ್ಟಿಯಾಗುವ ಸಮಸ್ಯೆಗಳೂ ಹೆಚ್ಚುತ್ತಿವೆ. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಕೆಲಸವನ್ನು ಸುಲಭಗೊಳಿಸಿವೆ. ಆದರೆ, ಇವುಗಳ ಅತಿಯಾದ ಬಳಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಅರಿವಿಲ್ಲದಂತೆ ಭೂಮಿಯ ಒಡಲನ್ನು ಮಲಿನಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಎಲೆಕ್ಟ್ರಾನಿಕ್ ತ್ಯಾಜ್ಯವು ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ತ್ಯಾಜ್ಯ ಹರಿವು ಎಂದು ನಮಗೆ ತಿಳಿದಿದೆ. ತಂತ್ರಜ್ಞಾನದ  ತ್ವರಿತ ಪ್ರಗತಿ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೇಲಿನ ಹೆಚ್ಚುತ್ತಿರುವ ಅವಲಂಬನೆಯೊಂದಿಗೆ, ಎಲೆಕ್ಟ್ರಾನಿಕ್ ತ್ಯಾಜ್ಯದ ವಿಲೇವಾರಿ ಗಮನಾರ್ಹ ಪರಿಸರ ಕಾಳಜಿಯಾಗಿದೆ. ಇದೆ ಕಾಳಿಜಿ ಹಾಸನದಲ್ಲಿಯೂ ಪ್ರಾರಂಭವಾಗಿದೆ ಹೌದು ನಗರದ ಎಂ.ಜಿ. ರಸ್ತೆ ಬಳಿ ಇರುವ ಪರಿಸರ ಆಧಾರಿತ ಕ್ಲಿಯರಿನ್ ಸಂಸ್ಥೆಯಿಂದ ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣಾ ಘಟಕವು ಪ್ರಾರಂಭವಾಗಿದೆ. ಈ ಸಂಸ್ಥೆಯ ಉದ್ದೇಶ ಕಸದ ಬಗ್ಗೆ ಕಾಳಜಿ ವಹಿಸುವುದು ಮತ್ತು ಇ-ತ್ಯಾಜ್ಯ ವಸ್ತುಗಳನ್ನು ಮರುಬಳಕೆಗೆ ಬಳಸುವುದೆ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಕ್ಲಿಯರಿನ್ ಸಂಸ್ಥೆಯ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾತನಾಡಿ, ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಣೆಗೆ ನಮ್ಮ ಸಂಸ್ಥೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ಕಸದ ಬಗ್ಗೆ ಜನರಲ್ಲಿ ಜಾಗೃತಿ ಮುಖ್ಯ ಎಂದು ತಿಳಿಸಿದರು. ಮನೆಗಳಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲು ಕ್ಲಿಯರಿನ್ ಸಂಸ್ಥೆಯಿಂದ ರಿಸೈಕಲ್ ಬ್ಯಾಗನ್ನು ಸಾರ್ವಜನಿಕರಿಗೆ ಇದೆ ವೇಳೆ ವಿತರಿಸಲಾಯಿತು ಹಾಸನದ ಘನತ್ಯಾಜ್ಯ ನಿರ್ವಹಣೆ ಗೆ ಉದ್ಯಮ ರೀತಿಯಲ್ಲಿ ಪರಿಹಾದ ಪ್ರಯೋಗಕ್ಕೆ ಸ್ಥಾಪಿತವಾಗಿರುವ ಕ್ಲಿಯರಿನ್ ಸಂಸ್ಥೆಯ ಇ-ವೇಸ್ಟ್ ಕಲೆಕ್ಷನ್ ಕೇಂದ್ರದ ಉದ್ಘಾಟನಾ ಮಾರಂಭದಲ್ಲಿ ಗ್ಲೋಬಲ್ ವಾರ್ಮಿಂಗ್ ಮತ್ತು ಬಿಸಿ ಅಲೆ ಕುರಿತು ಬಿಜಿವಿಎಸ್ ಶಿಕ್ಷಣ ಉಪಸಮಿತಿ ಸಂಚಾಲಕಿ ಕವಿತ ಮಾದರಿ ತಯಾರಿಸಿ ವಿವರಣೆ ನೀಡಿದರು.

ಇ-ತ್ಯಾಜ್ಯ ಸಂಗ್ರಹಣಾ ಘಟಕದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಉದ್ದೇಶಿಸಿ ಮಾತನಾಡಿದ ಶಾಸಕರು, ದೈನಂದಿನ ಬದುಕಿನಲ್ಲಿ ಕಸದ ಉತ್ಪಾದನೆ ಮಿತಿಮೀರಿ ಬೆಳೆಯುತ್ತಿದೆ. ತಂತ್ರಜ್ಞಾನ  ಬೆಳೆದಂತೆ ಮನುಷ್ಯ ಬಳಸಿ ಬಿಸಾಡುವ ಎಲೆಕ್ಟ್ರಾನಿಕ್ ತ್ಯಾಜ್ಯಗಳ ಉತ್ಪಾದನೆ ಕೂಡ ನಮ್ಮ ಪರಿಸರಕ್ಕೆ ದೊಡ್ಡ ಮಟ್ಟಿನ ಗಂಡಾಂತರವನ್ನು ತಂದೊಡ್ಡಿದೆ. ಪರಿಸರಕ್ಕೆ ಮಾರಕವಾಗಬಲ್ಲ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಶೇಖರಿಸಿ ಸಮರ್ಪಕವಾಗಿ ನಿರ್ವಹಿಸಿದರೆ ಪರಿಸರಕ್ಕೆ ಒಂದು ದೊಡ್ಡ ಕೊಡುಗೆ ನೀಡಿದಂತೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಹಾಸನ ಕ್ಲಬ್ಬಿನ ಅಧ್ಯಕ್ಷರಾದ ಶ್ರೀನಾಥ್, ರೋಟರಿ ಗೌರ್ನರ್ ಪಾಲಕ್ಷ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಧನ್ಪಾಲ್, ಎಫ್ ಕೆಸಿಸಿಐ ನಿರ್ದೇಶಕರಾದ ಹೆಚ್.ಎ. ಕಿರಣ್, ಜೆಸಿಐ ಅಧ್ಯಕ್ಷರಾದ ಅಡವಿಗೌಡ, ಗಿರೀಶ್, ಮಲೆನಾಡು ತಾಂತ್ರಿಕ ಸಂಸ್ಥೆಯ ಕಾರ್ಯದರ್ಶಿಯಾದ ಜಗದೀಶ್ ಚೌಡಳ್ಳಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ್, ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಗಿರಿಜಾಂಬಿಕ, ಹಾಸನ ಆಕಾಶವಾಣಿಯ ಲೋಕೇಶ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version