Home ದೇಶ ಅಧಿವೇಶನದ ಮೊದಲ ದಿನವೇ ಸಚಿವ ಕಿರಣ್ ರಿಜುಜು ಮತ್ತು ಸಂಸದ ಜೈರಾಮ್ ರಮೇಶ್ ನಡುವೆ ವಾಕ್ಸಮರ

ಅಧಿವೇಶನದ ಮೊದಲ ದಿನವೇ ಸಚಿವ ಕಿರಣ್ ರಿಜುಜು ಮತ್ತು ಸಂಸದ ಜೈರಾಮ್ ರಮೇಶ್ ನಡುವೆ ವಾಕ್ಸಮರ

0

ಹೊಸದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು (ಸೋಮವಾರ) ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಶಾಸಕ ಭರ್ತ್ರಹರಿ ಮಹತಾಬ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಸೇರಿದಂತೆ ಸಂಸತ್ತಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಜೂನ್ 26ರಂದು ಸ್ಪೀಕರ್ ಚುನಾವಣೆ ನಡೆಯಲಿದೆ.

ವಿಧಾನಸಭೆಯ ಮೊದಲ ದಿನವೇ ಪ್ರತಿಪಕ್ಷಗಳು NEET-UG ಮತ್ತು UGC-NET ಅಕ್ರಮಗಳು, ಪ್ರೊಟೆಂ ನೇಮಕಾತಿ ವಿವಾದ ಮತ್ತು ಸ್ಪೀಕರ್ ಚುನಾವಣೆಯಂತಹ ವಿಷಯಗಳಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿವೆ.

ಸಂಸದೀಯ ವ್ಯವಹಾರಗಳ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಕಿರಣ್ ರಿಜುಜು ಸೋಮವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಮಾಧ್ಯಮ X ನಲ್ಲಿ 18ನೇ ಲೋಕಸಭೆಯ ಸದಸ್ಯರನ್ನು ಸ್ವಾಗತಿಸುತ್ತಾ ಟ್ವೀಟ್ ಮಾಡಿ “ಹೊಸದಾಗಿ ಆಯ್ಕೆಯಾದ ಸಂಸದರಿಗೆ ಸ್ವಾಗತ. ಲೋಕಸಭೆಯ ಮೊದಲ ಅಧಿವೇಶನ ಇಂದು (ಜೂನ್ 24) ನಡೆಯಲಿದೆ. ಸಂಸದೀಯ ವ್ಯವಹಾರಗಳ ಸಚಿವನಾಗಿ ನಾನು ಯಾವಾಗಲೂ ಸದಸ್ಯರಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ. ಸಭೆಯನ್ನು ಸಮರ್ಥವಾಗಿ ನಡೆಸಲು ಸದಸ್ಯರಿಂದ ಸಮನ್ವಯವನ್ನು ನಿರೀಕ್ಷಿಸಲಾಗಿದೆ” ಎಂದು ಬರೆದಿದ್ದರು.

ಈ ಪೋಸ್ಟ್‌ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ರಿಪ್ಲೈ ಮಾಡಿ ವಾಗ್ದಾಳಿ ನಡೆಸಿದರು. ಮಾತಿಗಿಂತ ಕ್ರಿಯೆ ಮುಖ್ಯ, ಮಾತುಗಳನ್ನು ಆಚರಣೆಗೆ ತರಬೇಕು ಎಂದು ತಿರುಗೇಟು ನೀಡಿದರು.

ಜೈರಾಮ್ ರಮೇಶ್ ಅವರ ಟ್ವೀಟ್‌ಗೆ ಕೇಂದ್ರ ಸಚಿವ ರಿಜಿಜು ಉತ್ತರಿಸಿ, “ನಿಮ್ಮ ಸಕಾರಾತ್ಮಕ ಕೊಡುಗೆಯು ಸದನಕ್ಕೆ ದೊಡ್ಡ ಆಸ್ತಿಯಾಗಿದೆ. ಜೈರಾಮ್ ರಮೇಶ್ ಅವರೇ ನೀವು ಬುದ್ಧಿವಂತ ಸದಸ್ಯರು. ನೀವು ಸಕಾರಾತ್ಮಕವಾಗಿ ಕೊಡುಗೆ ನೀಡಿದರೆ ನೀವು ಸದನಕ್ಕೆ ಅಮೂಲ್ಯ ಆಸ್ತಿಯಾಗುತ್ತೀರಿ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ದೇಶ ಸೇವೆ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿರಬೇಕು. ನಾವು ಭಾರತದ ಶ್ರೇಷ್ಠ ಸಂಸದೀಯ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಿಮ್ಮ ಸಹಕಾರವನ್ನು ಎದುರುನೋಡುತ್ತಿದ್ದೇನೆ” ಎಂದು ಹೇಳಿದರು.

ಆದರೆ ಈ ಮಾತುಕತೆ ಇಲ್ಲಿಗೆ ನಿಲ್ಲುವುದಿಲ್ಲ. ಕೇಂದ್ರ ಸಚಿವರ ಟ್ವೀಟ್ ಗೆ ಮತ್ತೊಮ್ಮೆ ಜೈರಾಮ್ ರಮೇಶ್ ಕೌಂಟರ್ ಕೊಟ್ಟಿದ್ದಾರೆ. NEET ಪರೀಕ್ಷೆಯನ್ನು ನಡೆಸುವಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ವೈಫಲ್ಯವನ್ನು ಉಲ್ಲೇಖಿಸುತ್ತಾ… “ಧನ್ಯವಾದಗಳು ಸಚಿವರೇ. ಇದು ನನ್ನ ಬುದ್ಧಿವಂತಿಕೆಗೆ ಸಿಕ್ಕ ನಿಮ್ಮ ಪ್ರಮಾಣಪತ್ರ ವೇ ಹೊರತು NTA ಗ್ರೇಡಿಂಗ್ ಅಲ್ಲ ಎಂದು ನಾನು ಭಾವಿಸುತ್ತೇನೆ.. . ಇದಕ್ಕೆ ಏನಾದರೂ ಗ್ರೇಸ್ ಮಾರ್ಕ್ಸ್ ಇದೆಯೇ?” ಅವರು ಅವರು ಸಚಿವರನ್ನು ಕುಟುಕಿದರು.

You cannot copy content of this page

Exit mobile version